![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 7, 2019, 1:10 PM IST
ಹೊಸಪೇಟೆ: ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಹಂಪಿಯ ಚಕ್ರತೀರ್ಥ-ಕೋದಂಡರಾಮ ಸ್ವಾಮಿ ದೇವಸ್ಥಾನದ ಮಾರ್ಗ ಜಲಾವೃತವಾಗಿರುವುದು.
ಹೊಸಪೇಟೆ: ಭರ್ತಿಯಾದ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ ಪರಿಣಾಮ ಐತಿಹಾಸಿಕ ಹಂಪಿಯ ತುಂಗಭದ್ರಾ ನದಿ ತಟದಲ್ಲಿರುವ ಕೆಲ ಸ್ಮಾರಕಗಳು ಮುಳುಗುವು ಹಂತ ತಲುಪಿದ್ದು, ಹಲವು ಪ್ರದೇಶಗಳಿಗೆ ತೆರಳುವ ಸಂಪರ್ಕ ಕಡಿತಗೊಂಡಿದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಪರಿಣಾಮ ಗುರುವಾರ 22 ಕ್ರಸ್ಟ್‌ಗೇಟ್ ತೆರೆದು ನೀರು ಹೊರಬಿಡಲಾಗಿದೆ. ಇದರಿಂದ ನದಿತಟದಲ್ಲಿರುವ ಪುರಾತನ ಜನಿವಾರ ಮಂಟಪ ಹಾಗೂ ವೈದಿಕ ಮಂಟಪದ ಹತ್ತಿರಕ್ಕೆ ನೀರು ಬಂದಿದೆ. ಪಕ್ಕದ ವಿರೂಪಾಪುರ ಗಡ್ಡೆ ಪ್ರದೇಶಕ್ಕೆ ತೆರಳುವ ಮಾರ್ಗ ಸ್ಥಗಿತಗೊಂಡಿದೆ. ಪುರಂದರ ಮಂಟಪ, ಚಕ್ರತೀರ್ಥ ಕೋದಂಡರಾಮ ಸ್ವಾಮಿ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇಗುಲದ ಮಾರ್ಗ ಜಲಾವೃತವಾಗಿವೆ.
ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಪಕ್ಕದ ಸ್ನಾನಘಟ್ಟ, ಪುರಂದರ ಮಂಟಪ ಸೇರಿದಂತೆ ನದಿ ಪಾತ್ರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರವಾಸಿಗರು ನದಿಗೆ ಇಳಿಯದಂತೆ ಕಟ್ಟಚ್ಚರ ವಹಿಸಲಾಗಿದೆ.
ಆ. 10ರಂದು ಜಲಾಶಯದಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ ನದಿ ಅಪಾಯ ಮಟ್ಟ ಮೀರಿ ಹರಿದು ನದಿತಟದ ಪುರಂದರ ಮಂಟಪ ಸೇರಿ ಹಲವು ಸ್ಮಾರಕಗಳು ಮುಳುಗಡೆಯಾಗಿದ್ದವು. ಇದೀಗ ಎರಡನೇ ಬಾರಿ ಹಂಪಿಯಲ್ಲಿ ಸ್ಮಾರಕ ಮುಳುಗಡೆ ಭೀತಿ ಎದುರಾಗಿದೆ.
You seem to have an Ad Blocker on.
To continue reading, please turn it off or whitelist Udayavani.