ಅವಳಿನಗರದಲ್ಲಿ ಅಪರಾಧಗಳ ಅಟ್ಟಹಾಸ

ಉತ್ತರ ಭಾರತ, ಬಾಂಗ್ಲಾ ದೇಶದಿಂದ ಮಹಾನಗರಕ್ಕೆ ದರೋಡೆಕೋರರು ಆಗಮನ-ಅಪರಾಧ ಕೃತ್ಯಗಳಲ್ಲಿ ಭಾಗಿ

Team Udayavani, Sep 26, 2019, 4:09 PM IST

26-Sepctember-14

ಶಿವಶಂಕರ ಕಂಠಿ

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದರೋಡೆ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಸುರಕ್ಷಿತ ನಗರಗಳೆಂಬ ಹಣೆಪಟ್ಟಿಯಿಂದ ಕಳಚಿಕೊಳ್ಳುತ್ತಿವೆಯೇ ಎಂಬ ಆತಂಕ ಜನರಲ್ಲಿ ಹೆಚ್ಚುತ್ತಿದೆ. ಹೊರ ರಾಜ್ಯಗಳ ಸುಪಾರಿ ಹಂತಕರು ಹಾಗೂ ದರೋಡೆಕೋರರು ಆಗಾಗ ಅವಳಿ ನಗರದಲ್ಲಿ ತಮ್ಮ ಅಟ್ಟಹಾಸ ಮೆರೆದು ತಲೆಮರೆಸಿಕೊಳ್ಳುತ್ತಿದ್ದಾರೆ.

ಇದು ಅವಳಿ ನಗರದ ನಿವಾಸಿಗಳನ್ನು ಅದರಲ್ಲೂ ಶಾಂತಿ, ನೆಮ್ಮದಿಯಿಂದ ಬದುಕು ಕಾಣುತ್ತಿರುವವರ ನಿದ್ದೆಗೆಡಿಸಿದೆ. ಈ ಕೃತ್ಯಗಳು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
ಹೊರ ರಾಜ್ಯಗಳಿಂದ ಅದರಲ್ಲೂ ಉತ್ತರ ಭಾರತ ಹಾಗೂ ಬಾಂಗ್ಲಾ
ದೇಶದಿಂದ ದರೋಡೆಕೋರರು, ಹಂತಕರು ನಗರಕ್ಕಾಗಮಿಸಿ ತಮ್ಮ ಕೃತ್ಯಗಳನ್ನೆಸಗಿ ಹೋಗುತ್ತಿದ್ದು, ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಜತೆಗೆ ಪೊಲೀಸರ ಕರ್ತವ್ಯದ ಮೇಲೂ ಬೊಟ್ಟು ತೋರುವಂತಾಗಿದೆ.

ನಾಲ್ಕು ಶೂಟೌಟ್‌: ಅವಳಿ ನಗರದಲ್ಲಿ 2007ರಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಶೂಟೌಟ್‌ ಪ್ರಕರಣಗಳು ದಾಖಲಾಗಿವೆ. 2007ರ ಡಿಸೆಂಬರ್‌ 10ರಂದು ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ| ಶಿವಾನಂದ ದೊಡ್ಡಮನಿ ಅವರ ಮೇಲೆ ಸುಪಾರಿ ಹಂತಕರು ಕಿಮ್ಸ್‌ ಆವರಣದಲ್ಲಿ ಶೂಟೌಟ್‌ ಮಾಡಿದ್ದರು. ಅದಾದ ಬಳಿಕ 2015ರ ಆಗಸ್ಟ್‌ 30ರಂದು ಹಿರಿಯ ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ ಅವರನ್ನು ಧಾರವಾಡದ ತೇಜಸ್ವಿನಗರದ ನಿವಾಸದಲ್ಲಿ ಹಂತಕರು ಗುಂಡು ಹಾರಿಸಿ ಹತ್ಯೆಗೈದಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರನ್ನು ಎಸ್‌ಐಟಿಯವರು ಇತ್ತೀಚೆಗೆ ಬಂಧಿಸಿದ್ದಾರೆ. ಈ ಪ್ರಕರಣಗಳು ಜನರಲ್ಲಿ ಮರೆಮಾಚುವ ಮುನ್ನವೇ ನಗರದಲ್ಲಿ ಇದೇ ತಿಂಗಳಲ್ಲಿ ವಾರದೊಳಗೆ ಮತ್ತೆರಡು ಶೂಟೌಟ್‌ ಪ್ರಕರಣಗಳು ನಡೆದಿರುವುದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸುವಂತೆ ಮಾಡಿದೆ. ವಾರದೊಳಗೆ ಎರಡನೇ ಶೂಟೌಟ್‌: ಇಲ್ಲಿನ ಗೋಕುಲ ರಸ್ತೆ ಮಂಜುನಾಥ ನಗರ
ಕ್ರಾಸ್‌ ಬಳಿಯ ಕೊಠಾರಿ ಲೇಔಟ್‌ನಲ್ಲಿ ಸೆ.21ರಂದು ಸಂಜೆ ಬಿಹಾರದ ಬೈಸಾಯಿ ಜಿಲ್ಲೆ ಹಸನಪುರದ ಸರ್ವೇಶಕುಮಾರಸಿಂಗ್‌ ಪ್ರಸಾದ (30) ಮೇಲೆ ದುಷ್ಕರ್ಮಿಗಳ ತಂಡವು ಎರಡು ನಾಡ ಪಿಸ್ತೂಲ್‌ಗ‌ಳಿಂದ ಶೂಟೌಟ್‌ ಮಾಡಿ ಹತ್ಯೆಗೈದಿದೆ. ಈ ಘಟನೆ ನಡೆದ ನಾಲ್ಕೆ ದಿನಗಳಲ್ಲಿ ಅಂದರೆ ಬುಧವಾರ ಬೆಳಗ್ಗೆ ಧಾರವಾಡ ಸಮೀಪದ ನಿಗದಿ ಗ್ರಾಮದ ಬಳಿ ಮೂಲತಃ ದಾಂಡೇಲಿಯ ದೆಹಲಿ ನಿವಾಸಿ ಶ್ಯಾಮ್‌ಸುಂದರ್‌ ಮೈತಕುಡಿ (42) ಎಂಬುವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಶೂಟೌಟ್‌ ಮಾಡಿ ಪರಾರಿಯಾಗಿದ್ದಾರೆ. ಅವಳಿ ನಗರದಲ್ಲಿ ವಾರದೊಳಗೆ ಎರಡು ಶೂಟೌಟ್‌ ಪ್ರಕರಣಗಳು ನಡೆದಿರುವುದರಿಂದ ಜನರು ಭಯಭೀತರಾಗಿದ್ದಾರೆ.

ಎಂಟು ತಿಂಗಳಾದರೂ ಪತ್ತೆಯಾಗದ ಬಣವಿ ಹಂತಕರು: ಪ್ರಸಕ್ತ ವರ್ಷದ ಆರಂಭದಲ್ಲಿ ಜನವರಿ 22ರಂದು ಬೆಳಗಿನ ಜಾವ ಅಶೋಕನಗರ ಠಾಣೆ ವ್ಯಾಪ್ತಿಯ ರಾಜನಗರದ ಎಸ್‌ಬಿಐ ಕ್ವಾರ್ಟ್‌ರ್ಸ್‌ ಹಿಂಭಾಗದಲ್ಲಿ ದರೋಡೆಕೋರರ ತಂಡವು ಔಷಧಿ ವ್ಯಾಪಾರಿ ವೆಂಕಣ್ಣ ಬಣವಿ (72) ಅವರನ್ನು ಕೊಲೆ ಮಾಡಿ, ಅವರ ಪತ್ನಿ ವನಮಾಲಾ ಮೇಲೆ ಹಲ್ಲೆ ಮಾಡಿ ಅಂದಾಜು 11ಲಕ್ಷ ರೂ. ಮೌಲ್ಯದ ಚಿನ್ನಾಭರಣ, 25 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಪೊಲೀಸರು ಮಾತ್ರ ಬಾಂಗ್ಲಾ ದೇಶದ ದರೋಡೆಕೋರರ ತಂಡ ಈ ಕೃತ್ಯ ಎಸಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎನ್ನುತ್ತಲೇ ಇದ್ದಾರೆ. ಆದರೆ ಘಟನೆ ನಡೆದು ಎಂಟು ತಿಂಗಳಾದರೂ ಹಂತಕರು ಪತ್ತೆಯಾಗಿಲ್ಲ.

ದರೋಡೆ, ಶೂಟೌಟ್‌ ತಡೆ ಸವಾಲು: ಪೊಲೀಸ್‌ ಇಲಾಖೆಯು ಅವಳಿ ನಗರದಲ್ಲಿ ನಡೆಯುತ್ತಿರುವ ದರೋಡೆ, ಶೂಟೌಟ್‌, ಕಳ್ಳತನ, ಅಕ್ರಮ ಚಟುವಟಿಕೆಗಳು ಹಾಗೂ ಹಲ್ಲೆ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಲರ್ಟ್‌ ಆಗಬೇಕಿದ್ದು, ಪ್ರಕರಣಗಳನ್ನು ತಡೆಗಟ್ಟುವುದು ಇಲಾಖೆಗೆ ಸವಾಲಾಗಿದೆ.

ನಗರದಲ್ಲಿನ ರೌಡಿಗಳು, ಗೂಂಡಾಗಳು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರನ್ನು ಮಟ್ಟ ಹಾಕುವುದರ ಜತೆಗೆ ಹೊರ ರಾಜ್ಯದ ನಟೋರಿಯಸ್‌ ಗ್ಯಾಂಗ್‌ಗಳು, ದುಷ್ಟಶಕ್ತಿಗಳು ನಗರ ಪ್ರವೇಶಿಸಿ ದುಸ್ಸಾಹಸಕ್ಕೆ ಕೈಹಾಕದಂತೆ ಅವುಗಳ ಮೇಲೆ ಹದ್ದಿನ ಕಣ್ಣಿಡುವ ಹಾಗೂ ಅವಳಿ ನಗರವು ಅಪರಾಧ ಚಟುವಟಿಕೆಗಳಿಂದ ಮುಕ್ತ ಹಾಗೂ ಸುರಕ್ಷಿತ ಸ್ಥಳವೆಂಬುದನ್ನು ಸಾಬೀತು ಪಡಿಸಲು ಸೂಕ್ತ ಮುಂಜಾಗ್ರತೆ ವಹಿಸುವುದು ಇಲಾಖೆಗೆ ಚಾಲೇಂಜ್‌ ಆಗಿ ಪರಿಣಮಿಸಿದೆ.

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.