ಚಕ್ರಾ-ಸಾವೇಹಕ್ಲಿಗೆ ಬೇಕಿದೆ ಸೌಲಭ್ಯ!

ಅವಳಿ ಜಲಾಶಯ ಪ್ರದೇಶದಲ್ಲಿ ಸೌಕರ್ಯ ಕೊರತೆರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು

Team Udayavani, Dec 28, 2019, 1:18 PM IST

28-December-12

ಹೊಸನಗರ: ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಯಲ್ಲಿ ನೀರನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ 80 ದಶಕದಲ್ಲಿ ನಿರ್ಮಾಣ ಕಂಡ ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯ ಪ್ರದೇಶ ಪ್ರವಾಸಿಗರ ಹಾಟ್‌ ಸ್ಪಾಟ್‌. ಆದರೆ ಇಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಹೊಸನಗರ ತಾಲೂಕಿನ ನಗರ ಹೋಬಳಿ ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳು ಲಿಂಗನಮಕ್ಕಿಗೆ ನೀರು ಹರಿಸುವ ಮೂಲಕ ವಿದ್ಯುತ್‌ ಉತ್ಪಾದನೆಯಲ್ಲಿ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಚಕ್ರಾನಗರ ಪ್ರವಾಸಿ ಮಂದಿರದ ಅಕ್ಕಪಕ್ಕದಲ್ಲಿ 6 ಕಿಮೀ ದೂರದ ಸಮಾನಾಂತರದಲ್ಲಿ ನಿಲುಕುವ ಈ ಅವಳಿ ಜಲಾಶಯ ಪ್ರವಾಸಿಗರನ್ನು ತನ್ನತ್ತ ಗಮನ ಸೆಳೆಯತ್ತವೆ.

ಮಳೆಗಾಲದ ಬ್ಯೂಟಿ: ಸುತ್ತಲೂ ಹಚ್ಚಹಸಿರಿನ ಪರಿಸರ ಹೊದ್ದು ಸದಾ ಗಮನ ಸೆಳೆಯುವ ಈ ಅವಳಿ ಜಲಾಶಯ ಮಳೆಗಾಲ ಬಂತೆಂದೆರೆ ಜಲಸಿರಿಯನ್ನು ಮೈದುಂಬಿಸಿಕೊಂಡು ಚಿತ್ತಾಕರ್ಷಕವಾಗಿ ಕಂಗೊಳಿಸುತ್ತದೆ. ಡ್ಯಾಂ ತುಂಬಿದ ಮೇಲೆ ಕಂಡು ಬರುವ ಓವರ್‌ಫ್ಲೋಗೆ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಹಾಗಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಹರಿದು ಬರುತ್ತಾರೆ.

ಮೊದಲ ನದಿ ತಿರುವು: ಇದೀಗ ಎಲ್ಲೆಡೆ ನದಿ ತಿರುವು ಯೋಜನೆಗಳ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ಆದರೆ 3 ದಶಕಗಳ ಹಿಂದೆಯೇ ನದಿ ತಿರುವು ಯೋಜನೆ ಇಲ್ಲಿ ಸಾಕಾರಗೊಂಡಿದೆ ಎಂದು ಅಚ್ಚರಿಯಲ್ಲ. ಕೊಡಚಾದ್ರ ಪರಿಸರದಲ್ಲಿ ಜನ್ಮ ತಾಳಿ ಉಡುಪಿ ಜಿಲ್ಲೆಯತ್ತ ಸಾಗುವ ಚಕ್ರಾ ನದಿಯನ್ನು ಅಡ್ಡಲಾಗಿ ಡ್ಯಾಂ ಕಟ್ಟಿ ನೀರನ್ನು ಲಿಂಗನಮಕ್ಕಿ ಕಡೆಗೆ ತಿರುಗಿಸಿದ ಅಪರೂಪದ ಯೋಜನೆ. ಅದೇ ರೀತಿ ಉಡುಪಿ ಜಿಲ್ಲೆಯತ್ತ ಸಾಗುವ ಸಾವೇಹಕ್ಲು ನದಿಗೂ ತಡೆಯೊಡ್ಡಿ ಲಿಂಗನಮಕ್ಕಿ ಮತ್ತು ವಾರಾಹಿ ಯೋಜನೆಗೂ ಬಳಸಿಕೊಳ್ಳಬಹುದಾದ ಅಪರೂಪದ ಯೋಜನೆ ಸಾವೇಹಕ್ಲು ಜಲಾಶಯದ್ದು.

ವಿದ್ಯುತ್‌ ಸಂಪರ್ಕವಿಲ್ಲ: ವಿದ್ಯುತ್‌ ಉತ್ಪಾದನೆಗೆ ತನ್ನನ್ನು ತೊಡಗಿಸಿಕೊಂಡ ಈ ಅವಳಿ ಡ್ಯಾಂಗಳ ಭದ್ರತಾ ಕೊಠಡಿಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದು ವಿಪರ್ಯಾಸ. ಅವಳಿ ಜಲಾಶಯಕ್ಕೆ ಸಂಬಂಧಪಟ್ಟಂತೆ ಡ್ಯಾಂ ಮೇಲ್ಗಡೆ ಇರುವುದು ಇದೊಂದೇ ಕಟ್ಟಡ. ಆದರೆ ಕಟ್ಟಡದ ಸ್ಥಿತಿ ನೋಡಿದರೆ ಅಯ್ಯೋ
ಎನಿಸುತ್ತದೆ. ಕೇವಲ 10 ಅಡಿ ವಿಸ್ತೀರ್ಣದ ಆ ಒಂದು ಕೊಠಡಿಯಲ್ಲೇ ಭದ್ರತಾ ಸಿಬ್ಬಂದಿಗಳ ವಾಸ. ಅದು ಕೂಡ ಬಿರುಕು ಬಿಟ್ಟಿದೆ. ಕಿಟಕಿ ಬಾಗಿಲುಗಳು ಕಟ್ಟಡಕ್ಕೆ ಸಂಬಂಧವಿಲ್ಲದಂತೆ ಇದೆ. ಚಕ್ರಾ ಮತ್ತು ಸಾವೇಹಕ್ಲು ಜಲಾಶಯದ ಭದ್ರತೆಗಾಗಿ ದಿನದ 24 ಗಂಟೆ ಮೂರು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಆದರೆ ತಮ್ಮ ಎಲ್ಲದಕ್ಕೂ ಅದೇ ಕೊಠಡಿ ಆಸರೆ. ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯ. ಇನ್ನು ಮಳೆಗಾಲದಲ್ಲಂತೂ ಕಟ್ಟಡದ ಒಳಗೆ ಕೊಡೆ ಹಿಡಿದು ಇರಬೇಕಾದ ಸ್ಥಿತಿ ಇದೆ.

ಪ್ರವಾಸಿಗರಿಗೂ ಸೌಲಭ್ಯವಿಲ್ಲ: ಚಕ್ರಾ ಮತ್ತು ಸಾವೇಹಕ್ಲು ಡ್ಯಾಂ ವೀಕ್ಷಣೆಗೆ ಮಾಸ್ತಿಕಟ್ಟೆಯಲ್ಲಿರುವ ಕೆಪಿಸಿ ಕಚೇರಿಯಿಂದ ಪಾಸ್‌ ಪಡೆದು ಹೋಗಬೇಕು. ಆದರೆ ಅಲ್ಲಿ ಭದ್ರತಾ ಕೊಠಡಿ ಬಿಟ್ಟರೆ ಶೌಚಾಲಯವಾಗಲಿ, ನಿರೀಕ್ಷಣಾ ಕೊಠಡಿಯಾಗಲಿ ಇಲ್ಲ. ರಾತ್ರಿ ವೇಳೆ ಬಂದರೆ ವಿದ್ಯುತ್‌ ಇಲ್ಲದೆ ಪರದಾಡಬೇಕು. ಸಾಕಷ್ಟು ವರ್ಷದಿಂದ ಬೇಡಿಕೆ: ಚಕ್ರಾ ಸಾವೇಹಕ್ಲು ಪ್ರದೇಶದ ಸುಂದರ ಪರಿಸರ, ಮೈದುಂಬಿದ ಹಿನ್ನೀರು, ಓವರ್‌ ಫ್ಲೋ ಸಮಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರ ಮೂಲಸೌಲಭ್ಯಕ್ಕಾಗಿ ಮತ್ತು ಭದ್ರತಾ ಸಿಬ್ಬಂದಿಗಳ ಸುಲಭ ನಿರ್ವಹಣೆಗೆ ಪೂರಕವಾಗಿ ಕಾಯಕಲ್ಪಕ್ಕೆ ಹಲವು ವರ್ಷದ ಬೇಡಿಕೆ ಇದೆ. ಮುಂದಿನ ಮಳೆಗಾಲ ಆರಂಭವಾಗುವ ಮುನ್ನವಾದರೂ ಅಗತ್ಯ ಸೌಲಭ್ಯ ಒದಗಿಸಿ ಎಂಬುದು ಸ್ಥಳೀಯರ ಮತ್ತು ಪ್ರವಾಸಿಗರ ಆಗ್ರಹ.

ನೀಲನಕ್ಷೆ ತಯಾರಿದೆ
ಅವಳಿ ಜಲಾಶಯ ನಿರ್ಮಾಣ ಕಂಡ ವೇಳೆ. ವೀಕ್ಷಣಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ನಂತರ ಅದನ್ನೆ ಭದ್ರತಾ ಕೊಠಡಿಯಾಗಿ ನಿರ್ಮಿಸಲಾಗಿದೆ. ಸಾವೇಹಕ್ಲು ಮತ್ತು ಚಕ್ರಾ ಡ್ಯಾಂನ ಭದ್ರತೆಗೆ ಸಂಬಂಧ ಪಟ್ಟಂತೆ ಶಿಥಿಲಾವಸ್ಥೆಯ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲದೆ ಈ ಬಗ್ಗೆ ಪ್ರಪೋಸಲ್‌ ಕಳಿಸಲಾಗಿದೆ. ಮಂಜೂರಾತಿ ಸಿಕ್ಕ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು.
ಪ್ರಕಾಶ್‌ ಬ್ರಹ್ಮಾವರ್‌,
ಇಇ ಕರ್ನಾಟಕ ವಿದ್ಯುತ್‌ ನಿಗಮ ಮಾಸ್ತಿಕಟ್ಟೆ,

ಪ್ರವಾಸೋದ್ಯಮವೇ ಜೀವಾಳ
ಮುಳುಗಡೆಯಿಂದ ನಲುಗಿದ ನಗರ ಹೋಬಳಿ ಪುನಶ್ಚೇತನಕ್ಕೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದೇ ಇರುವ ಏಕೈಕ ಮಾರ್ಗ. ಚಕ್ರಾ ಮತ್ತು ಸಾವೇಹಕ್ಲು ಡ್ಯಾಂಗೆ ವರ್ಷಪೂರ್ತಿ ಪ್ರವಾಸಿಗರು ಹೆಚ್ಚಿರುತ್ತಾರೆ. ಮಳೆಗಾಲದಲ್ಲಂತೂ ಪ್ರವಾಸಿಗರು ಕಿಕ್ಕಿರಿಯುತ್ತಾರೆ. ಪೂರಕವಾಗಿ ಸೌಲಭ್ಯ ಒದಗಿಸುವ ಕಾರ್ಯ ತುರ್ತು ಆಗಬೇಕಿದೆ.
ವಿದ್ಯಾಧರ ಗುರುಶಕ್ತಿ,
ಹೊಸನಗರ

ಕುಮುದಾ ನಗರ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

11

Puttur: ಬಸ್‌ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.