ಕಲಾವಿದರು ಸಮಾಜದ ಆಸ್ತಿ
Team Udayavani, Oct 23, 2019, 6:34 PM IST
ಹೊಸಪೇಟೆ: ತಮ್ಮೊಳ ಗಿನ ನೋವು-ನಲಿವುಗಳನ್ನು ಮರೆ ಮಾಚಿ ಅಭಿನಯ ನೀಡುವ ಅನೇಕ ಕಲಾವಿದರು, ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದಾರೆ ಎಂದು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಬಣ್ಣಿಸಿದರು.
ನಗರದ ಗಾನಗಂಗಾ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಸಂಗೀತ ನೃತ್ಯ ಕಲಾ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾವಿದರು ತಮ್ಮೊಳಗೆ ಎಷ್ಟೇ ನೋವಿದ್ದರೂ ವೇದಿಕೆ ಮೇಲೆ ಪ್ರೇಕ್ಷಕರನ್ನು ನಕ್ಕು ನಲಿಸಿ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಆಗಿದ್ದಾರೆ ಎಂದರು. ಚಿತ್ರದುರ್ಗದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬಿಜೆಪಿಯ ಎಸ್.ಸಿ. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಹನುಮಂತಪ್ಪ, ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಸಿ. ಚಿದಾನಂದ, ಉದ್ಯಮಿಗಳಾದ ಕಟ್ಟಾ ನಂಜಪ್ಪ, ಆಡಿಟರ್ ಎ. ಎಂ. ಗುರುಮೂರ್ತಿ, ಹೊಸಪೇಟೆ ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಗೋವಿಂದ, ಡಾ.ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷ ಮೆಶ್ಯಾಕ್ ಅಂಕಾಳಿ, ಮರಿಯಮ್ಮನಹಳ್ಳಿಯ ಖ್ಯಾತ ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ, ಬಳ್ಳಾರಿಯ ಎರುಕುಲಸ್ವಾಮಿ, ಕಮಲಾಪುರದ ಪಟ್ಟಣ ಪಂಚಾಯತ್ ಸದಸ್ಯ ಗೋಪಾಲಕೃಷ್ಣ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ
ಬಸಪ್ಪ ಮೆಡ್ಲೆರಿ, ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಮುಖ್ಯಸ್ಥೆ ಅಂಜಲಿ ಕೇಶವ್, ಚಿತ್ರದುರ್ಗದ ಖ್ಯಾತ ಕಲಾವಿದ ಡಿ. ಓ. ಮುರಾರ್ಜಿ ಇನ್ನಿತರರಿದ್ದರು.
ಕೆ. ಗಂಗಾಧರ ಮತ್ತು ತಂಡ ಚಿತ್ರದುರ್ಗ, ಇವರಿಂದ ಸುಗಮ ಸಂಗಿತ, ಮಲ್ಲಿಕಾರ್ಜುನ ತುರವನೂರು ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಹೊಸಪೇಟೆಯ ಕಲ್ಯಾಣಿ ಮತ್ತು ತಂಡದಿಂದ ಭಾವಗೀತೆಗಳು, ಗೋಸಿಕರೆಯ ಅಂಬಿಕ ಮತ್ತು ತಂಡದಿಂದ ವಚನ ಸಂಗೀತ, ಹೊಸಪೇಟೆಯ ಕವನ ಮತ್ತು ತಂಡದವರಿಂದ ಭರತನಾಟ್ಯ, ಗೋವಿಂದರಾಜ್ ಇವರಿಂದ ಕಿಬೋರ್ಡ್ ಸಾಥ್, ಎ. ಕಾಶೀನಾಥ ಹಾರ್ಮೊನಿಯಂ ಸಾಥ್, ಹನುಮಂತ ಕಾರಿಗನೂರು, ತಬಲಾ ಸಾಥ್, ಮೂರ್ತಿ, ರಿದಂಪ್ಯಾಡ್ ಸಾಥ್
ನೀಡಿದರು.
ಹಂಪಿ ಕನ್ನಡ ವಿವಿ ಸಂಗೀತ ಮತ್ತು ನೃತ್ಯ ವಿಭಾಗ ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾಚೇತನ ಶಾಲೆ ಮುಖ್ಯ ಶಿಕ್ಷಕ ಡಿ. ಹನುಮಂತಪ್ಪ ಸ್ವಾಗತಿಸಿದರು. ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರದಾರ್ ಮಾತನಾಡಿದರು. ಕಲಾವಿದ ಕಲ್ಲಂಭಟ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.