ಗಣಿ ಬಾಧಿತ ಪ್ರದೇಶ ಕಾಯಕಲ್ಪ ಸವಾಲು
ಆರ್ ಆ್ಯಂಡ್ ಆರ್ ಅನುಷ್ಠಾನ ಕುರಿತು ಸಚಿವ ಜೋಶಿ ಬಗ್ಗೆ ಆಶಾಭಾವನೆ
Team Udayavani, Jun 2, 2019, 9:44 AM IST
ಅಮರೇಗೌಡ ಗೋನವಾರ
ಹುಬ್ಬಳ್ಳಿ: ಗಣಿಗಾರಿಕೆ ಬಾಧಿತ ಪ್ರದೇಶಗಳ ಜನ-ಜನುವಾರು, ಕೃಷಿ ಹಾಗೂ ಜಲಮೂಲಗಳ ಹಾನಿ ಹಿನ್ನೆಲೆಯಲ್ಲಿ ಪುನರ್‌ನಿರ್ಮಾಣ, ಪುನರ್ವಸತಿ(ಆರ್‌ಆ್ಯಂಡ್‌ಆರ್)ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಉತ್ತರ ಕರ್ನಾಟಕದವರೇ ಆದ ಪ್ರಹ್ಲಾದ ಜೋಶಿಯವರು ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷೆ-ಆಶಾಭಾವನೆ ಹೆಚ್ಚಿದೆ.
ಅದರಲ್ಲೂ ಬಳ್ಳಾರಿ ಭಾಗದಲ್ಲಿ ಗಣಿಗಾರಿಯಿಂದ ಬಾಧಿತ ಹಳ್ಳಿ-ಪ್ರದೇಶದಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಆರ್ ಆ್ಯಂಡ್ ಆರ್ ಅನುಷ್ಠಾನಕ್ಕೆ ಸಮರ್ಪಕ ಕ್ರಮ ಕೈಗೊಳ್ಳುವರು ಎಂಬ ನಿರೀಕ್ಷೆ ಜನರದ್ದಾಗಿದೆ. ಗಣಿಗಾರಿಕೆಯಿಂದಾಗಿ ಹೆಚ್ಚು ಸಮಸ್ಯೆಗೀಡಾದ ಪ್ರದೇಶವಾದ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು (ಬಿಎಚ್ಎಸ್)ತಾಲೂಕುಗಳ ಅನೇಕ ಹಳ್ಳಿಗಳಲ್ಲಿ ಗಣಿಗಾರಿಕೆ, ಧೂಳು, ಗಣಿತ್ಯಾಜ್ಯ ಇನ್ನಿತರ ಕಾರಣಗಳಿಂದ ಜನರ ಆರೋಗ್ಯ, ಕೃಷಿ, ಪಶುಸಂಪತ್ತು, ಪರಿಸರ, ಅಂತರ್ಜಲ, ಜಲಮೂಲಗಳು ಇನ್ನಿತರ ವಿಷಯಗಳ ಮೇಲೆ ಹಲವು ರೀತಿಯ ಪರಿಣಾಮ-ಸಮಸ್ಯೆಗಳು ಉಂಟಾಗಿವೆ.
ಸಂಡೂರು ತಾಲೂಕುವೊಂದರಲ್ಲೇ ಸುಮಾರು 132 ಗ್ರಾಮಗಳು, ಹೊಸಪೇಟೆ ತಾಲೂಕಿನಲ್ಲಿ ಸುಮಾರು 25-30 ಗ್ರಾಮಗಳು, ಬಳ್ಳಾರಿ ತಾಲೂಕಿನಲ್ಲಿ 15-20 ಗ್ರಾಮಗಳು ಗಣಿಗಾರಿಕೆಗೆ ತುತ್ತಾಗಿವೆ. ಗಣಿಗಾರಿಕೆ ಧೂಳು, ಇನ್ನಿತರ ಕಾರಣದಿಂದಾಗಿ ಜನರು ಅಸ್ತಮಾ, ದಮ್ಮು, ಕ್ಷಯ, ಮೂತ್ರಪಿಂಡ ವೈಫಲ್ಯ ಇನ್ನಿತರ ವ್ಯಾಧಿಗಳಿಂದ ಸಮಸ್ಯೆಗೀಡಾಗಿದ್ದರೆ, ಜಾನುವಾರುಗಳೂ ಸಹ ಸಮಸ್ಯೆ ಎದುರಿಸುವಂತಾಗಿದೆ. ಗಣಿಧೂಳು ಹಾಗೂ ತ್ಯಾಜ್ಯ ಕೃಷಿಯ ಮೇಲೂ ಪರಿಣಾಮ ಬೀರಿದೆ. ಅಂತರ್ಜಲ ಕುಸಿದಿದೆ, ಕಲುಷಿತಗೊಂಡಿದೆ, ಕೆರೆಗಳು ಹೂಳು ತುಂಬಿಕೊಂಡಿವೆ. ಅರಣ್ಯ ಪ್ರದೇಶ ಹಾನಿಗೀಡಾಗಿದೆ, ಗಣಿತ್ಯಾಜ್ಯ ಸಂಗ್ರಹದ ಗೋಡೆ ಒಡೆದು ಕೃಷಿ ಜಮೀನಿನಲ್ಲಿ ಹರಿದಿದ್ದರಿಂದ ವಿಶೇಷವಾಗಿ ಸಂಡೂರು ತಾಲೂಕಿನ ಭುಜಂಗ ನಗರ ಸೇರಿದಂತೆ ಕೆಲವೆಡೆ ಇಂದಿಗೂ ಆ ಭೂಮಿ ನೀರು ಇಂಗುವ ಸ್ಥಿತಿ ಕಳೆದುಕೊಂಡಿದ್ದು, ಕೃಷಿಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ಗಣಿಗಾರಿಕೆಯಿಂದ ಬಾಧಿತವಾದ ಗ್ರಾಮ-ಪ್ರದೇಶಗಳಲ್ಲಿ ಸಮರ್ಪಕ ಆರ್ ಆ್ಯಂಡ್ ಆರ್ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದರ ಅನುಷ್ಠಾನಕ್ಕಾಗಿ ಅಂದಾಜು 1500-1800 ಕೋಟಿ ರೂ. ಹಣವಿದೆ. ಮುಖ್ಯವಾಗಿ ಜನರ ಬದುಕು ಸುಧಾರಣೆ ಹಾಗೂ ಆರೋಗ್ಯ, ಪರಿಸರ , ಜಲಮೂಲಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಲು ಸುಪ್ರೀಂಕೋರ್ಟ್ ಸೂಚಿಸಿದ್ದು, ಅಗತ್ಯ ಹಣವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ ಎಂಬ ಕೊರಗು ಬಿಎಚ್ಎಸ್ ಏರಿಯಾದ ಜನರದ್ದಾಗಿದೆ.
ಇನ್ನು ಆರ್‌ಆ್ಯಂಡ್‌ಆರ್ ಅನುಷ್ಠಾನ ನಿಟ್ಟಿನಲ್ಲಿ ರಾಜ್ಯ ಸರಕಾರದ ಜವಾಬ್ದಾರಿಯೂ ಅಧಿಕವಾಗಿದೆ. ಮುಖ್ಯವಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಜಲಾನಯನ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಹಾಗೂ ವಾಸ್ತವಿಕ ಮಾಹಿತಿ ಸಂಗ್ರಹ, ವರದಿ ತಯಾರಿಕೆ, ಸಂವಾದ ಇನ್ನಿತರ ಕಾರ್ಯಕೈಗೊಳ್ಳಬೇಕಾಗಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬುದು ಜನರ ಅನಿಸಿಕೆ.
ಆರ್‌ಆ್ಯಂಡ್‌ಆರ್ ಹೆಸರಲ್ಲಿ ಕೆಲವೆಡೆ ರಸ್ತೆಗಳನ್ನು ದುರಸ್ತಿಪಡಿಸಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ಸಸಿಗಳನ್ನು ನೆಡುವ ಕೆಲಸ ಬಿಟ್ಟರೆ ಇನ್ನಾವುದೇ ಕಾಮಗಾರಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಟ್ಟಡಗಳು ಅಭಿವೃದ್ಧಿ ಭಾಗವಾಗಬಹುದೇ ವಿನಃ ಜನಜೀವನದ ಆದ್ಯತೆಯಾಗಲಾರವು. ಮುಖ್ಯವಾಗಿ ಜನರ ಆದ್ಯತೆಗೆ ಮನ್ನಣೆ ದೊರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ವಿವಿಗಳು ಪಾಲ್ಗೊಳ್ಳುವಂತಾಗಲಿ: ಗಣಿ ಬಾಧಿತ ಪ್ರದೇಶಗಳ ಸಮಸ್ಯೆ, ತೊಂದರೆಗಳ ಬಗ್ಗೆ ಸಮೀಕ್ಷೆ, ಜನರೊಂದಿಗೆ ಸಂವಾದ, ಕ್ರಿಯಾಯೋಜನೆ ತಯಾರಿಕೆ ಪೂರಕ ಮಾಹಿತಿ, ಸಲಹೆ ನೀಡಿಕೆಯಂತಹ ಕಾರ್ಯಕ್ಕೆ ರಾಜ್ಯದ ಕೃಷಿ ಸೇರಿದಂತೆ ವಿಶ್ವವಿದ್ಯಾಲಯಗಳು ಪಾಲುದಾರಿಕೆ ಪಡೆಯಬೇಕು ಎಂಬುದು ಪರಿಸರ ಪ್ರೇಮಿಗಳ ಅನಿಸಿಕೆ.
ಆರ್‌ಆ್ಯಂಡ್‌ಆರ್ ಅನುಷ್ಠಾನದಲ್ಲಿ ರಾಜ್ಯ ಸರಕಾರದಿಂದ ನಿರೀಕ್ಷಿತ ಕಾರ್ಯ ಆಗುತ್ತಿಲ್ಲ ಎಂದು ಕೆಲ ಹೋರಾಟಗಾರರು, ಪರಿಸರ ಪ್ರೇಮಿಗಳು ಪುಣೆಯ ವಿಶ್ವವಿದ್ಯಾಲಯವೊಂದಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಯ ಕೆಲವರು ಆಗಮಿಸಿ ಜನರೊಂದಿಗೆ ಸಂವಾದ ನಡೆಸಿದ್ದು, ಇದೀಗ ಇಬ್ಬರು ತಜ್ಞರು ಆಗಮಿಸಿ ಸಮೀಕ್ಷೆ ಕಾರ್ಯಕೈಗೊಳ್ಳುತ್ತಿದ್ದಾರೆ. ರಾಜ್ಯ ಸರಕಾರದಿಂದ ಇದು ನಡೆದರೆ ವ್ಯಾಪಕ ಹಾಗೂ ತೀವ್ರತೆ ಹೊಂದಿರುತ್ತದೆ ಎಂಬುದು ಜನಾಭಿಪ್ರಾಯ.
ಬಿಎಚ್ಎಸ್ ಪ್ರದೇಶದಲ್ಲಿ ಗಣಿಗಾರಿಕೆಯಿಂದಾದ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿ ಆರ್‌ಆ್ಯಂಡ್‌ಆರ್ ಜಾರಿ ನಿಟ್ಟಿನಲ್ಲಿ ಪರಿಸರ ಹೋರಾಟಗಾರ ಎಸ್.ಆರ್.ಹಿರೇಮಠ ಇನ್ನಿತರರು ಸುಪ್ರೀಂಕೋರ್ಟ್ ಕದ ತಟ್ಟಿದ್ದು, ಕೋರ್ಟ್ ಸೂಚನೆಯಂತೆ ಪರಿಹಾರ ಕಾಮಗಾರಿಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಸೂಚನೆ ನೀಡಲಾಗಿದೆಯಾದರೂ ಸಮರ್ಪಕ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಜೋಶಿಯವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಜನರ ಭಾವನೆ-ಸಮಸ್ಯೆಗಳನ್ನು ಆಲಿಸಿ, ಆರ್‌ಆ್ಯಂಡ್‌ಆರ್ ಅನುಷ್ಠಾನಕ್ಕೆ ಮುಂದಾಗಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ.
ರಾಜ್ಯ ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗಣಿಗಾರಿಕೆ ಬಾಧಿತ ಪ್ರದೇಶದಲ್ಲಿ ಆರ್‌ಆ್ಯಂಡ್‌ಆರ್ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ. ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಯವರು ಇದೇ ಭಾಗದವರಾಗಿದ್ದು, ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರೆಯವ ಆಶಾಭಾವನೆ ಮೂಡಿದೆ. ಸಚಿವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜನರ ಭಾವನೆ ತಿಳಿಯುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿದೆ.
•ಟಿ.ಎಂ.ಶಿವಕುಮಾರ,
ಹಿರಿಯ ವಕೀಲರು-ಸಂಡೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.