ಧ್ವನಿ-ಬೆಳಕು ವೈಭವಕ್ಕೆ ಸಿದ್ಧತೆ ಜೋರು

ಜ. 10ರಿಂದ ನಡೆಯಲಿರುವ ಕಾರ್ಯಕ್ರಮ | ಹಂಪಿ ಗಜ ಶಾಲೆ ಸ್ಮಾರಕದ ಆವರಣದಲ್ಲಿ ರಂಗ ವೇದಿಕೆ ಸಜ್ಜು

Team Udayavani, Dec 25, 2019, 12:54 PM IST

25-December-9

ಪಿ.ಸತ್ಯನಾರಾಯಣ
ಹೊಸಪೇಟೆ:
ಐತಿಹಾಸಿಕ ಹಂಪಿಯಲ್ಲಿ ಜನವರಿ 11 ಮತ್ತು 12 ರಂದು ನಡೆಯಲಿರುವ ಹಂಪಿ ಉತ್ಸವಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಉತ್ಸವದ ಜನಾಕರ್ಷಣೆಯ ಭಾಗವಾದ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಹಂಪಿ ಗಜಶಾಲೆ ಸ್ಮಾರಕದ ಆವರಣದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ.

ಜ. 10ರಿಂದ 16ರವರೆಗೆ ರಾತ್ರಿ 7ರಿಂದ 9ರವರೆಗೆ ನಡೆಯಲಿರುವ ಧ್ವನಿ ಬೆಳಕು ಕಾರ್ಯಕ್ರಮದ ಬೃಹತ್‌ ವೇದಿಕೆ ನಿರ್ಮಾಣಕ್ಕಾಗಿ ಮಂಗಳವಾರ ಅಗತ್ಯ ಸಾಮಗ್ರಿಗಳೆಲ್ಲ ಬಂದಿದ್ದು, ಬುಧವಾರದಿಂದ ವೇದಿಕೆ ನಿರ್ಮಾಣ, ಲೈಟಿಂಗ್‌ ಅಳವಡಿಕೆ ಎಲ್ಲ ಚುರುಕುಗೊಳ್ಳಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಹೊಣೆ ಹೊತ್ತಿರುವ ನವದೆಹಲಿಯ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದಿಂದ ಧ್ವನಿ ಪೆಟ್ಟಿಗೆಗಳು, ವೇಷ-ಭೂಷಣ ಸಾಮಗ್ರಿ ಹಾಗೂ ವೇದಿಕೆ ನಿರ್ಮಾಣಕ್ಕಾಗಿ ಅಗತ್ಯವಿರುವ ನಾನಾ ಪರಿಕರಗಳನ್ನು ತರಲಾಗಿದೆ. ತಂತ್ರ ಜ್ಞರು ಹಾಗೂ ನುರಿತ ಕಾರ್ಮಿಕರು ಆಗಮಿಸಿದ್ದು, ಕಾರ್ಯ ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನೂರು ಜನ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಏಳು ದಿನಗಳ ಕಾಲ ಅವರಿಗೆ ತರಬೇತಿ ನೀಡಿ ಬಳಿಕ ಪ್ರದರ್ಶನ ನೀಡಲಾಗುತ್ತದೆ.

ಈ ಧ್ವನಿ ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಕಟ್ಟಿಕೊಡಲಿದೆ. ಮನರಂಜನೆ ಜತೆಗೆ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೋಡುಗರ ಕಣ್ಣೆದುರು ತೆರೆದಿಡಲಾಗುತ್ತದೆ. ಹೀಗಾಗಿ ಧ್ವನಿ ಮತ್ತು ಬೆಳಕು ವೈಭವ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ರಾತ್ರಿ ವೇಳೆ ಹಂಪಿ ಸ್ಮಾರಕಗಳ ಮೆರಗು ಹೆಚ್ಚಿಸಲು ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಹಂಪಿ ಬೈ-ನೈಟ್‌ ಬೆಳಕಿನ ವ್ಯವಸ್ಥೆಗೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಇನೋವೇಟಿವ್‌ ಕ್ರಿಯೇಷನ್ಸ್‌ ಹಂಪಿ
ಬೈ-ನೈಟ್‌ ನಿರ್ವಹಣೆ ಹೊಣೆ ಹೊತ್ತು ಕೆಲಸ ಮಾಡು ತ್ತಿ ದೆ. ಜ.7ರಿಂದ ಹಂಪಿ ಬೈ ನೈಟ್‌ ಪ್ರಾರಂಭವಾಗಲಿದೆ. 125ಕ್ಕೂ ಹೆಚ್ಚು ಕಲಾವಿದರೂ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಉತ್ಸವದ ಸಿದ್ಧತಾ ಕಾರ್ಯಗಳನ್ನು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌.ಲೋಕೇಶ್‌ ಹಾಗೂ ತಾಂತ್ರಿಕ ವಿಭಾಗದ ರವೀಂದ್ರ ಪರಿಶೀಲಿಸುತ್ತಿದ್ದಾರೆ.

ಹಂಪಿ ಉತ್ಸವ ಅಂಗವಾಗಿ ವಿಜಯನಗರ ವೈಭವ ಧ್ವನಿ ಬೆಳಕು ಹಾಗೂ ಹಂಪಿ ಬೈ-ನೈಟ್‌ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ಇದಕ್ಕೆ ಅಗತ್ಯವಾಗಿರುವ ಎಲ್ಲ ಸಾಮಾನು ಸರಂಜಾಮುಗಳು ಬಂದಿವೆ.
ಪಿ.ಎನ್‌.ಲೋಕೇಶ್‌,
ಅಧ್ಯ ಕ್ಷರು,
ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಅನುಷ್ಠಾನ ಸಮಿತಿ, ಹಂಪಿ

ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕಾಗಿ ನೂರು ಜನ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಿ ಕಲಾವಿದರ ಆಯ್ಕೆ ಮಾಡಿ ಅವರಿಗೆ ಏಳು ದಿನ ತರಬೇತಿ ನೀಡಲಾಗುವುದು.
ಎಲ್‌.ಡಿ.ಜೋಷಿ,
ಕಾರ್ಯದರ್ಶಿ, ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಅನುಷ್ಠಾನ ಸಮಿತಿ, ಹಂಪಿ

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ

Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?

Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.