ಅಂತಾರಾಷ್ಟ್ರೀಯ ಕಬಡ್ಡಿಗೆ ಸನತ್
ದುಬೈನಲ್ಲಿ ಕಬಡ್ಡಿ ಆಡಲಿರುವ ಮಲೆನಾಡಿನ ಬಿದನೂರು ನಗರದ ಕುವರ
Team Udayavani, Jul 15, 2019, 11:53 AM IST
ಹೊಸನಗರ: ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ತಂಡದ ನಾಯಕನಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ಸನತ್.
ಕುಮುದಾ ಬಿದನೂರು
ಹೊಸನಗರ: ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಪೂರಕ ಎಂಬಂತೆ ತನ್ನ ಕಿರಿಯ ವಯಸ್ಸಿನಲ್ಲೇ ಅಭೂತಪೂರ್ವ ಸಾಧನೆ ಮಾಡಿದ ಸನತ್ ಎಂಬ ಪೋರ ಎಲ್ಲರ ಗಮನ ಸೆಳೆದಿದ್ದಾನೆ.
ಹೌದು, ತಾಲೂಕಿನ ಬಿದನೂರು ನಗರದ 14 ವರ್ಷದ ಬಾಲಕ ಸನತ್ 17 ವರ್ಷದ ವಯೋಮಾನದ ಒಳಗಿನ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಇಡೀ ಮಲೆನಾಡಿಗೆ ಕೀರ್ತಿ ತಂದಿದ್ದಾನೆ.
ಹೊಸನಗರದ ಶ್ರೀ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸನತ್ ಎಚ್.ಎಸ್. ತನ್ನ ಕಿರುವಯಸ್ಸಿನಲ್ಲೇ ಕಬಡ್ಡಿ ಬಗ್ಗೆ ಆಸಕ್ತಿ ತೋರಿದ್ದು ಸತತ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾನೆ. ಇತ್ತೀಚೆಗೆ ಗೋವಾದಲ್ಲಿ ಖೇಲೋ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕಬಡ್ಡಿ ತಂಡದ ನಾಯಕನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಸನತ್, ತಂಡ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ಪಂದ್ಯಾವಳಿಯಲ್ಲಿ ಇದೇ ಶಾಲೆಯ ವಿಜೇತ ಮತ್ತು ಕಿರಣ ಕೂಡ ಭಾಗವಹಿಸಿದ್ದರು. ಉತ್ತಮ ನಾಯಕತ್ವ ಮತ್ತು ಆಟದಿಂದಾಗಿ ಗಮನ ಸೆಳೆದ ಸನತ್ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗೂ ಆಯ್ಕೆಯಾಗಿದ್ದಾನೆ.
ದುಬೈನಲ್ಲಿ ಕಬಡ್ಡಿ ಪಂದ್ಯ: ದುಬೈನಲ್ಲಿ ನ. 15ರಿಂದ 20ರವರೆಗೆ 17ನೇ ವರ್ಷದ ವಯೋಮಾನದ ಒಳಗಿನ ಅಂತಾ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆ ಯಲಿದ್ದು ಸನತ್ ಭಾರತವನ್ನು ಪ್ರತಿನಿಧಿಸಲಿದ್ದಾನೆ. ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಪಂದ್ಯಾ ವಳಿ ಯಲ್ಲಿ ಸನತ್ ಭಾಗ ವಹಿಸುತ್ತಿರುವ ಬಗ್ಗೆ ಆತನ ಪೋಷಕರು ಮತ್ತು ಹೊಸನಗರ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಸಂಭ್ರಮ ಮನೆಮಾಡಿದೆ.
ಸನತ್ ಸಾಧನೆ: ಚಿಕ್ಕಂದಿನಿಂದಲೂ ಕಬಡ್ಡಿ ಬಗ್ಗೆ ಆಸಕ್ತಿ ತೋರಿದ್ದ ಸನತ್ ಎಂಬ ಬಾಲಕನಿಗೆ ನೆರವಾಗಿದ್ದು ಆತನ ಪೋಷಕರು. ಮೂಡುಗೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾದ ಎಚ್.ವೈ.ಸತೀಶ್ ಗೌಡ ಮತ್ತು ಸರೋಜ ದಂಪತಿಯ ದ್ವಿತೀಯ ಪುತ್ರನಾದ ಸನತ್ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಅವಧಿಯಲ್ಲೂ ಉತ್ತಮ ಕಬಡ್ಡಿಯಾಟದಿಂದ ಅಂದೇ ಭರವಸೆ ಮೂಡಿಸಿದ್ದ. ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಭವಿಷ್ಯದ ಕಬಡ್ಡಿ ಆಟಗಾರನಾಗುವ ಎಲ್ಲ ಭರವಸೆಯನ್ನು ಮೂಡಿಸಿದ್ದಾನೆ.
ಪ್ರೋ ಕಬಡ್ಡಿ ಆಟಗಾರನಾಗುವಾಸೆ: ಇಂದು ಕ್ರಿಕೆಟ್‌ನಂತೆ ಪ್ರೋ ಕಬಡ್ಡಿ ಕೂಡ ಗಮನ ಸೆಳೆಯುತ್ತಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗುತ್ತಿದೆ. ಪ್ರೋ ಕಬಡ್ಡಿ ಆಟಗಾರನಾಗುವ ಮೂಲಕ ನಾಡಿಗೆ ಕೀರ್ತಿ ತರುವ ಮಹದಾಸೆಯನ್ನು ಸನತ್ ಹೊತ್ತಿದ್ದಾನೆ. ಅಲ್ಲದೆ ತನ್ನ ಕ್ರೀಡಾ ಬೆಳವಣಿಗೆಗೆ ಆಸರೆಯಾದ ತಂದೆ- ತಾಯಿ, ಶ್ರೀರಾಮಕೃಷ್ಣ ವಿದ್ಯಾಲಯ, ದೈಹಿಕ ಶಿಕ್ಷಕ ನಾಗರಾಜ್ ಮತ್ತು ತರಬೇತುದಾರ ಅಫ್ರಾಜ್‌ರ ಕೊಡುಗೆಯನ್ನು ಸ್ಮರಿಸುತ್ತಾನೆ.
ಒಟ್ಟಾರೆ ತನ್ನ ಕಿರಿಯ ವಯಸ್ಸಿನಲ್ಲೇ ಕಬಡ್ಡಿಯ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಿರುವ ಸನತ್, ಮುಂದೆ ಕರುನಾಡನ್ನು ಮಾತ್ರವಲ್ಲ, ಈ ದೇಶವನ್ನು ಮತ್ತೂಮ್ಮೆ ಪ್ರತಿನಿಧಿಸಲಿ. ಅಲ್ಲದೆ ಪ್ರೋ ಕಬಡ್ಡಿ ಆಟಗಾರನಾಗುವ ಆತನ ಆಶಯ ಈಡೇರಲಿ ಎಂಬುದು ಎಲ್ಲರ ಆಶಯ.
•ದೇವರಾಜ್, ವ್ಯವಸ್ಥಾಪಕರು,
ಶ್ರೀರಾಮಕೃಷ್ಣ ವಿದ್ಯಾಶಾಲೆ
•ಎಚ್.ವೈ. ಸತೀಶ್, ಸನತ್ ತಂದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.