ಆದಿವಾಸಿಗಳು ದೇಶದ ವೈವಿಧ್ಯತೆಯ ಪ್ರತೀಕ: ಚೌಧರಿ
Team Udayavani, Dec 22, 2019, 1:42 PM IST
ಹೊಸನಗರ: ತಮ್ಮದೇ ವಿಶಿಷ್ಟ ಬದುಕು ಮತ್ತು ಆಚರಣೆಯನ್ನು ಹೊಂದಿರುವ ಆದಿವಾಸಿಗಳು ಭಾರತದ ವೈವಿಧ್ಯತೆಯ ಪ್ರತೀಕ ಎಂದು ತ್ರಿಪುರಾದ ಮಾಜಿ ಸಂಸದ ಜೀತೇಂದ್ರ ಚೌಧರಿ ಅಬಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಆದಿವಾಸಿಗಳ ಸಮ್ಮೇಳನ ಮತ್ತು ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆದಿವಾಸಿಗಳು ತಮ್ಮದೇ ಭಾಷೆ, ಬದುಕು ಕಟ್ಟಿಕೊಂಡಿದ್ದು ಅದು ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಆದಿವಾಸಿಗಳು ಸಮಾಜಮುಖೀ ಚಿಂತನೆ ಮಾಡಬೇಕು. ದುಶ್ಚಟಗಳಿಗೆ ದಾಸರಾಗದೆ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು. ಸರ್ಕಾರಗಳು ಕೂಡ ಆದಿವಾಸಿಗಳ ಬಗ್ಗೆ ವಿಶೇಷ ಗಮನ ನೀಡಬೇಕು. ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಅವರ ನೆಲೆಗಳನ್ನು ಅವರದ್ದೇ ಆಗುವಂತೆ ಮಾಡಬೇಕು. ಅನಾವಶ್ಯಕ ಕಿರುಕುಳ,
ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.
ಪ್ರಕೃತಿಯ ಸಂಪನ್ಮೂಲಗಳನ್ನು ಸದ್ಬಳಕೆಗಾಗಿ ಸಮಾನವಾಗಿ ಹಂಚಿಕೊಂಡರೆ ಯಾವ ವಿವಾದವೂ ಇರುವುದಿಲ್ಲ. ವಿವಾದ ಬಂದಲ್ಲಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಆದಿವಾಸಿಗಳಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಅರಣ್ಯ ಹಕ್ಕು ಕಾನೂನು ಜಾರಿಗೆ ಬಂದಿದೆ. ಆದರೆ ಎಡರಂಗದ ಪಕ್ಷಗಳು ಹೊರತುಪಡಿಸಿ ಇನ್ಯಾವುದೇ ಸರ್ಕಾರಗಳು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿವೆ ಎಂದರು.
ಶಿಕ್ಷಣವೇ ಶಕ್ತಿ: ಸಮ್ಮೇಳನಕ್ಕೆ ಚಾಲನೆ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ಕಲಾವಿದೆ ಯಲ್ಲಪ್ಪ ನೊಣಬೂರು, ಆದಿವಾಸಿಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಧ್ಯೋತಕ. ಆದಿವಾಸಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸೂಕ್ತ ಶಿಕ್ಷಣ ದೊರೆತಾಗ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.
ನಮ್ಮ ದೇಶದಲ್ಲಿ 500ಕ್ಕೂ ಹೆಚ್ಚು ವಿವಿಧ ಆದಿವಾಸಿ ಸಮುದಾಯಗಳಿವೆ. ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಸಮುದಾಯವಿದೆ. ಮೊದಲು ಕೀಳರಿಮೆ ತೊಡೆದು ಹಾಕಬೇಕು. ನಮ್ಮ ಆಚರಣೆಯನ್ನು, ಸಾಂಸ್ಕೃತಿಕ ಹಿನ್ನೆಲೆಯನ್ನು ಇತರ ಸಮುದಾಯದವರು ಅನುಕರಿಸುತ್ತಾರೆ. ಅದೇ ರೀತಿ ನಮ್ಮ ಬದುಕು ಕೂಡ ಇತರರಿಗೆ ಮಾದರಿಯಾಗಬೇಕು. ಆನಿಟ್ಟಿನಲ್ಲಿ ಆದಿವಾಸಿಗಳು ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಹಿರಿಯ ರಂಗಕರ್ಮಿ ಆರ್. ಪ್ರಸನ್ನ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದಿವಾಸಿಗಳ ಬದುಕು ಮತ್ತು ಸಂಕಷ್ಟಗಳನ್ನು ಒಳಗೊಳಿಸಿ ಆಂದೋಲನದ ಮಾದರಿಯಲ್ಲಿ ಸಂಘಟಿಸಿರುವುದು ಸಮ್ಮೇಳನದಲ್ಲಿ ಕಂಡುಬರುತ್ತದೆ. ಇಂತಹ ಆಲೋಚನೆ ಮಹತ್ವದ್ದಾಗಿದೆ ಮತ್ತು ಭವಿಷ್ಯತ್ತಿನಲ್ಲಿ ಆದಿವಾಸಿಗಳ ಹಕ್ಕು ಪಡೆಯಲು ನೆರವಾಗುತ್ತದೆ ಎಂದರು.
ಸಮ್ಮೇಳನದ ಎನ್. ಹುಚ್ಚಪ್ಪ ಮಾಸ್ತರ್ ವೇದಿಕೆಯಲ್ಲಿ ಕರ್ನಾಟಕದ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ವೈ.ಕೆ. ಗಣೇಶ, ಡಾ| ಕೃಷ್ಣಪ್ಪ ಕೊಂಚಾಡಿ, ಜೆ.ಆರ್.ಪ್ರೇಮಾ, ಪ್ರೇಮಾನಂದ ವೆಳಿಪಾ, ವಿ.ಬಸವರಾಜು, ಮಂಜುನಾಥ ಕಪದೂರು, ಗುರುಶಾಂತ ಇದ್ದರು. ಮಂಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಡ ನಿರೂಪಿಸಿದರು. ವೈ.ಕೆ. ಗಣೇಶ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.