ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ: ಬೆಂಬಲ
ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಟ: ಕೃಷ್ಣಪ್ಪ
Team Udayavani, May 13, 2019, 5:15 PM IST
ಹೊಸನಗರ: ವಿಧಾನಸಭಾ ಕ್ಷೇತ್ರ ಮರುನಾಮಕರಣಕ್ಕೆ ಒತ್ತಾಯಿಸಿ ಹೋಬಳಿ ಕೇಂದ್ರ ನಗರಕ್ಕೆ ಆಗಮಿಸಿದ ಟಿ.ಆರ್. ಕೃಷ್ಣಪ್ಪರಿಗೆ ಅಭಿನಂದನೆ ಸಲ್ಲಿಸಿ ಬೆಂಬಲ ಘೋಷಿಸಲಾಯಿತು.
ಹೊಸನಗರ: ಕಳೆದು ಹೋದ ಹೊಸನಗರ ವಿಧಾನಸಭಾ ಕ್ಷೇತ್ರ ಮತ್ತೆ ಪಡೆಯಲು ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ ನಡೆಸುತ್ತಿರುವ ಹೋರಾಟಕ್ಕೆ ನಗರ ಹೋಬಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಭಾನುವಾರ ಹೋಬಳಿ ಕೇಂದ್ರ ನಗರಕ್ಕೆ ಆಗಮಿಸಿದ ಟಿ.ಆರ್. ಕೃಷ್ಣಪ್ಪ ಸಂತೆ ಮಾರುಕಟ್ಟೆಯಲ್ಲಿ ವಿಧಾನಸಭಾ ಕ್ಷೇತ್ರದ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕ್ಷೇತ್ರ ಕಳೆದುಕೊಂಡಾಗಿನಿಂದ ಹೊಸನಗರ ತಾಲೂಕು ಹೆಸರಿಗಷ್ಟೇ ಸೀಮಿತವಾಗಿದೆ. ಇಲ್ಲಿನ ಜನ ಅಗತ್ಯ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ವಿಧಾನಸಭಾ ಕ್ಷೇತ್ರ ಮರು ಪಡೆದಲ್ಲಿ ಅಭಿವೃದ್ಧಿಯ ಓಟ ಹೆಚ್ಚುತ್ತದೆ. ತಾಲೂಕಿನ ಜನರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಟಿ.ಆರ್. ಕೃಷ್ಣಪ್ಪ ಹೋರಾಟಕ್ಕೆ ಬೆಂಬಲ: ನಗರ ಹೋಬಳಿಗೆ ಆಗಮಿಸಿದ ಹೋರಾಟಗಾರ ಟಿ.ಆರ್. ಕೃಷ್ಣಪ್ಪರಿಗೆ ಗ್ರಾಪಂ ಸದಸ್ಯ ಬಿ.ವೈ. ರವೀಂದ್ರ ಹಾರ ಹಾಕಿ ಸ್ವಾಗತಿಸಿದರು. ನಂತರ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ದಶಕದ ಹಿಂದೆ ನಡೆದ ಕ್ಷೇತ್ರ ವಿಂಗಡನೆ ಸಂದರ್ಭದಲ್ಲಿ ಹೊಸನಗರ ಕ್ಷೇತ್ರ ಕೈ ಬಿಡುವ ಬಗ್ಗೆ ಆಕ್ಷೇಪ ಸಲ್ಲಿಸಿದ್ದೆ. ಅಲ್ಲದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ಭಾಗವಹಿಸಿ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಅದರಿಂದ ಪ್ರಯೋಜನವಾಗಿಲ್ಲ. ಈಗ ಮತ್ತೆ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ನಾಮಕರಣಕ್ಕೆ ಒತ್ತಾಯಿಸಿ ಒಂಟಿಯಾಗಿ ಹೋರಾಟಕ್ಕೆ ಧುಮುಕಿರುವುದು ಸ್ವಾಗತಾರ್ಹ. ಅವರ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಬೆಂಬಲ ಕೊಡುತ್ತೇವೆ ಎಂದರು.
ಹೊಸನಗರ ತಾಲೂಕು ಮುಳುಗಡೆಯಿಂದಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದೆ. ಜಲವಿದ್ಯುತ್ ಯೋಜನೆಗಾಗಿ ಸಕಲವನ್ನೂ ತ್ಯಾಗ ಮಾಡಿದ ಹೊಸನಗರಕ್ಕೆ ಕ್ಷೇತ್ರ ಸೌಲಭ್ಯ ನೀಡುವ ಮೂಲಕ ನ್ಯಾಯ ಒದಗಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಟಿ.ಆರ್. ಕೃಷ್ಣಪ್ಪ ಹೋರಾಟಕ್ಕೆ ನೂರಾರು ಜನರು ಬೆಂಬಲ ಘೋಷಿಸಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿದರು. ನಗರದಲ್ಲಿ ಜಾಗೃತಿ ಸಭೆ ಬಳಿಕ ನಿಟ್ಟೂರು, ಸಂಪೇಕಟ್ಟೆ ಮತ್ತು ಮತ್ತಿಮನೆಯಲ್ಲಿ ಟಿ.ಆರ್. ಕೃಷ್ಣಪ್ಪ ಜಾಗೃತಿ ಮೂಡಿಸಿದರು.
ಪ್ರಮುಖರಾದ ಚಕ್ಕಾರು ಧರ್ಮೇಗೌಡ, ನಾರಾಯಣ ಕಾಮತ್, ವಿಜೇಂದ್ರ ಶೇಟ್, ಅಶೋಕದಾಸ್, ಮಂಜು ಶೆಟ್ಟಿ, ಅನಂತ ಕಂಚುಗಾರ್, ಪ್ರಸಾದ ಕಿಣಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.