ಜಿಲ್ಲೆ ರೋಚಕ ಸತ್ಯಕಥೆಗಳ ಆಗರ

ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ಅಪಾರ•ಒಗ್ಗಟ್ಟು-ಎದೆಗಾರಿಕೆಯಲ್ಲಿ ದೇಶಕ್ಕೆ ಮಾದರಿ

Team Udayavani, Aug 15, 2019, 3:24 PM IST

15-Agust-34

ಉತ್ತರ ಕನ್ನಡದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು.

ಜೀಯು ಹೊನ್ನಾವರ
ಹೊನ್ನಾವರ:
ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಒಗ್ಗಟ್ಟು, ಎದೆಗಾರಿಕೆ ಹೋರಾಟದಲ್ಲಿ ಜಿಲ್ಲೆ ದೇಶಕ್ಕೆ ಮಾದರಿಯಾಗಿತ್ತು. ವಯಸ್ಸು, ಜಾತಿ, ಧರ್ಮ ಎಲ್ಲವನ್ನೂ ಮರೆತು ಒಂದಾಗಿ ಹೋರಾಡಿದ ಜಿಲ್ಲೆ ಉತ್ತರ ಕನ್ನಡ.

ಬ್ರಿಟಿಷ್‌ ಆಡಳಿತದ ಅಧಿಕಾರಿಗಳು ಜಿಲ್ಲೆಯ ಯಾವ ಭಾಗಕ್ಕೆ ಹೋಗುವುದಿದ್ದರೂ ತಕ್ಷಣ ಅಲ್ಲಿ ಎತ್ತಿನಗಾಡಿ ಒದಗಬೇಕಿತ್ತು. ಎಷ್ಟೇ ಕೆಲಸವಿದ್ದರೂ ಗಾಡಿಯವ ಬರಬೇಕಿತ್ತು. ಶಿರಸಿ ಚನ್ನಪಟ್ಟಣ ಬಜಾರದಲ್ಲಿ ಒಂದು ದಿನ ಗಾಡಿ ಹೋಗುತ್ತಿತ್ತು. ತಕ್ಷಣ ತಡೆದ ಪೊಲೀಸರು ಗಾಡಿಯವನನ್ನು ಕಾರವಾರಕ್ಕೆ ಕಾಗದ ಪತ್ರ ಸಾಗಿಸಿಕೊಡು ಎಂದು ಕರೆದರು. ಆತ ತನ್ನ ಹೆಂಡತಿಗೆ ಅನಾರೋಗ್ಯ ಔಷಧ ಒಯ್ದುಕೊಟ್ಟು ಬರುತ್ತೇನೆ ಎಂದರೂ ಕೇಳದ ಪೊಲೀಸರು ಎತ್ತನ್ನು ಥಳಿಸಿದರು. ಗಾಡಿಯವನನ್ನು ಕೆಳಗಿಳಿಸಿ ಥಳಿಸತೊಡಗಿದರು. ಆತ ಗೋಗರೆಯುತ್ತಿದ್ದ. ಅಡಿಕೆಮಂಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ಅಕದಾಸ ಗಣಪತಿ ಭಟ್ಟರು ತಕ್ಷಣ ಇಳಿದುಬಂದು ಬಾರುಕೋಲು ಕಸಿದುಕೊಂಡು ಪೊಲೀಸರಿಗೆ ಬಾರಿಸಿ, ಅವರನ್ನು ಓಡಿಸಿದರು. ಗಣಪತಿ ಭಟ್ಟರಿಗೆ ಜೈಲಾಯಿತು. ಅವರ ಸಹೋದರ ನೌಕರಿ ಹೋಯಿತು. ಆ ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತುತ್ತಿರಲಿಲ್ಲ. ಅದೇ ಗಣಪತಿ ಭಟ್ಟರು ಸ್ವತಃ ವಿಧವೆಯನ್ನು ವಿವಾಹವಾಗಿ ನೂರಾರು ವಿಧವಾ ವಿವಾಹ ಮಾಡಿಸಿದರು. ಜಿ.ಆರ್‌. ಪಾಂಡೇಶ್ವರ ಅವರು ಅಕದಾಸ ಗಣಪತಿ ಭಟ್ಟರಿಂದ ಸ್ಫೂರ್ತಿ ಪಡೆದು ವಿಧವಾ ವಿವಾಹ ಮಾಡಿಕೊಂಡಿದ್ದರು.

ಜಿಲ್ಲೆಯ ಸ್ವಾತಂತ್ರ್ಯ ಯೋಧರ ಧೈರ್ಯವನ್ನು ಸರ್ದಾರ ವಲ್ಲಭಬಾಯಿ ಪಟೇಲ ಪ್ರಶಂಸಿಸಿದ್ದರು. ಬ್ರಿಟಿಷ್‌ ಪಾರ್ಲಿಮೆಂಟನಲ್ಲಿಯೂ ಈ ವಿಷಯ ಪ್ರಸ್ತಾಪಿತವಾಗಿತ್ತು. ಹೋರಾಟದ ಸ್ಥಿತಿಗತಿ ತಿಳಿಯಲು ಬಂದ ಬ್ರಿಟೀಷರು ಇಲ್ಲಿಯ ದೇಶಭಕ್ತಿಕಂಡು ಅಚ್ಚರಿಗೊಂಡಿದ್ದರು. ಜೈಲಿಗೆ ಹೋದವರ ಸ್ವತ್ತನ್ನು ರಕ್ಷಿಸಿದ ಹಸ್ಲರ ದೇವಿ ಕಥೆ ಕೇಳಿ ಗಾಂಧೀಜಿ ಸಿದ್ದಾಪುರಕ್ಕೆ ಬಂದಾಗ ಅವಳ ಕೊರಳಿಗೆ ಖಾದಿಮಾಲೆಯನ್ನು ತೊಡಿಸಿ ಇಂತವರಿಂದಲೇ ಜಗತ್ತು ನಡೆದಿದೆ ಎಂದು ಹೇಳಿದ್ದು ಎಲ್ಲರಿಗೆ ತಿಳಿದ ಕಥೆ. ಸಿದ್ದಾಪುರದ ತಿಮ್ಮಪ್ಪ ನಾಯಕರು ತಮ್ಮ ಶಿಕ್ಷಕ ವೃತ್ತಿಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು. ಸ್ವಾತಂತ್ರ್ಯಾನಂತರ ಗಾಂಧೀಜಿಯವರಲ್ಲಿ ಕರ್ನಾಟಕಕ್ಕೆ ಸಂದೇಶ ಕೊಡಿ ಎಂದಾಗ ತಿಮ್ಮಪ್ಪ ನಾಯಕರೇ ನಿಮಗೆ ಸಂದೇಶ ಎಂದಿದ್ದರು. ಸ್ವಾತಂತ್ರ್ಯ ನಂತರವೂ ಬಹುಕಾಲ ಜೀವಿಸಿ, ಮಾದನಗೇರಿಯಲ್ಲಿ ಕುಟೀರ ಕಟ್ಟಿಕೊಡಿದ್ದ ತಿಮ್ಮಪ್ಪ ನಾಯಕರು ಖಾದಿ ಸೇವಾ ಸಂಸ್ಥೆಗಳನ್ನು ಕಟ್ಟಿದರು. ಸಾವಿರಾರು ದಲಿತರ ಸೇವೆ ಮಾಡಿದರು.

31ದಿನ ಉಪವಾಸ ಸತ್ಯಾಗ್ರಹ ಮಾಡಿದ ಮಹಿಳೆಯರ ಮೇಲೆ ಬ್ರಿಟಿಷ್‌ ಗೂಂಡಾಗಳು ಅತ್ಯಾಚಾರಕ್ಕೆ ಯತ್ನಿಸಿದಾಗ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇಂಥಹ ಸಂದರ್ಭವನ್ನು ಎದುರಿಸಲು ಚೂರಿಯನ್ನು ಇಟ್ಟುಕೊಳ್ಳುತ್ತಿದ್ದರು. ರೈತರ ಭೂಮಿಮಾತ್ರವಲ್ಲ ಮನೆಯ ಪಾತ್ರೆಪಗಡೆಗಳನ್ನು ಜಪ್ತುಮಾಡಿದ್ದರು. ಆಸ್ತಿಕಳೆದುಕೊಂಡು ಚಹ ಅಂಗಡಿ ಇಟ್ಟುಕೊಂಡವರ ಕಪ್ಪು ಬಸಿ, ಕಿಟ್ಲಿ, ಎಮ್ಮೆಯನ್ನು ಜಫ್ತುಮಾಡಲಾಗಿತ್ತು. ಅಂಕೋಲಾದಲ್ಲಿ 250 ಕುಟುಂಬದ ಆಸ್ತಿ ಜಪ್ತಾಯಿತು. 248 ಜನರ ಆಸ್ತಿ ಪಾರ್‌ಪಿಟ್ ಆಯಿತು. 223ಜನ ಪುರುಷರು, 10ಮಹಿಳೆಯರು 2-6 ವರ್ಷ ಜೈಲಿಗೆ ಹೋದರು. ಪೊಲೀಸರ ಹಿಂಸೆಯಿಂದ 19 ಮಹಿಳೆಯರ ಕೈಕಾಲು ಮುರಿಯಿತು, 160 ಜನರಿಗೆ ಆರು ವರ್ಷ ಶಿಕ್ಷೆಯಾಯಿತು. 12ಮಹಿಳೆಯರು ಜೈಲಿಗೆ ಹೋದರು. 25 ಹೆಂಗಸರಿಗೂ ಗಾಯಗಳಾಯಿತು. ಕಟ್ಟಿಗೆ ಹೊರೆಯಲ್ಲಿ ಕರಪತ್ರಗಳ್ನು ಬಚ್ಚಿಟ್ಟುಕೊಂಡು ಕೂಲಿಕಾರ ಮಹಿಳೆಯರು ಮನೆಮನೆಗೆ ಮುಟ್ಟಿಸುತ್ತಿದ್ದರು. ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರಾದ ಸರ್ದಾರ ವೆಂಕಟರಾಮಯ್ಯ, ಶಂಕರರಾವ್‌ ಗುಲ್ವಾಡಿ, ಆರ್‌.ಆರ್‌. ದಿವಾಕರ, ದ.ಪ. ಕರ್ಮರ್ಕರ್‌, ಮಹಾದೇವಿತಾಯಿ ದೊಡ್ಮನೆ, ಸ.ಪ. ಗಾಂವ್ಕರ್‌, ಮೊದಲಾದವರಿಗೆ ಜಿಲ್ಲೆ ಕರ್ಮಭೂಮಿಯಾಗಿತ್ತು. ಶಿರಳಿಗೆ ಮಂಜುನಾಥ ರಾಮಚಂದ್ರ ಹೆಗಡೆ ಇವರ 5ಜನ ಸಹೋದರರನ್ನು, ಒಬ್ಬ ಸಹೋದರಿಯನ್ನು, ತಂದೆಯನ್ನು ಜೈಲಿಗೆ ಕಳಿಸಿದ್ದರು. ಇವರ 25 ಎಕರೆ ಭೂಮಿಯನ್ನು ಜಪ್ತುಮಾಡಿ 300ರೂಪಾಯಿಗೆ ಲಿಲಾವು ಮಾಡಿದ್ದರು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅವರ ಸಂದರ್ಶನ ಮಾಡಿದಾಗ ದೇಶದ ಭ್ರಷ್ಟಾಚಾರ ಕಂಡು ನಾವು ಇದಕ್ಕಾಗಿ ಹೋರಾಡಿರಲಿಲ್ಲ ಎಂದಿದ್ದರು. ಗಾಂಧೀಜಿ ಕರೆನೀಡಿದ ಜಂಗಲ್ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಸಹಿತ ಎಲ್ಲ ಹೋರಾಟದಲ್ಲಿ ಜಿಲ್ಲೆಯ ಜನ ಪಾಲ್ಗೊಂಡಿದ್ದಾರೆ.

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.