ಕೇಸ್‌ ಜಡಿದು ಭಯ ಹುಟ್ಟಿಸುವ ಪೊಲೀಸರು

•ಮರಳಿಗಾಗಿ ಅಧಿಕಾರಿಗಳೆದುರು ಭಿಕ್ಷೆ ಬೇಡುವ ದುಃಸ್ಥಿತಿ ಜನರದ್ದು: ವಾಟಗೋಡು ಸುರೇಶ್‌

Team Udayavani, Jun 16, 2019, 3:51 PM IST

16-June-32

ಹೊಸನಗರ: ತಾಪಂ ಸಭಾಂಗಣದಲ್ಲಿ ನಡೆದ ತುರ್ತು ಮರಳು ವಿಶೇಷ ಸಭೆಯಲ್ಲಿ ಗ್ರಾಪಂ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಮಾತನಾಡಿದರು.

ಹೊಸನಗರ; ನೂತನ ಅಂಗನವಾಡಿ, ಶಾಲಾ ಕಟ್ಟಡ, ಬಾವಿ, ಆಶ್ರಯಮನೆ, ಕಾಲುಸಂಕ ಸೇರಿದಂತೆ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮರಳಿನ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಪೊಲೀಸ್‌ ಇಲಾಖೆಯು ಸಣ್ಣ- ಪುಟ್ಟ ಮರಳು ಸಾಗಾಣಿಕೆದಾರರಿಗೆ ನಿತ್ಯ ಕಿರುಕುಳ ನೀಡಿ ಕೇಸ್‌ ಜಡಿದು ಭಯ ಹುಟ್ಟಿಸುತ್ತಿದೆ ಎಂದು ಹರಿದ್ರಾವತಿ ಗ್ರಾಪಂ ಅಧ್ಯಕ್ಷ ವಾಟಗೋಡು ಸುರೇಶ್‌ ಆರೋಪಿಸಿದರು.

ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಮರಳಿನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಮಸ್ಯೆ ನಿವಾಹರಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್‌ ಸಮ್ಮುಖದಲ್ಲಿ ನಡೆದ ವಿಶೇಷ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸದ ಸರ್ಕಾರಿ ಅಧಿಕಾರಿಗಳ ಅವಶ್ಯಕತೆ ತಾಲೂಕಿನ ಜನತೆಗೂ ಇಲ್ಲ. ಈ ಸಂಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಕಳ್ಳರಂತೆ ಮರಳು ಸಾಗಾಣಿಕೆದಾರರ ಹಾಗೂ ಫಲಾನುಭವಿಗಳ ಫೋಟೋ ತೆಗೆದು ನಿತ್ಯ ಮಾನಸಿಕ ಕಿರುಕುಳ ನೀಡುವ ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.

ಒಂದು ಕತ್ತಿಗೆ ಐದು ಹಿಡಿ: ಒಂದು ಕತ್ತಿಗೆ ಐದು ಹಿಡಿ ಅಂತಿದೆ ನಮ್ಮ ಸಮಸ್ಯೆ. ಸರ್ಕಾರದ ಮರಳು ನೀತಿ ಕಂದಾಯ, ಅರಣ್ಯ, ಪೊಲೀಸ್‌, ಲೋಕೋಪಯೋಗಿ ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಗಳ ಕಪಿಮುಷ್ಟಿಗೆ ಸಿಲುಕಿದೆ. ಅಧಿಕಾರಿಗಳ ಕೈಗೆ ಸಿಕ್ಕಿ ನರಳುತ್ತಿರುವ ಜನಸಾಮಾನ್ಯರ ಗೋಳು ಹೇಳತೀರದಾಗಿದೆ. ಅಧಿಕಾರಶಾಹಿಗಳ ಎದುರು ಭಿಕ್ಷುಕರಂತೆ ಮಂಡಿಯೂರಿ ಮರಳು ಸಾಗಾಣಿಕೆಗೆ ಅನುಮತಿ ನೀಡುವಂತೆ ಕೋರುವ ಜನರ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣ ಆಗಿರುವುದು ದುರಂತದ ಸಂಗತಿ ಎಂದರು.

ತಾಲೂಕಿನ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ದೊರೆಯುವ ಮರಳನ್ನು ಅಲ್ಲಿನ ಅಭಿವೃದ್ಧಿ ಕಾಮಗಾರಿ ಕಾರ್ಯಗಳ ಬಳಕೆಗೆ ಅನುಮತಿ ನೀಡಲಿ. ಲೋಕೋಪಯೋಗಿ ಇಲಾಖೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಎಸ್‌ಆರ್‌ ದರದಲ್ಲಿ ವ್ಯಾಪಕ ವ್ಯತ್ಯಾಸವಿರುವ ಕಾರಣ ಬಸವ, ಆಶ್ರಯಗಳಂತ ಮನೆ ನಿರ್ಮಾಣ ಕಾರ್ಯಕ್ಕೆ ಜನಸಾಮಾನ್ಯರಿಗೆ ಇದು ಅನಾನುಕೂಲ ಆಗಲಿದೆ ಎಂದು ಆಡಳಿತ ವ್ಯವಸ್ಥೆಯ ವಿರುದ್ದ ಹರಿಹಾಯ್ದರು.

ಹರತಾಳು ಗ್ರಾಪಂ ಅಧ್ಯಕ್ಷೆ ಸಾಕಮ್ಮ ಮಾತನಾಡಿ, ಈ ಹಿಂದೆಯೂ ಮರಳು ಕೊರತೆ ಕುರಿತು ತಾಲೂಕು ಮಟ್ಟದ ಸಭೆ ನಡೆಸಲಾಗಿತ್ತು. ಎಷ್ಟೇ ಸಭೆ ನಡೆಸಿದರೂ ಸಮಸ್ಯೆ ಮಾತ್ರ ಇಂದಿಗೂ ಜೀವಂತವಾಗಿದೆ. ಸರ್ಕಾರದ ಟೆಂಡರ್‌ ಕ್ವಾರಿಗಳಲ್ಲಿ ಮರಳಿನ ದರ ಗಗನಕುಸುಮವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೆ ಇದು ಮುಳುವಾಗಿದೆ ಎಂದರು.

ನಮ್ಮ ಅಭ್ಯಂತರವಿಲ್ಲ: ಪಂಚಾಯತ್‌ ಒಂದು ಸ್ಥಳೀಯ ಸರ್ಕಾರವಿದ್ದಂತೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ವೇಳೆ ಸ್ಥಳ ಪರಿಶೀಲನೆ ಮೂಲಕ ಮರಳಿನ ಅಗತ್ಯ ದಾಖಲಿಸಿ. ಪೊಲೀಸ್‌, ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಲಿಖೀತ ಪತ್ರ ಬರೆದು ಅನುಮತಿ ಪಡೆಯಿರಿ. ಇದರಿಂದ ಅಕ್ರಮ ಮರಳು ಸಾಗಾಣಿಕೆ ಮಾಫಿಯಾಕ್ಕೆ ಕಡಿವಾಣ ಹಾಕಬಹುದು. ಸ್ಥಳೀಯವಾಗಿ ಸಿಗುವ ಮರಳನ್ನು ಸರ್ಕಾರಿ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲು ಇಲಾಖೆಯ ಯಾವುದೇ ಅಭ್ಯಂತರವಿಲ್ಲ. ಆದರೆ, ಕಾನೂನು ಪಾಲನೆ ಅಗತ್ಯ ಎಂದು ಸಿಪಿಐ ಗುರಣ್ಣ ಎಸ್‌ ಹೆಬ್ಟಾಳ್‌ ಸಭೆಗೆ ತಿಳಿಸಿದರು.

ಸುತ್ತಾ ಬ್ಲಾಕ್‌-1 ರ ಮರಳು ಲಭ್ಯ: ಸರ್ಕಾರಿ ಕಾಮಗಾರಿಗಳಿಗೆಯೇ ಜಿಲ್ಲಾಡಳಿತ ಮರಳು ಸಂಗ್ರಹಕ್ಕಾಗಿ ಸುತ್ತ ಬ್ಲಾಕ್‌-1 ತೆರೆಯಲು ಅನುಮತಿ ನೀಡಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಮರಳು ಸಂಗ್ರಹಕ್ಕೆ ಕೇವಲ 15 ದಿನಗಳ ಕಾಲಾವಕಾಶ ಸಿಗಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ನಿಯಮಾನುಸಾರ ಸ್ಥಳೀಯವಾಗಿ ಲಭ್ಯವಿರುವ ಮರಳನ್ನು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಬಳಕೆಗೆ ಮುಂದಾಗಬೇಕಿದೆ ಎಂದು ತಹಶೀಲ್ದಾರ್‌ ಚಂದ್ರಶೇಖರ್‌ ಸಭೆಯಲ್ಲಿದ್ದ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷ ವಾಸಪ್ಪಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಏರಗಿ ಉಮೇಶ್‌, ಇಒ ರಾಮಚಂದ್ರ ಭಟ್, ಸಹಾಯಕ ನಿರ್ದೇಶಕ ಷಣ್ಮುಗಂ, ಕೋಡೂರು ಗ್ರಾಪಂ ಅಧ್ಯಕ್ಷ ಜಯಂತ್‌, ಎಂ.ಗುಡ್ಡೇಕೊಪ್ಪ ಗ್ರಾಪಂ ಅಧ್ಯಕ್ಷ ಸತೀಶ್‌ ಕಾಲ್ಸಸಿ, ಸೊನಲೆ ಪಿಡಿಒ ಸಂತೋಷ್‌, ಕೋಡೂರು ಪಿಡಿಒ ಶ್ರೀಧರ್‌, ಅಂಡಗದೂದೂರು ಪವನ್‌, ಜೇನಿ ಕಾರ್ಯದರ್ಶಿ ವಿಜೇಂದ್ರ ಗೌಡ ಮತ್ತಿತರರು ಇದ್ದರು.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Bantwal: ಅಪಘಾತ; ಗಾಯಾಳು ಸಾವು

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.