ಕೊಡಚಾದ್ರಿ ಗಿರಿಯಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್‌?

ಪ್ರವಾಸಿ ಮಂದಿರದಲ್ಲಿ ತಂಗಲು ಅವಕಾಶ ನೀಡದಂತೆ ಮನವಿ

Team Udayavani, Dec 26, 2019, 12:58 PM IST

26-December-14

„ಕುಮುದಾ ನಗರ
ಹೊಸನಗರ:
ಚಾರಣಿಗರ ನೆಚ್ಚಿನ ಸ್ಪಾಟ್‌, ಮೂಕಾಂಬಿಕೆ ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರ ಭುವನಗಿರಿ ಕೊಡಚಾದ್ರಿ ಗಿರಿಯಲ್ಲಿ ಪ್ರವಾಸಿಗರ ವರ್ಷಾಚರಣೆ ನಿರ್ಬಂಧಿ ಸುವ ಸಾಧ್ಯತೆ ಹೆಚ್ಚಿದೆ. ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅಲ್ಲದೆ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶ ಹೊಂದಿರುವ ಕೊಡಚಾದ್ರಿ ಗಿರಿಗೆ ಬರುವ ಪ್ರವಾಸಿಗರು ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಸಂಭ್ರಮದೊಂದಿಗೆ ಹೊಸವರ್ಷ ಸ್ವಾಗತಿಸುತ್ತಿದ್ದರು. ಅಲ್ಲದೆ ಅಲ್ಲಲ್ಲಿ ಬೆಂಕಿ ಹಾಕಿ ಸಂಭ್ರಮಿಸಿದ್ದು ಉಂಟು. ಆದರೆ ಈ ಬಾರಿ ಇದಕ್ಕೆಲ್ಲ ಬ್ರೇಕ್‌ ಹಾಕಲು ಕೊಲ್ಲೂರು ವಿಭಾಗದ ವನ್ಯ ಜೀವಿ ವಲಯ ನಿರ್ಧಾರ ಮಾಡಿದೆ.

ತಂಗಲು ಅವಕಾಶ ಬೇಡ: ಈ ಸಂಬಂಧ ಹೊಸನಗರ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವ ಕೊಲ್ಲೂರು ವನ್ಯ ಜೀವಿ ವಿಭಾಗ ಇದೇ ತಿಂಗಳ ಡಿ.28ರಿಂದ ಜನವರಿ 1 ತನಕ ಪ್ರವಾಸಿಗರಿಗೆ ಕೊಡಚಾದ್ರಿ ಪ್ರವಾಸಿ ಮಂದಿರದಲ್ಲಿ ತಂಗಲು ಅವಕಾಶ ನೀಡದಂತೆ ಮನವಿ ಮಾಡಿದೆ. ತಂಗಲು ಅವಕಾಶ ನೀಡಿದಲ್ಲಿ ಮೋಜು ಮಸ್ತಿಯ ಜೊತೆಗೆ ಬೆಂಕಿ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಕೊಡಚಾದ್ರಿ ಗಿರಿಯ ಸುತ್ತಲೂ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಇದ್ದು ಅನಾಹುತಕ್ಕೆ ದಾರಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಕೊಲ್ಲೂರು ವನ್ಯಜೀವಿ ಅರಣ್ಯ ವಿಭಾಗ ಪ್ರವಾಸಿ ಮಂದಿರದಲ್ಲಿ ಅವಕಾಶ ನೀಡದಂತೆ ಹೊಸನಗರ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ.

ನಿರ್ಬಂಧ ಸಾಧ್ಯತೆ: ಕೊಡಚಾದ್ರಿ ಗಿರಿಯ ಸಂರಕ್ಷಣೆ ಸಲುವಾಗಿ ವನ್ಯಜೀವಿ ಇಲಾಖೆ ನೀಡಿರುವ ಮನವಿ ಲೋಕೋಪಯೋಗಿ ಇಲಾಖೆ ಪುರಸ್ಕರಿಸುವ ಸಾಧ್ಯತೆ ಇದ್ದು, ವರ್ಷಾಂತ್ಯದಲ್ಲಿ ಕೊಡಚಾದ್ರಿಗಿರಿಯ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ತಂಗುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಪ್ರವಾಸಿಗರು ಹೆಚ್ಚು: ವರ್ಷಾಂತ್ಯದಲ್ಲಿ ಕೊಡಚಾದ್ರಿ ಗಿರಿಗೆ ಹರಿದು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಅಲ್ಲದೆ ಮೂಲ ಮೂಕಾಂಬಿಕೆಯ ನೆಲವೀಡು ಆಗಿರುವ ಕಾರಣ ಕೇರಳ ಮತ್ತು ಇತರ ರಾಜ್ಯದಿಂದ ಕೊಲ್ಲೂರಿಗೆ ಬರುವ ಭಕ್ತಾ ದಿಗಳು ಕೂಡ ಕೊಡಚಾದ್ರಿಗೆ ಹರಿದು ಬರುತ್ತಾರೆ. ಆದರೆ ಭಕ್ತಾ ದಿಗಳು ಹೆಚ್ಚಾಗಿ ಹಗಲು ಸಮಯದಲ್ಲಿ ಬಂದು ದರ್ಶನಗೈದು ವಾಪಾಸಾಗುತ್ತಾರೆ. ಆದರೆ ಪ್ರವಾಸಿಗರು ರಾತ್ರಿ ತಂಗಿ ಬೆಳಿಗ್ಗೆ ಸೂರ್ಯೋದಯ ನೋಡಿಕೊಂಡು ವಾಪಾಸಾಗುತ್ತಾರೆ.

ಕೊಡಚಾದ್ರಿಯಲ್ಲಿ ಮುಂಜಾಗೃತ ಕ್ರಮ: ಕೊಡಚಾದ್ರಿಯಲ್ಲಿ ಪ್ರವಾಸಿ ಮಂದಿರ ಹೊರತು ಪಡಿಸಿ ಬೇರೆಲ್ಲೂ ಟೆಂಟ್‌ ಹಾಕಿ ತಂಗಲು ಅವಕಾಶವಿಲ್ಲ. ಈಗಾಗಲೇ ಪ್ರವಾಸಿ ಮಂದಿರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. ವರ್ಷಾಚರಣೆ ವೇಳೆ ಯಾವುದೇ ಮೋಜು ಮಸ್ತಿ, ಬೆಂಕಿ ಹಾಕಿ ಸಂಭ್ರಮಿಸದಂತೆ ವನ್ಯಜೀವಿ ಇಲಾಖೆ ನಿಗಾ ಇಟ್ಟಿದೆ. ಅಲ್ಲದೆ ಪ್ರವಾಸಿಗರ ನೆಚ್ಚಿನ ಸ್ಪಾಟ್‌ ಸರ್ವಜ್ಞಪೀಠದ ಪರಿಸರ ಬಗ್ಗೆ ಕೂಡ ಇಲಾಖೆ ಗಮನ ಹರಿಸಿದೆ. ಒಟ್ಟಿನಲ್ಲಿ ಈ ವರ್ಷ ಕೊಡಚಾದ್ರಿ ಗಿರಿಯಲ್ಲಿ ಡಿ.31 ಮತ್ತು ವರ್ಷಾಚರಣೆ ಆಚರಿಸಬೇಕು ಎಂಬ ನಿರೀಕ್ಷೆ ಹೊತ್ತ ಪ್ರವಾಸಿಗರ ಆಸೆಗೆ ವನ್ಯಜೀವಿ ಇಲಾಖೆ ತಣ್ಣೀರು ಎರಚಿದೆ.

ಟಾಪ್ ನ್ಯೂಸ್

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.