ನಾಡಿದ್ದು ಯಕ್ಷ ಪರ್ವ ರಂಗ ಮಹೋತ್ಸವ
ಕೋಟ ಸುರೇಶ ಬಂಗೇರರಿಗೆ ಕಣ್ಣಿ-ಮೂರೂರು ಕೃಷ್ಣ ಭಟ್ಟರಿಗೆ ಅಭಿನೇತ್ರಿ ಪ್ರಶಸ್ತಿ
Team Udayavani, Oct 11, 2019, 6:31 PM IST
ಹೊನ್ನಾವರ: ಯಕ್ಷಗಾನ ಕಲಾಲೋಕದಲ್ಲಿ ಸ್ತ್ರೀ ಮತ್ತು ಪುರುಷ ಪಾತ್ರಗಳೆರಡರಲ್ಲೂ ಸಮಾನ ಯಶಸ್ಸು ಕಂಡಿರುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ. ನೂರು ಕಿಮೀ. ವ್ಯಾಪ್ತಿಯಲ್ಲಿ ರಾತ್ರಿ ಮೂರು ಪಾತ್ರಗಳನ್ನು ನಿಭಾಯಿಸುವ ಚುರುಕಿನ ಕಲಾವಿದ. ಇಷ್ಟೇ ಆದರೆ ಬರೆಯುವ ಅಗತ್ಯವಿರಲಿಲ್ಲ.
ಒಬ್ಬ ತಾಯಿ ಕರುಳಿನ ಸಹೃದಯನಾಗಿ, ಅಶಕ್ತ ಕಲಾವಿದರಿಗೆ ನೆರವಾಗುವ, ಹಿರಿಯ ಕಲಾವಿದರನ್ನು ಗೌರವಿಸುವ, ವರ್ಷಕ್ಕೊಮ್ಮೆ ದಿನವಿಡೀ ಉಚಿತ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿ ಹಬ್ಬ ಮಾಡುವ ಶಂಕರ ಹೆಗಡೆಯಂತಹ ಕಲಾವಿದರು ಯಕ್ಷಗಾನದಲ್ಲಿ ವಿರಳ.
ಅಭಿನೇತ್ರಿ ಆರ್ಟ್ ಟ್ರಸ್ಟ್ ರಚಿಸಿಕೊಂಡ ಶಂಕರ ಹೆಗಡೆ ಕಳೆದ ವರ್ಷ 4ಲಕ್ಷ ರೂ. ಗೂ ಹೆಚ್ಚಿನ ಮೊತ್ತ ದಾನಿಗಳಿಂದ ಸಂಗ್ರಹಿಸಿ, ಆರ್ಥಿಕ ಸಮಸ್ಯೆಯುಳ್ಳ ಕಲಾವಿದರಿಗೆ ಧನಸಹಾಯ ಮಾಡಿದ್ದಲ್ಲದೇ ಕಲಾವಿದರನ್ನು ಗೌರವಿಸಿದರು. ಹಿಂದಿನಬಾರಿಯ ಉಳಿತಾಯದ ಹಣವನ್ನು ಠೇವಣಿ ಇಟ್ಟಿದ್ದಾರೆ.
ತಮ್ಮ ನಿತ್ಯದ ವೇಷ ಮುಗಿದ ಮೇಲೆ ಪ್ರತಿ ಆಟಕ್ಕೆ ಒಂದಿಷ್ಟು ಹಣ ತೆಗೆದಿಡುವ ಶಂಕರ ಹೆಗಡೆ ಆ ಮೊತ್ತವನ್ನೂ ಸೇರಿಸಿ ವಾರ್ಷಿಕ ಸಂಭ್ರಮ ನೆರವೇರಿಸುತ್ತಾರೆ. ದಾನಕೊಟ್ಟವರಿಗೆ ಮರೆತು ಹೋಗುವಷ್ಟು ಒಳ್ಳೆಯ ಆಟ ತೋರಿಸುತ್ತಾರೆ.
ಅ.13 ರಂದು ಹೊನ್ನಾವರ ಪ್ರಭಾತನಗರ ಮೂಡಗಣಪತಿ ಸಭಾಭವನದಲ್ಲಿ ಯಕ್ಷಪರ್ವ ರಂಗಮಹೋತ್ಸವ ಏರ್ಪಡಿಸಿದ್ದಾರೆ. ಕೋಟ ಸುರೇಶ ಬಂಗೇರರಿಗೆ ಕಣ್ಣಿ ಪ್ರಶಸ್ತಿ, ಮೂರೂರು ಕೃಷ್ಣ ಭಟ್ಟರಿಗೆ ಅಭಿನೇತ್ರಿ ಪ್ರಶಸ್ತಿ ನೀಡಲಿದ್ದಾರೆ. ಅಪಘಾತದಿಂದ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ಶ್ರೀಪಾದ ಹೆಗಡೆ ಕಣ್ಣಿ, ತ್ರಯಂಬಕ ಹೆಗಡೆ ಇಡುವಾಣಿ ಮತ್ತು ಶಾಂತಾರಾಮ ಭಂಡಾರಿ ಕುಟುಂಬಕ್ಕೆ ಧನಸಹಾಯ ಮಾಡಲಿದ್ದಾರೆ. ಬೆಳಗ್ಗೆ 10ಕ್ಕೆ ಕೆರೆಕೋಣ ಯಕ್ಷಕಿರೀಟಿ ಮಕ್ಕಳ ಕುಶ-ಲವ ನಂತರ ಕಲಾವೃಂದ ಹೊಸಪಟ್ಟಣ ಅವರ ಕಂಸವಧೆ ಯಕ್ಷಗಾನವಿದೆ. ಮಧ್ಯಾಹ್ನ 2ರಿಂದ ತಾಳಮದ್ದಲೆ ನಡೆಯಲಿದ್ದು ವಿದ್ವಾಂಸರಾದ ಉಮಾಕಾಂತ ಭಟ್ ಕೆರೆಕೈ, ಗಣಪತಿ ಭಟ್ ಸಂಕದಗುಂಡಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 4ಕ್ಕೆ ಸುಬ್ರಹ್ಮಣ್ಯ ಧಾರೇಶ್ವರ, ಗಣಪತಿ ಭಟ್, ಸರ್ವೇಶ್ವರ ಮೂರೂರು, ಶಂಕರ ಭಾಗ್ವತ, ಗಣೇಶ ಗಾಂವ್ಕರ ಇವರಿಂದ ಹಿಮ್ಮೇಳ ವೈಭವವಿದೆ. ಸಂಜೆ 7ಕ್ಕೆ ಅಭಿಮನ್ಯು ಮತ್ತು ಗದಾಯುದ್ಧ ಆಟವಿದೆ. ಗಣೇಶ ನಾಯ್ಕ, ಅಶೋಕ ಭಟ್, ಕಡಬಾಳ ಉದಯ ಹೆಗಡೆ, ಕಾರ್ತಿಕ ಕಣ್ಣಿ ಮೊದಲಾದವರು ಪಾಲ್ಗೊಳ್ಳುವರು.
ಮುಂಜಾನೆ 10ಕ್ಕೆ ಡಾ| ಶ್ರೀಪಾದ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೃಷ್ಣ ಯಾಜಿ ಬಳಕೂರು ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಜಿ.ಜಿ. ಶಂಕರ, ಸಾಲಿಗ್ರಾಮ ಮೇಳದ ಕಿಶನ್ ಕುಮಾರ ಹೆಗಡೆ ಮೊದಲಾದ ಗಣ್ಯರು ಪಾಲ್ಗೊಳ್ಳುವರು.
ಶಂಕರ ಹೆಗಡೆಯ ಕಲಾಪ್ರೇಮವನ್ನು ಮೆಚ್ಚಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಾನಿಗಳು ಸಹಾಯ ಮಾಡುತ್ತಾರೆ. ಹೀಗೆ ಹಣ ಸೇರಿಸಿ ಧನ್ಯತೆ ಪಡೆಯುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ ಕಾರ್ಯಕ್ರಮಕ್ಕೆ ಕಲಾಪ್ರೇಮಿಗಳಿಂದ ಸರ್ವರೀತಿಯ ಸಹಕಾರ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.