ಅಖಂಡ ಭಾರತವಾದರೆ ಪಾಕ್‌-ಬಾಂಗ್ಲಾ ಮುಸ್ಲಿಂಮರಿಗೂ ಪೌರತ್ವ: ತೇಜಸ್ವಿ ಸೂರ್ಯ

ಕೆಲ ಕಾಂಗ್ರೆಸ್‌ ಮುಖಂಡರ ಭಂಡ ವಾದ-ಗೊಂದಲ ಸೃಷ್ಠಿಯಿಂದ ಗಲಭೆ

Team Udayavani, Dec 26, 2019, 4:10 PM IST

26-December-15

ಹುಬ್ಬಳ್ಳಿ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಕಿತ್ತು ಹಾಕಿ ಅಖಂಡ ಭಾರತ ಮಾಡಿದರೆ ಅಲ್ಲಿರುವ ಮುಸಲ್ಮಾನರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕ ನಾಗಶೆಟ್ಟಿಕೊಪ್ಪದ ಮಾರುತಿ ಮಂದಿರದ ಎದುರು ಬುಧವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಲ್ಲಿ ತೊಂದರೆ ಅನುಭವಿಸುತ್ತಿರುವ ಹಾಗೂ ಭಾರತದಲ್ಲಿ ನೆಲೆಸಲು ಬಯಸುವ ಅಲ್ಲಿನ ಅಲ್ಪಸಂಖ್ಯಾರಾದ ಹಿಂದೂಗಳು, ಸಿಖ್‌ರು, ಕ್ರಿಶ್ಚಿಯನ್ನರು, ಬೌದ್ಧರು ಹಾಗೂ ಜೈನರಿಗೆ ಭಾರತದ ಪೌರತ್ವ ನೀಡುವ ಉದ್ದೇಶವಿದೆ. ಆದರೆ ಮೂರು ರಾಷ್ಟ್ರಗಳಲ್ಲಿರುವ ಮುಸಲ್ಮಾನರಿಗೂ ಪೌರತ್ವ ನೀಡಬೇಕೆಂದು ಕೆಲ ಕಾಂಗ್ರೆಸ್‌ ಮುಖಂಡರು ಭಂಡ ವಾದ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ಯು.ಟಿ. ಖಾದರ್‌ ಮೊದಲಾದವರು ಉದ್ದೇಶ ಪೂರ್ವಕವಾಗಿ ಇಲ್ಲಿನ ಮುಸಲ್ಮಾನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಮುಗ್ಧ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದ್ದಾರೆ. ಜನರು ಜಾಗೃತರಾಗಿ ಅಂಥವರ ಮಾತಿಗೆ ಕಿವಿಗೊಡದೇ ಕಾಯ್ದೆಯ ಉದ್ದೇಶ ಅರಿತುಕೊಳ್ಳುವುದು ಅವಶ್ಯಕವಾಗಿದೆ. ಢೋಂಗಿ ಜಾತ್ಯತೀತತೆ ಖಂಡಿಸಬೇಕಿದೆ ಎಂದು ತಿಳಿಸಿದರು.

ಭಾರತದಲ್ಲಿ ಹಿಂದೂಗಳಿಗೆ ಇದ್ದಷ್ಟೇ ಅಧಿಕಾರ ಇಲ್ಲಿನ ಮುಸಲ್ಮಾನರಿಗೂ ಇದೆ. ಆದ್ದರಿಂದ ಇಲ್ಲಿನ ಮುಸಲ್ಮಾನರನ್ನು ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಕಳಿಸಲಾಗುವುದೆಂಬ ಸುಳ್ಳು ಸುದ್ದಿಯನ್ನು ಕಾಂಗ್ರೆಸ್ಸಿಗರು ಹಾಗೂ ಕೆಲವು ಬುದ್ಧಿಜೀವಿಗಳು ಬಿತ್ತುತ್ತಿದ್ದಾರೆ. ಜನರು ಜಾಗೃತಗೊಂಡರೆ ಕಾಂಗ್ರೆಸ್‌ ಮುಖಂಡರ ಯಾವುದೇ ಆಟ ನಡೆಯುವುದಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಜನಪರ ಆಡಳಿತಕ್ಕೆ ಕೆಟ್ಟ ಹೆಸರು ತರಲು ಮಾಡುತ್ತಿರುವ ಷಡ್ಯಂತ್ರವನ್ನು ಜನರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

1947ರಲ್ಲಿ ಪಾಕಿಸ್ತಾನದಲ್ಲಿ ಶೇ.15ರಷ್ಟು ಹಿಂದೂಗಳಿದ್ದರು. ಆದರೆ ಈಗ ಅವರ ಸಂಖ್ಯೆ ಶೇ.2ರಷ್ಟಾಗಿದೆ. ಅದೇ ರೀತಿ ಬಾಂಗ್ಲಾದೇಶದಲ್ಲಿ 1971ರಲ್ಲಿ ಶೇ.22ರಷ್ಟು ಹಿಂದೂಗಳಿದ್ದರು. ಪ್ರಸ್ತುತ ಅವರ ಸಂಖ್ಯೆ ಶೇ.8ಕ್ಕೆ ಇಳಿಮುಖವಾಗಿದೆ. ಬಲವಂತದ ಮತಾಂತರ, ಹತ್ಯೆ ಇದಕ್ಕೆ ಕಾರಣವಾಗಿದೆ. ಹಲವರು ಅಲ್ಲಿನ ದೌರ್ಜನ್ಯಕ್ಕೆ ರೋಸಿ ಹೋಗಿ ಭಾರತಕ್ಕೆ ಬಂದು ನೆಲೆಸಿದ್ದಾರೆ.

ಅಂಥವರಿಗೆ ಇಲ್ಲಿನ ಪೌರತ್ವ ನೀಡಬೇಕಿದೆ ಎಂದು ನುಡಿದರು. ಮುಸಲ್ಮಾನರಿಗೆ ಹಾಗೂ ಕ್ರಿಶ್ಚಿಯನ್ನರಿಗೆ ಹಲವು ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ದೇಶ. ಅದು ಭಾರತ ಮಾತ್ರ. ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಇನ್ನೂ ಕೇಂದ್ರ ಸರಕಾರ ಏನನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ ಕಾಂಗ್ರೆಸ್‌ನವರು ಇಲ್ಲ-ಸಲ್ಲದ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಮುಗ್ಧ ಅಲ್ಪಸಂಖ್ಯಾತ ಯುವಕರಿಗೆ ಕಲ್ಲೆಸೆಯಲು ಹೇಳಿ ಅವರ ಜೀವನ ಹಾಳು ಮಾಡುತ್ತಿದ್ದಾರೆ ಎಂದರು.

ಮಂಗಳೂರು ಗೋಲಿಬಾರ್‌ನಲ್ಲಿ ಮೃತರಾದವರು ಗಲಭೆ ಸೃಷ್ಟಿಸುವವರಲ್ಲಿ ಸೇರಿದವರಾಗಿದ್ದರೆ ಅವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡದಿರಲು ನಿರ್ಧರಿಸಿದ ಸಿಎಂ ಯಡಿಯೂರಪ್ಪ ಅವರ ಕ್ರಮ ಸಮರ್ಥನೀಯವಾಗಿದೆ. ಬಿಜೆಪಿ ಸರಕಾರ ಮಾತ್ರ ದಿಟ್ಟ ನಿರ್ಧಾರ ಘೋಷಿಸಲು ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ದೇಶದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಜಾರ್ಖಂಡ್‌ನ‌ಲ್ಲಿ ಕಳೆದ ಚುನಾವಣೆಯಲ್ಲಿ ಶೇ.31ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಶೇ.33ರಷ್ಟು ಮತಗಳನ್ನು ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಅಧಿಕಾರದ ಆಸೆಗಾಗಿ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಸರಕಾರ ಶೀಘ್ರದಲ್ಲೇ ಮೂರಾಬಟ್ಟೆಯಾಗಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ 4ನೇ ಸ್ಥಾನ ಪಡೆದುಕೊಂಡಿದ್ದರೆ, ಜಾರ್ಖಂಡ್‌ನ‌ಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಮುಸಲ್ಮಾನರು ಕಾಂಗ್ರೆಸ್‌ನಿಂದ ವಿಮುಖರಾಗುತ್ತಿರುವುದರಿಂದ ಹತಾಶೆ ಗೊಂಡಿರುವ ಕಾಂಗ್ರೆಸ್‌ ಮುಖಂಡರು, ಗೊಂದಲ ಸೃಷ್ಟಿಸುವ, ಭೀತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನು ಮುಸಲ್ಮಾನರು ಅರ್ಥ ಮಾಡಿಕೊಳ್ಳಬೇಕು ಎಂದರು.

ನಾಗೇಶ ಕಲಬುರ್ಗಿ ಮಾತನಾಡಿದರು. ಮುಖಂಡರಾದ ಪ್ರದೀಪ ಶೆಟ್ಟರ, ಮೋಹನ ಲಿಂಬಿಕಾಯಿ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಲ್ಲಿಕಾರ್ಜುನ ಸಾವಕಾರ, ಶಿವಾನಂದ ಮುತ್ತಣ್ಣವರ, ಜಯತೀರ್ಥ ಕಟ್ಟಿ, ಚಳ್ಳಮರದಶೇಖ್‌, ಮಹ್ಮದಶಫಿ ಬಿಜಾಪುರಿ, ಲಕ್ಷ್ಮಣ ಬೀಳಗಿ, ಸಿದ್ದು ಇದ್ದರು.

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.