ಶೂನ್ಯದಿಂದ ಸೂತ್ರ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ!

ಆಗದ ಪಟ್ಟಣ ಪಂಚಾಯತ್‌ ವಿಸ್ತರಣಾ ಕಾರ್ಯ •ಪಪಂ ಆಡಳಿತಕ್ಕೆ ದೂರದೃಷ್ಟಿ ಕೊರತೆ

Team Udayavani, May 10, 2019, 12:31 PM IST

10-May-13

ಹೊಸನಗರ: ಪಟ್ಟಣ ಪಂಚಾಯತ್‌ ಕಾರ್ಯಾಲಯ.

ಹೊಸನಗರ: ಪಪಂ ಕಳೆದ ಆಡಳಿತ ಮಂಡಳಿಯಲ್ಲಿ ಒಂದೂ ಸ್ಥಾನ ಇಲ್ಲದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.

ಹೊಸನಗರ ಪಪಂ ಆಡಳಿತ ಮಂಡಳಿಯು ಕಳೆದ 2 ಬಾರಿಯೂ ಜೆಡಿಎಸ್‌ ನಡೆಸಿದೆ. ವಿಸರ್ಜಿತ ಆಡಳಿತ ಮಂಡಳಿಯಲ್ಲಿ 11 ಸದಸ್ಯರಲ್ಲಿ ಜೆಡಿಎಸ್‌ನ 6 ಹಾಗೂ ಕಾಂಗ್ರೆಸ್‌ನ 5 ಸದಸ್ಯರು ಇದ್ದರು.

ಪಪಂ ಇತಿಹಾಸದಲ್ಲಿ ಬಿಜೆಪಿ ಒಮ್ಮೆ ಮಾತ್ರ ಪೂರ್ಣ ಪ್ರಮಾಣದ ಆಡಳಿತ ನಡೆಸಿದೆ. ಇನ್ನೊಮ್ಮೆ ಜೆಡಿಎಸ್‌ ಬೆಂಬಲದಿಂದ ಆಡಳಿತ ನಡೆಸಿರುವುದು ಕಂಡುಬರುತ್ತದೆ.

ಹೆಚ್ಚಾಗದ ಮತದಾರರು: ವಿಶೇಷ ಎಂದರೆ ಕಳೆದ 2 ದಶಕಗಳಿಂದ ಹೊಸನಗರ ಪಟ್ಟಣದ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿಲ್ಲ.

ದೂರದೃಷ್ಟಿ ಇಲ್ಲದ ಪಟ್ಟಣ ಪಂಚಾಯತ್‌ ಆಡಳಿತ ಮಂಡಳಿಯು ಪಟ್ಟಣ ಪಂಚಾಯತ್‌ ವಿಸ್ತರಣಾ ಕಾರ್ಯ ನಡೆಸಿಲ್ಲ. ವಿಸ್ತರಣೆಗೆ ಅವಕಾಶ ಇರುವ ಪಟ್ಟಣದ ಹೊರ ವಲಯದ ಬಹುತೇಕ ಪ್ರದೇಶಗಳು ಈಗಲೂ ಗ್ರಾಪಂ ತೆಕ್ಕೆಯಲ್ಲಿವೆ.

ಇದರ ಪರಿಣಾಮ ಹೊಸನಗರ ಪಟ್ಟಣವು ಸ್ಥಳಾಭಾವದಿಂದ ಕಿಷ್ಕಿಂಧೆ ಆಗಿದೆ. ಈ ಕಾರಣದಿಂದಾಗಿ ಇಲ್ಲಿನ ಮತದಾರರ ಸಂಖ್ಯೆ ಕೇವಲ 4837ಕ್ಕೆ ಸ್ಥಗಿತ ಆಗಿದೆ. ಈ ವರ್ಷ ಕೇವಲ 102 ನವ ಮತದಾರರು ಸೇರ್ಪಡೆಯಾಗಿದ್ದಾರೆ.

ಅವೈಜ್ಞಾನಿಕ ವಾರ್ಡ್‌ ವಿಂಗಡಣೆ: ಒಟ್ಟು 11 ವಾರ್ಡ್‌ಗಳು ಇರುವ ಈ ಪಟ್ಟಣ ಪಂಚಾಯತ್‌ನ 11ನೇ ವಾರ್ಡ್‌ನಲ್ಲಿ ಅತ್ಯಧಿಕ 784 ಮತದಾರರು ಇದ್ದರೆ, 4ನೇ ವಾರ್ಡ್‌ನಲ್ಲಿ 3 ಪಟ್ಟು ಕಡಿಮೆ ಅಂದರೆ ಕೇವಲ 220 ಮತದಾರರು ಇದ್ದಾರೆ.

ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಲು ತಮಗೆ ಬೇಕಾದ ಹಾಗೆ ವಾರ್ಡ್‌ಗಳನ್ನು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ವಾರ್ಡ್‌ ಸಂಖ್ಯೆ 1, 5 ಹಾಗೂ 10ರಲ್ಲಿ ಮಾತ್ರ ಪುರುಷ ಮತದಾರರು ಹೆಚ್ಚಾಗಿದ್ದು, ಉಳಿದಂತೆ ಎಲ್ಲಾ ವಾರ್ಡ್‌ಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದೆ. ಚುನಾವಣಾ ವೇಳಾಪಟ್ಟಿ: ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಮೇ 16, ಮೇ.17 ಪರಿಶೀಲನೆ, ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಮತದಾನ: ಮೇ 29ರ ಬೆಳಗ್ಗೆ 7ರಿಂದ ಸಂಜೆ 5ರ ತನಕ, ಮತ ಎಣಿಕೆ ತಾಲೂಕು ಕೇಂದ್ರದಲ್ಲಿ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ನೋಟಾಗೆ ಅವಕಾಶ: ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣದಲ್ಲಿರುವ ಯಾರೊಬ್ಬ ಅಭ್ಯರ್ಥಿಗೆ ತನ್ನ ಮತ ನೀಡಲು ಇಚ್ಛೆ ಇಲ್ಲದಿದ್ದಲ್ಲಿ ‘ನೋಟಾ’ (ಮೇಲ್ಕಂಡ ಯಾರು ಇಲ್ಲ) ಮತ ಚಲಾಯಿಸುವ ಅಧಿಕಾರ ಚುನಾವಣಾ ಆಯೋಗ ನೀಡಿದೆ.

ಟಾಪ್ ನ್ಯೂಸ್

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

1

Kundapura: ವೈದ್ಯರ ಮೇಲೆ ಹಲ್ಲೆಗೆ ಯತ್ನ; ಬೆದರಿಕೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.