ನೆರೆ ಪೀಡಿತ ಪ್ರಾಣಿಗಳ ನೆರವಿಗೆ ಮುಂದಾದ ಪ್ರಿಯಾಂಕಾ
ಬೆಳಗಾವಿ, ಚಿಕ್ಕೋಡಿ, ಗೋಕಾಕ ಪ್ರವಾಹ ಪೀಡಿತ ಪ್ರದೇಶಕ್ಕಿಂದು ಭೇಟಿ •ಆಹಾರ-ಔಷಧಿ ವಿತರಣೆಗೆ ಸಿದ್ಧತೆ
Team Udayavani, Aug 15, 2019, 1:00 PM IST
ಹುಬ್ಬಳ್ಳಿ: ನೆರೆ ಪೀಡಿತ ಪ್ರದೇಶಗಳ ನಿರಾಶ್ರಿತರು ಹಾಗೂ ಜಾನುವಾರು, ಪ್ರಾಣಿಗಳಿಗೆ ವಿತರಿಸಲು ಪ್ರಿಯಾಂಕ ಕೋಳ್ವೆಕರ ಸಂಗ್ರಹಿಸಿರುವ ಪರಿಹಾರ ಸಾಮಗ್ರಿ.
•ಶಿವಶಂಕರ ಕಂಠಿ
ಹುಬ್ಬಳ್ಳಿ: 2018ರಲ್ಲಿ ನಡೆದ ಮಿಸ್ ಭಾರತ ಅರ್ಥ್ ಸ್ಪರ್ಧೆಯಲ್ಲಿ ಎರಡನೇ ರನ್ನರಪ್ ಮೂಲಕ ದೇಶಕ್ಕೆ ಪರಿಚಿತರಾಗಿದ್ದ ಹುಬ್ಬಳ್ಳಿಯ ಮೊರಾರ್ಜಿ ನಗರ ನಿವಾಸಿ ಪ್ರಿಯಾಂಕಾ ಕೋಳ್ವೆಕರ ಆ.15ರಂದು ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಣಿಗಳಿಗೆ ಆಹಾರ- ಔಷಧ ಇನ್ನಿತರ ಸಾಮಗ್ರಿ ವಿತರಿಸಲಿದ್ದಾರೆ.
ನೆರೆ ಪ್ರದೇಶಗಳಲ್ಲಿ ತೊಂದರೆಗೊಳಗಾದ ಆಕಳು, ಎಮ್ಮೆ, ನಾಯಿ, ಬೆಕ್ಕು ಸೇರಿದಂತೆ ಇನ್ನಿತರೆ ಪ್ರಾಣಿಗಳಿಗೆ ಆಹಾರ ಸಾಮಗ್ರಿ ಹಾಗೂ ಗಾಯಗೊಂಡ ಪ್ರಾಣಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸಾಮಗ್ರಿ ನೀಡಲು ಸಜ್ಜು ಮಾಡಿಕೊಂಡಿದ್ದಾರೆ. ಸ್ವತಃ ಅಂಗಡಿ, ಮಾಲ್, ರೇಶನ್, ಬೇಕರಿಗಳಿಗೆ ಭೇಟಿ ಕೊಟ್ಟು ಪರಿಹಾರ ಸಾಮಗ್ರಿ ಸಂಗ್ರಹಿಸಿದ್ದಾರೆ. ಬಿಸ್ಕಿಟ್, ಬ್ರೇಡ್, ಬೆಲ್r, ಪಂಜರ, ಫೇಡಿಗ್ರೇ ಪ್ರಾಥಮಿಕ ಚಿಕಿತ್ಸೆಗೆ ಬೇಕಿರುವ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಜತೆಗೆ ನಿರಾಶ್ರಿತರಿಗೆ ಟಾವೆಲ್, ಹೊದಿಕೆ, ಅಕ್ಕಿ, ಬಿಸ್ಕಿಟ್ ಇನ್ನಿತರೆ ಸಾಮಗ್ರಿ ಸಂಗ್ರಹಿಸಿ ಇಟ್ಟಿದ್ದಾರೆ. ವೈಯಕ್ತಿಕವಾಗಿ 50 ಸಾವಿರ ರೂ. ವಿನಿಯೋಗಿಸಿರುವ ಇವರಿಗೆ ದಾನಿಗಳು ಸುಮಾರು 25-30 ಸಾವಿರ ರೂ. ಮೌಲ್ಯದಷ್ಟು ಆಹಾರ ಸಾಮಗ್ರಿ ನೀಡಿದ್ದಾರೆ.
ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ತಮ್ಮ ಸ್ನೇಹಿತರು, ಸಹದ್ಯೋಗಿಗಳು, ಸಂಬಂಧಿಗಳು ಹಾಗೂ ಅಂಗಡಿಕಾರರಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿರುವ ಪ್ರಾಣಿಗಳಿಗಾಗಿ ನೆರವು ಕೋರಿದ್ದಾರೆ.
ನೆರೆ ಹಾವಳಿಯಿಂದ ಜಾನುವಾರು, ಪ್ರಾಣಿಗಳಿಗೆ-ಜನರಿಗೆ ತೊಂದರೆ ಆಗಿರುವುದು ಕಂಡು ತುಂಬಾ ವ್ಯಥೆಯಾಗುತ್ತಿದೆ. ಅವರಿಗೆ ನನ್ನ ಕೈಲಾದ ಸಹಾಯ ಮಾಡಲು ಯೋಚಿಸಿದ್ದೇನೆ. ಅದಕ್ಕೆ ಸ್ನೇಹಿತರು, ಕೆಲವು ಅಂಗಡಿಕಾರರು ಸಹಕಾರ ನೀಡಿದ್ದಾರೆ. ವೈಯಕ್ತಿಕವಾಗಿ ನನ್ನ ದುಡಿಮೆಯ 50 ಸಾವಿರ ಸೇರಿ ಈಗ 80ಸಾವಿರಕ್ಕೂ ಅಧಿಕ ಮೌಲ್ಯದ ಆಹಾರ ಸಾಮಗ್ರಿ, ವೈದ್ಯಕೀಯ ಸಾಮಗ್ರಿಗಳನ್ನು ಸಂಗ್ರಹಿಸಿದ್ದೇನೆ. ಗುರುವಾರ ಬೆಳಗಾವಿ, ಚಿಕ್ಕೋಡಿ, ಗೋಕಾಕ ಹಾಗೂ ಸುತ್ತಲಿನ ಗ್ರಾಮಗಳಿಗೆ ತೆರಳಿ ಜಾನುವಾರು-ಪ್ರಾಣಿಗಳಿಗೆ ವಿತರಿಸುತ್ತೇನೆ.
• ಪ್ರಿಯಾಂಕ ಕೋಳ್ವೆಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.