ಕೆಕೆಆರ್‌ಡಿಬಿ ಸ್ವಾಯತ್ತತೆ ಕುಂದುತ್ತಿದೆಯೇ?
ಶಾಸಕರನೇ ಅಧ್ಯಕ್ಷರನ್ನಾಗಿಸಲು ಹೊರಟ ಸರ್ಕಾರ ರಾಜ್ಯಪಾಲರು ಅಧ್ಯಕ್ಷರಾಗುವಂತೆ ಹೆಚ್ಚಿದ ಕೂಗು
Team Udayavani, Jan 8, 2020, 10:55 AM IST
ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಮೂಲ ಆಶಯಗಳನ್ನೇ ಮರೆತಂತಿದ್ದು, ಮಂಡಳಿಯ ಸ್ವಾಯತ್ತತೆಗೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿಸುವುದು ಬೇಡ ಎಂಬ ಒತ್ತಾಯ ಒಂದು ಕಡೆಯಾದರೆ, ರಾಜ್ಯಪಾಲರೇ ಇದರ ಅಧ್ಯಕ್ಷರಾಗಲಿ ಎಂಬ ಕೂಗು ಸಹ ಕೇಳಿ ಬಂದಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗೋತ್ಕರ್ಷಕ್ಕೆ ವಾಹಕವಾಗಲಿ ಎಂಬ ಉದ್ದೇಶದಿಂದ ಆರಂಭಗೊಂಡಿದ್ದ ಹೈಕ ಅಭಿವೃದ್ಧಿ ಮಂಡಳಿ, 2013ರಿಂದ ಹೈಕ ಪ್ರದೇಶ ಅಭಿವೃದ್ಧಿ ಮಂಡಳಿಯಾಗಿ ಸ್ವಾಯತ್ತ ಸ್ಥಾನ ಪಡೆಯಿತಾದರೂ, ನಿರೀಕ್ಷಿತ ಅಭಿವೃದ್ಧಿ ವೇಗ ಕಂಡಿಲ್ಲ. ಇದುವರೆಗೂ ಮಂಡಳಿಯಿಂದ ವೈಜ್ಞಾನಿಕ ಕ್ರಿಯಾ ಯೋಜನೆ ಸಿದ್ಧಗೊಂಡಿಲ್ಲ.
ಕುಂದುತ್ತಿದೆ ಸ್ವಾಯತ್ತತೆ?: ನಾಲ್ಕು ದಶಕಗಳ ಹಿಂದೆಯೇ ಧರಂಸಿಂಗ್ ನೇತೃತ್ವದ ಕಮಿಟಿ, ವಿಶೇಷ ಅಭಿವೃದ್ದಿಗೆ ಒತ್ತು ನೀಡಿಕೆ, 10 ವರ್ಷದ ಕಾಲಮಿತಿಯಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವರದಿ ನೀಡಿತ್ತು. ಅನೇಕ ಹೋರಾಟ, ಬೇಡಿಕೆಗಳ ನಂತರದಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಡಾ| ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಚಿಸಿತ್ತು. ಎಂಟು ವರ್ಷಗಳ ಅವಧಿಯಲ್ಲಿ ಸಾಮಾನ್ಯ ಅನುದಾನ ಹಾಗೂ ವಿಶೇಷ ಅಭಿವೃದ್ಧಿ ಅನುದಾನದಡಿ ಪ್ರಗತಿಗೆ ಒತ್ತು ನೀಡುವಂತೆ ಸಮಿತಿ ಶಿಫಾರಸು ಮಾಡಿತ್ತು. ಹೈಕ ಅಭಿವೃದ್ಧಿ ಹಾಗೂ ವಿಶೇಷ ಸ್ಥಾನದ ಹೋರಾಟ ಪ್ರತ್ಯೇಕ ರಾಜ್ಯದ ಬೇಡಿಕೆ, ಪ್ರತ್ಯೇಕ ಧ್ವಜಾರೋಹಣ ಮಟ್ಟಕ್ಕೂ ತಲುಪಿತ್ತು.
ಜನರ ಬೇಡಿಕೆ-ಹೋರಾಟ ಹಾಗೂ ರಾಜಕೀಯ ಕಾರಣಗಳಿಂದ 2013ರಲ್ಲಿ ಕೇಂದ್ರ ಸರ್ಕಾರ ಹೈಕ ಭಾಗಕ್ಕೆ 371(ಜೆ)ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿತ್ತು. ಇದರ ಅಡಿಯಲ್ಲಿಯೇ ರಾಜ್ಯ ಸರ್ಕಾರ 2013ರ ನ.6ರಂದು ಹೈಕ ಅಭಿವೃದ್ಧಿ ಮಂಡಳಿಯನ್ನು, ಹೈಕ ಪ್ರದೇಶ ಅಭಿವೃದ್ಧಿ ಮಂಡಳಿಯಾಗಿ ಬದಲಾಯಿಸಿ, ಅದಕ್ಕೆ ಸ್ವಾಯತ್ತ ಸ್ಥಾನ ನೀಡಿತ್ತು. ವಿಶೇಷ ಸ್ಥಾನ ಸೌಲಭ್ಯಗಳ ಅನುಷ್ಠಾನಕ್ಕೆ ಸಚಿವರಾಗಿದ್ದ ಎಚ್. ಕೆ.ಪಾಟೀಲ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. 2014ರಲ್ಲಿ ಸ್ವಾಯತ್ತ ಮಂಡಳಿ ಅಧ್ಯಕ್ಷರಾಗಿ ಸಚಿವ ಖಮರುಲ್ ಇಸ್ಲಾಂ ನೇಮಕಗೊಂಡಿದ್ದರು.000000 ನಂತರದಲ್ಲಿ ಈ ಸ್ಥಾನವನ್ನು
ಶರಣಪ್ರಕಾಶ ಪಾಟೀಲ, ರಾಜಶೇಖರ ಪಾಟೀಲ ಇನ್ನಿತರರು ನಿರ್ವಹಿಸಿದ್ದರು.
ಮಂಡಳಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿಸಬೇಕೆಂದು
ಕ್ರಮ ಕೈಗೊಳ್ಳಲಾಗಿತ್ತು. ಹೈಕ ಅಭಿವೃದ್ದಿ ಮಂಡಳಿ ಇದ್ದಾಗ ಹೈಕ ಭಾಗದ ಶಾಸಕರು, ಪಕ್ಷದ ಕಾರ್ಯಕರ್ತರು ಸಹ ಅಧ್ಯಕ್ಷರಾಗಿದ್ದು ಇದೆ. ಇದೀಗ ಸಚಿವರ ಬದಲು ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಸರ್ಕಾರದ ಚಿಂತನೆ ವಿವಾದ ಕಿಡಿ ಹೊತ್ತಿಸಿದೆ.
ವೈಜ್ಞಾನಿಕ ಕ್ರಿಯಾ ಯೋಜನೆಯೇ ಇಲ್ಲ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿ ಸರಿ ಸುಮಾರು ಮೂರು ದಶಕ ಸಮೀಪಿಸುತ್ತಿದ್ದರೂ, ಯಾವ ಕೆಲಸಗಳಾಗಬೇಕು,
ಯಾವ ಭಾಗಕ್ಕೆ ಆದ್ಯತೆ ನೀಡಬೇಕು, ಅನುದಾನ ಹಂಚಿಕೆಗೆ ನಿಯಮಗಳೇನು ಕುರಿತಾಗಿ ವೈಜ್ಞಾನಿಕ ಕ್ರಿಯಾ ಯೋಜನೆಯೇ ಇಲ್ಲವಾಗಿದೆ.
ಅಧಿಕಾರಯುತ ಇಲ್ಲವೆ ಪ್ರಭಾವ ಬೀರಬಹುದಾದ ಶಾಸಕರು ಪತ್ರ ಕೊಟ್ಟ ಕಾಮಗಾರಿಗಳಿಗೆ ಅನುದಾನ ನೀಡುವಂತಾಗಿದೆ. ಹೋಬಳಿಯನ್ನು ಕೇಂದ್ರವಾಗಿಟ್ಟುಕೊಂಡು, ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದರ ಅಧ್ಯಯನ ನಡೆಸಿ ಕಾಲಮಿತಿ ಕ್ರಿಯಾ ಯೋಜನೆ ರೂಪಿಸಬೇಕಾಗಿತ್ತು. ಅಗತ್ಯ ಸಿಬ್ಬಂದಿ, ತಜ್ಞರ ಕೊರತೆ ಇದೆ ಎಂಬ ನೆಪದಲ್ಲಿ ಸರ್ಕಾರ ಇದುವರೆಗೂ ವೈಜ್ಞಾನಿಕ ಕ್ರಿಯಾ ಯೋಜನೆಯೇ ರೂಪಿಸಿಲ್ಲ. ಕ್ರಿಯಾ ಯೋಜನೆಯೇ ಇಲ್ಲವೆಂದರೆ ಮಂಡಳಿ ಅಸ್ತಿತ್ವ ಹಾಗೂ ಸ್ವಾಯತ್ತತೆಯ ಪ್ರಶ್ನೆ ಎದುರಾಗುತ್ತದೆ ಎಂಬುದು ಹೈಕ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಗಸ್ತಿ ಅನಿಸಿಕೆ.
ಶೇ.50ರಷ್ಟು ವೆಚ್ಚವಾಗುತ್ತಿಲ್ಲ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸರ್ಕಾರಗಳು 1,500 ಕೋಟಿ ರೂ. ಅನುದಾನ ನೀಡಿದ್ದಾಗಿ ಹೇಳುತ್ತವೆ. ಆದರೆ, ಕ್ರಿಯಾ ಯೋಜನೆ ರೂಪುಗೊಳ್ಳುವುದೇ 1,000 ಕೋಟಿ ರೂ. ಗೆ. ಇದರಲ್ಲೂ ಅನುಷ್ಠಾನ ರೂಪ ಪಡೆದುಕೊಳ್ಳುವುದು ಶೇ.50ರಷ್ಟು ಮಾತ್ರ. ಹೀಗಾದರೆ ಈ ಭಾಗದ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ. 371(ಜೆ) ಕಲಂ ಬಂದಿದೆ ಎಂಬುದು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಅದು ಅರ್ಥ ಕಳೆದುಕೊಂಡಿದೆ. ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವ ಸ್ಥಾನ, ಯೋಜನೆ ರೂಪನೆಗೆ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ರಚನೆ ಬೇಡಿಕೆಗಳು ಹಾಗೇ ಉಳಿದಿವೆ. ಹೀಗಾದರೆ ಅಭಿವೃದ್ಧಿ ವೇಗ ಹೆಚ್ಚಲು ಹೇಗೆ ಸಾಧ್ಯ ಎಂಬುದು ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಝಾಕ್ ಉಸ್ತಾದ್ ಪ್ರಶ್ನೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮೂಲ ಕಾಯ್ದೆಯಂತೆ ರಾಜ್ಯಪಾಲರು ಅಧ್ಯಕ್ಷರಾಗಲಿ, ಕಾರ್ಯಾಧ್ಯಕ್ಷರನ್ನಾಗಿ ಸಚಿವ ಇಲ್ಲವೇ ಶಾಸಕರನ್ನು ನೇಮಕ ಮಾಡಲಿ. ಕನಿಷ್ಟ ಮೂರು ತಿಂಗಳಿಗೊಮ್ಮೆ ರಾಜ್ಯಪಾಲರು ಪ್ರಗತಿ ಪರಿಶೀಲನೆ ಸಭೆ ನಡೆಸಿದರೆ ಸಚಿವರು, ಶಾಸಕರು, ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ. ಮಂಡಳಿಯ ಸ್ವಾಯತ್ತತೆ ಹಾಗೂ ಗಂಭೀರತೆಗೆ ಹೆಚ್ಚು ಒತ್ತು ಬರುತ್ತದೆ. ಪ್ರತ್ಯೇಕ ಸಚಿವಾಲಯ ಅನುಷ್ಠಾನ ನಿಟ್ಟಿನಲ್ಲಿ ಸಿಎಂ ಬಳಿ ನಿಯೋಗ ತೆರಳಿ ಒತ್ತಾಯ ಮಾಡಲಿದ್ದೇವೆ.
ಲಕ್ಷ್ಮಣ ದಸ್ತಿ,
ಸಂಸ್ಥಾಪಕ ಅಧ್ಯಕ್ಷ, ಹೈಕ ಜನಪರ ಸಂಘರ್ಷ ಸಮಿತಿ
ಕಲ್ಯಾಣ ಕರ್ನಾಟಕ ಎಂದು ಕೇವಲ ಘೋಷಣೆಯಾದರೆ ಸಾಲದು, ಸಂವಿಧಾನಾತ್ಮಕವಾಗಿ ತಿದ್ದುಪಡಿಯೊಂದಿಗೆ ಕಾನೂನಾತ್ಮಕ ಸ್ಥಾನ ಪಡೆಯಬೇಕು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಚಿವರು ಅಧ್ಯಕ್ಷರಾಗುವುದೇ ಸೂಕ್ತ. ಸಂಪುಟದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಾಧ್ಯ. ಇದು ಪುನರ್ವಸತಿ ಕೇಂದ್ರವಾಗುವುದು ಬೇಡ. ಈ ಹಿಂದೆ ಅದರ ಅನುಭವ ಈ ಭಾಗದ ಜನರಿಗಾಗಿದೆ. ಶಾಸಕರನ್ನೇ ಅಧ್ಯಕ್ಷರನ್ನಾಗಿಸಲು ಸರ್ಕಾರ ಮುಂದಾದಲ್ಲಿ ಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಲಿದೆ.
ಡಾ| ರಝಾಕ್ ಉಸ್ತಾದ,
ಉಪಾಧ್ಯಕ್ಷ, ಹೈಕ ಹೋರಾಟ ಸಮಿತಿ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.