ಕರಿಕಾನಮ್ಮನ ಬೆಟ್ಟದಲ್ಲಿ ಬೆಳದಿಂಗಳ ಗಾನಸುಧೆ

14ರಂದು ಆಯೋಜನೆ ಪಂ| ಬಿ.ಎಸ್‌. ಮಠ-ವಿದುಷಿ ಅಕ್ಕಮಹಾದೇವಿ ಅವರಿಗೆ ನಾದ ಮಾಧವ ಪ್ರಶಸ್ತಿ

Team Udayavani, Dec 8, 2019, 6:18 PM IST

8-December-27

ಜೀಯು, ಹೊನ್ನಾವರ
ಹೊನ್ನಾವರ:
ಹಾಲು ಚೆಲ್ಲಿದಂತೆ ಪ್ರಕೃತಿಯ ಮೇಲೆಲ್ಲಾ ಹಬ್ಬಿಕೊಳ್ಳುವ ಬೆಳದಿಂಗಳ ರಾತ್ರಿಯಲ್ಲಿ ಗದ್ದಲದಿಂದ 15ಕಿಮೀ ದೂರ ಬೆಟ್ಟದ ಮೇಲೆ ಸಂಗೀತ ಕೇಳುವ ಖುಷಿಯೇ ಬೇರೆ. ಬೆಳದಿಂಗಳು ಹುಟ್ಟಿಸುವ ಮಂದ ಉನ್ಮಾದದ ಜೊತೆ ಸಂಗೀತದ ನಾದ ಮೇಲೈಸುತ್ತಿದೆ. ಇಂತಹ ಒಂದು ಅಪೂರ್ವ ಕಾರ್ಯಕ್ರಮವನ್ನು ಡಿ.14 ರಂದು ಮುಸ್ಸಂಜೆಯಿಂದ ಮುಂಜಾನೆಯವರೆಗೆ ಕರಿಕಾನಮ್ಮನ ಬೆಟ್ಟದಲ್ಲಿ ಏರ್ಪಡಿಸಲಾಗಿದೆ.

ಹೆಸರಾಂತ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಸಂಯೋಜನೆಯಲ್ಲಿ ಕಳೆದ 21ವರ್ಷದಿಂದ ನಡೆಯುತ್ತಿರುವ ದೇಶ ಹಾಗೂ ವಿದೇಶದ ಸಂಗೀತ ಪ್ರಿಯರನ್ನು ಆಕರ್ಷಿಸುತ್ತಿರುವ ಈ ನಾದ ಸಮಾರಾಧನೆಗೆ ಕಲಾಮಂಡಲ, ಎಸ್‌ ಕೆಪಿ ಮ್ಯೂಸಿಕ್‌ ಟ್ರಸ್ಟ್‌, ಕರಿಕಾನಮ್ಮ ದೇವಸ್ಥಾನದ ಆಡಳಿತ ಮಂಡಳಿ ಕೈಜೋಡಿಸುತ್ತದೆ.

ನಾದ ಮಾಧವ ಪ್ರಶಸ್ತಿಯನ್ನು ಪಂ. ಬಿ.ಎಸ್‌. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಹಿಂದುಸ್ಥಾನಿ ವಾಯೋಲಿನ್‌ ವಾದಕ ಈ ದಂಪತಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್‌ ಅವಿನಾಶ ಹೆಬ್ಟಾರ ಸಂಸ್ಮರಣ ಯುವ ಪುರಸ್ಕಾರವನ್ನು ಸಾರಂಗಿ ವಾದಕ ಸಫìರಾಜ ಖಾನ್‌ ಬೆಂಗಳೂರು, ಗಾಯಕ ವಿನಾಯಕ ಹುಗ್ಗಣ್ಣವರ್‌ ಮಂಬೈ, ತಬಲಾ ವಾದಕಿ ವಿಜೇತಾ ಹೆಗಡೆಗೆ ಪ್ರದಾನ ಮಾಡಲಾಗುವುದು.

ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್‌ ಆಶೀರ್ವಚನ ನೀಡುವರು. ಡಾ| ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು. ಪಂ| ಬಿ.ಎಸ್‌. ಮಠ ಮತ್ತು ವಿದುಷಿ ಅಕ್ಕಮಹಾದೇವಿ ಮಠ ಅವರ ವಾಯೋಲಿನ್‌ ಜುಗಲ್ಬಂದಿ. ಪಂ| ಕೃಷ್ಣ ಭಟ್‌ ಮುಂಬೈ, ವಿದುಷಿ ಶಾರದಾ ಭಟ್‌ ಕಟ್ಟಿಗೆ ಮೈಸೂರು, ಶಿವಾನಂದ ಭಟ್‌ ಹಡಿನಬಾಳ, ಶ್ರೀಧರ ಹೆಗಡೆ ಕಲ್ಭಾಗ, ಡಾ| ಶಿಲ್ಪಾ ಹೆಗಡೆ ಮೈಸೂರು, ರಾಘವೇಂದ್ರ ಉಪಾಧ್ಯಾಯ ಮೂಡಬಿದ್ರಿ ಇವರ ಹಿಂದುಸ್ಥಾನಿ ಗಾಯನ ಮತ್ತು ಉಸ್ತಾದ್‌ ರಫಿಕ್‌ ಖಾನ್‌ ಮತ್ತು ಉಸ್ತಾದ್‌ ಶಫಿಕ್‌ ಖಾನ್‌ರ ಸಿತಾರ್‌ ಜುಗಲ್ಬಂದಿ, ಸರ್ಫರಾಜ ಖಾನ್‌ ಮತ್ತು ವಿನಾಯಕ ಹುಗ್ಗಣ್ಣವರ ಸಾರಂಗಿ ಮತ್ತು ಗಾಯನ ಜುಗಲ್ಬಂದಿ, ಕಿರಣ ಮಗೆಗಾರು ಹಿಂದುಸ್ಥಾನಿ ಬಾನ್ಸುರಿ, ಶ್ರೀನಿಧಿ ಶಿರೂರು ಕರ್ನಾಟಕ ಬಾನ್ಸುರಿ ವಾದನವಿದೆ. ಇವರಿಗೆ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್‌ ಹೆಗಡೆ ಹೆಬ್ಬಲಸು, ಸತೀಶ ಭಟ್‌ ಹೆಗ್ಗಾರ ಸಂವಾದಿನಿ ಸಾಥ್‌ ನೀಡುವರು.

ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಭೀಮಾಶಂಕರ ಬಿದನೂರ್‌ ಮೈಸೂರು, ಪರಮೇಶ್ವರ ಹೆಗಡೆ ಮೈಸೂರು, ವಿಜೇತಾ ಹೆಗಡೆ ಪುಣೆ,
ಮಯಾಂಕ ಬೇಡೇಕರ್‌ ಗೋವ, ಮಧು ಕುಡಾಲ್ಕಾರ್‌ ಅಂಕೋಲಾ, ಗಣಪತಿ ಹೆಗಡೆ ಹರಿಕೇರಿ, ಶರತ್‌ ಹೆಗಡೆ ಬೆಂಗಳೂರು ತಬಲಾ ಸಾಥ್‌ ನೀಡುವರು.

ತಂಪಾದ ವಾತಾವರಣ, ಉತ್ತಮ ಆತಿಥ್ಯದ ಜೊತೆಯಲ್ಲಿ ಸಂಗೀತದಲ್ಲಿ, ಪ್ರಕೃತಿಯ ಮಂದ ಬೆಳಕಿನಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮ ಬಾಳಿಗೆ ಸಾಂತ್ವನ ನೀಡುವ, ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ. ಕಷ್ಟಪಟ್ಟು ಏರ್ಪಡಿಸುತ್ತೇವೆ, ಇಷ್ಟಪಟ್ಟವರೆಲ್ಲಾ ಬನ್ನಿ ಎಂದು ಗೋಪಣ್ಣ ಕರೆದಿದ್ದಾರೆ.

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.