ಹೊಸ ವರ್ಷಾಚರಣೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿ ವಿಜೃಂಭಣೆ
Team Udayavani, Dec 30, 2019, 4:47 PM IST
ಹೊಸದುರ್ಗ: ಇಂದಿನ ಯುವಕರು ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ರೀತಿ ಸರಿಯಿಲ್ಲ. ದೇಹ, ಮನಸ್ಸು, ಬುದ್ಧಿಯನ್ನು ವಿಕೃತಗೊಳಿಸಿಕೊಂಡು ಕುಡಿದು, ಕುಪ್ಪಳಿಸುವ ಪಾಶ್ಚಾತ್ಯ ಸಂಸ್ಕೃತಿಯೇ ವಿಜೃಂಭಿಸುತ್ತಿದೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಮೂಲಕ ಮನಸ್ಸನ್ನು ವಿಕಾಸಗೊಳಿಸಬೇಕೆನ್ನುವ ದೃಷ್ಟಿಯಿಂದ ಕಳೆದ 15 ವರ್ಷಗಳಿಂದ “ವರ್ಷದ ಹರ್ಷ’ ಎನ್ನುವ ಕಾರ್ಯಕ್ರಮವನ್ನು ಡಿಸೆಂಬರ್ 31ರ ರಾತ್ರಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಚಲನಚಿತ್ರ ಕ್ಷೇತ್ರ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಜಗತ್ತಿನಾದ್ಯಂತ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಕಿರುತೆರೆ ವಾಹಿನಿಗಳಲ್ಲಿ ನಿತ್ಯವೂ ಅನೇಕ ಚಲನಚಿತ್ರಗಳು ಪ್ರಸಾರವಾಗುತ್ತವೆ. ಬಹಳಷ್ಟು ಜನರ ಮನಸ್ಸಿನಲ್ಲಿ ಒಂದಿಷ್ಟು ಹಾಡು, ನೃತ್ಯ, ಹೊಡೆದಾಟ-ಬಡಿದಾಟ ಇದ್ದರೆ ಮಾತ್ರ ನೋಡಬಹುದು ಇಲ್ಲದೆ ಇದ್ದರೆ ನೋಡಲು ಸಾಧ್ಯವಿಲ್ಲ ಎನ್ನುವ ಭಾವನೆ ಇದೆ. ಹಿಂದಿನ ಮತ್ತು ಇಂದಿನ ಚಲನಚಿತ್ರಗಳಲ್ಲಿ ಬಹಳ ವ್ಯತ್ಯಾಸವಿದೆ. ಇಂದಿನ ಚಿತ್ರಗಳಲ್ಲಿ ಮೌಲ್ಯಗಳು ಕಾಣೆಯಾಗುತ್ತಿವೆ. ಜನರು ಬಯಸುವಂಥದ್ದನ್ನು ಕೊಡುವುದಕ್ಕಿಂತ ಜನರಿಗೆ ಯಾವುದು ಬೇಕೋ ಅಂಥದ್ದನ್ನು ಕೊಡುವ ಚಿತ್ರಗಳು ಹೊರಬರಬೇಕು. ಹಾಗಂತ ಅಂಥ ಚಲನಚಿತ್ರಗಳು ಇಲ್ಲ ಅಂತ ಅಲ್ಲ. ಅವುಗಳ ಸಂಖ್ಯೆ ಬಹಳ ವಿರಳ. ಅವು ಕಿರುತೆರೆಯಲ್ಲೂ ಬರುವುದಿಲ್ಲ. ಹಿರಿತೆರೆಯಲ್ಲೂ ಬಹಳ ದಿನ ಓಡುವುದಿಲ್ಲ. ಸದಭಿರುಚಿಯ ಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕೆನ್ನುವ ಸಂಕಲ್ಪದಿಂದ ಈ ವರ್ಷ ಚಲನಚಿತ್ರೋತ್ಸವವನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು.
ಚಲನಚಿತ್ರ ನಟ ಸುಚೇಂದ್ರಪ್ರಸಾದ್ ಮಾತನಾಡಿ, ಸಿಜಿಕೆ ಧಿಧೀಶಕ್ತಿ ಮತ್ತು ಪಂಡಿತಾರಾಧ್ಯ ಶ್ರೀಗಳ ಇಚ್ಛಾಶಕ್ತಿಯ ಕಾರಣದಿಂದ ಸಾಣೇಹಳ್ಳಿಯಲ್ಲಿ ನಿರಂತರವಾಗಿ ರಂಗಕ್ರಿಯೆಗಳು ನಡೆಯುತ್ತಿವೆ. ಇದೇ ಮೊದಲ ಬಾರಿ ಚಲನಚಿತ್ರೋತ್ಸವ ಆಯೋಜನೆಗೊಂಡಿದೆ. ಇದು ಅತ್ಯಗತ್ಯವಾದ ಮತ್ತು ಅಷ್ಟೇ ಎಚ್ಚರದ ನಡೆಯಾಗಬೇಕು. ಚಿತ್ರವನ್ನು ಕೇವಲ ಚಿತ್ರವಾಗಿ ನೋಡುವುದು ಸರಿಯಲ್ಲ. ಒಂದೇ ನೋಟಕ್ಕೆ ಸಿನಿಮಾದ ಬಹುಮುಖ ಆಯಾಮಗಳು ದಕ್ಕದೇ ಹೋಗಬಹುದು. ದಕ್ಕುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಸಿನಿಮಾಗಳನ್ನು ನೋಡಿದ ಪ್ರೇಕ್ಷಕ ಬೌದ್ಧಿಕವಾಗಿ ಮರುಹುಟ್ಟು ಪಡೆಯಬೇಕು ಎಂದರು.
ಸಿನಿ ಪ್ರದರ್ಶನಕ್ಕೆ, ವಿಮರ್ಶೆಗೆ, ಚರ್ಚೆಗೆ, ಸಂವಾದಕ್ಕೆ ಸಾಣೇಹಳ್ಳಿ ಯಕ್ತ ನೆಲೆ. ಇಂಥ ಚಲನಚಿತ್ರೋತ್ಸವಗಳನ್ನು ಯೋಜಿತ ರೀತಿಯಲ್ಲಿ ನಡೆಸಬೇಕಾದ ಸಂದರ್ಭವಿದೆ. ಸಿನಿಮಾದ ಜನ ನಮ್ಮ ಮೂಗಿನ ನೇರಕ್ಕೆ ಸಿನಿಮಾ ನಿರ್ಮಿಸುತ್ತಿದ್ದೇವೆ. ಪ್ರೇಕ್ಷಕರನ್ನು ಕೇಳದೆಯೇ, ಅವರೊಡನೆ ಸಂವಾದಿಸದೆ ಪ್ರಕ್ಷಕ-ಸಿಮಾಮ ರಂಗಗಳ ಸಮನ್ವಯದ ಕೊರತೆಯಿಂದ ಸಿನಿಮಾ ಕ್ಷೇತ್ರ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಾಪಕ ಜಯಣ್ಣ ನಿರೂಪಿಸಿದರು. ಕಾರ್ಯಕ್ರಮದ ನಂತರ
ಟಿ.ಎಸ್. ನಾಗಾಭರಣ ನಿರ್ದೇಶನದ “ಚಿನ್ನಾರಿ ಮುತ್ತ’ ಚಲನಚಿತ್ರ ಪ್ರದರ್ಶಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.