ಆಯುಷ್-ಮಂಗನ ಕಾಯಿಲೆಗೆ ಕಟ್ಟಡ ಕಲ್ಪಿಸಿ
Team Udayavani, Nov 14, 2019, 5:39 PM IST
ಜಿ.ಯು. ಹೊನ್ನಾವರ
ಹೊನ್ನಾವರ: ಒಂದು ಕಾಲದಲ್ಲಿ ಬಸ್ರೂರು ರಾಘವೇಂದ್ರ ರಾಯರಿಂದ ದಾನ ಪಡೆದು ಕಟ್ಟಿಸಿದ ಮುನ್ಸಿಪಾಲ್ಟಿ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿ, ತಾಲೂಕು ಆಸ್ಪತ್ರೆಯಾಗಿ ನೂರು ಹಾಸಿಗೆ, ಹತ್ತಕ್ಕೂ ಹೆಚ್ಚು ವೈದ್ಯರನ್ನು ಹೊಂದಿರುವುದರಿಂದ ಬರುವ ರೋಗಿಗಳ ಪ್ರಮಾಣ ಹೆಚ್ಚಿದೆ. ಕಾರಣ ಸೌಲಭ್ಯಗಳು ಸಾಲುತ್ತಿಲ್ಲ.
ವೈದ್ಯರ ಸಂಘಟಿತ ಸೇವೆಯಿಂದಾಗಿ ಆಸ್ಪತ್ರೆ ರಾಜ್ಯದಲ್ಲಿ ಗುರುತಿಸಲ್ಪಟ್ಟಿದೆ. ಇಲಾಖೆಯಿಂದ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ನಿತ್ಯ 300 ಹೊರರೋಗಿಗಳು ಹೊಸದಾಗಿ ಸೇರ್ಪಡೆಯಾಗಿ, ಪುನಃ ಬರುವ ರೋಗಿಗಳೊಂದಿಗೆ ಸಾವಿರ ಸಂಖ್ಯೆ ತಲುಪುತ್ತಾರೆ. ಹೊರರೋಗಿ ವಿಭಾಗದಲ್ಲಿ ನಿಲ್ಲಲು ಸ್ಥಳವಿಲ್ಲ. ಡಾ| ಪ್ರಕಾಶ ನಾಯ್ಕ 200 ರೋಗಿಗಳನ್ನು ನೋಡುವಲ್ಲಿ ಸುಸ್ತು ಹೊಡೆಯುತ್ತಾರೆ. ಸರಾಸರಿ ಒಬ್ಬ ವೈದ್ಯ ನೂರು ರೋಗಿಗಳನ್ನು ನೋಡಬೇಕಾಗುತ್ತದೆ. ಇಬ್ಬರು ಆಯುರ್ವೇದ ವೈದ್ಯರಿದ್ದು ಕನಿಷ್ಠ 50 ರೋಗಿಗಳಿರುತ್ತಾರೆ. 100 ಹಾಸಿಗೆಗಳು ಸದಾ ಭರ್ತಿಯಾಗಿರುತ್ತದೆ. ಆದ್ದರಿಂದ ಹೊರರೋಗಿ ವಿಭಾಗಕ್ಕೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕು ಎಂಬುದು ಜನರ ಹಾಗೂ ವೈದ್ಯರ ಬೇಡಿಕೆಯಾಗಿದ್ದು ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಕ್ಯಾಸನೂರು ಕಾಯಿಲೆಯ ಜಿಲ್ಲಾ ಕೇಂದ್ರ ಇಲ್ಲಿದ್ದು ಕಟ್ಟಡದ ಮೇಲೆ ಮರ ಬಿದ್ದಿದೆ. ಅದಕ್ಕೂ ನೂತನ ಕಟ್ಟಡ ಬೇಕು. ಆಯುಷ್ ವೈದ್ಯರ ಪೂರ್ಣಸೇವೆ ಜನರಿಗೆ ಸಿಗಬೇಕಾದರೆ 5ಹಾಸಿಗೆಗಳ ಕಟ್ಟಡ, ಪಂಚಕರ್ಮ ಚಿಕಿತ್ಸೆ ಮೊದಲಾದ ಒಳರೋಗಿಗಳಿಗೆ ಸೌಲಭ್ಯ ಒದಗಿಸಲು ಕಟ್ಟಡಬೇಕಾಗಿದೆ. ಕಣ್ಣಿನ ವೈದ್ಯರು ಬರಬೇಕಾಗಿದ್ದು ತುರ್ತು ವಾರಕ್ಕೊಮ್ಮೆ ಕುಮಟಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾರ್ವಜನಿಕ ಶೌಚಾಲಯ, ವಿಶ್ರಾಂತಿ ಕೊಠಡಿ ಮೊದಲಾದ ಕಟ್ಟಡ, ಉತ್ತಮ ಕ್ಯಾಂಟೀನ್ ಅಗತ್ಯವಿದೆ.
ಆಯುಷ್ಮಾನ್ ಯೋಜನೆ ಬಂದ ಮೇಲೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ ಕಾರಣ ಸರ್ಕಾರದ ಯೋಜನೆ ಲಾಭ ಜನರಿಗೆ ತಲುಪಲು ಕಟ್ಟಡಗಳ ತುರ್ತು ಅವಶ್ಯವಿದೆ. ಒಬ್ಬರ ಹೊತತು ಉಳಿದೆಲ್ಲ ವೈದ್ಯರ ಕುರಿತು ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯವಿದೆ. ಚಳಿಗಾಲದಲ್ಲಿ ಮಂಗನ ಕಾಯಿಲೆ ಎದುರಿಸಲು ಸಿದ್ಧತೆ ಮಾಡಬೇಕು. ಮರವನ್ನು ತೆರವುಗೊಳಿಸಿ, ಕಟ್ಟಡ ದುರಸ್ತಿ ಮಾಡಿಕೊಡಿ ಎಂದು ಪತ್ರ ಬರೆದು ತಿಂಗಳಾಯಿತು. ಮರ ಅಲ್ಲೇ ಇದೆ. ಆರೋಗ್ಯ ಇಲಾಖೆ ಸಂಬಂಧಿಸಿದ ಕೆಲಸಕ್ಕೆ ಇತರ ಇಲಾಖೆ ವಿಳಂಬ ಸರಿಯಲ್ಲ. ಇದು ಸಾರ್ವಜನಿಕರ ಬೇಡಿಕೆಯೂ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.