ಸೇವಾ ಸದನದಲ್ಲಿ ಮೊಳಗಿದ ಮಂಗಳ ವಾದ್ಯ
ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಜಾಹ್ನವಿ-ಕಿರಣರಾಜ್, ಸಂಜನಾ-ರವೀಂದ್ರ ಭಟ್
Team Udayavani, Aug 29, 2019, 12:47 PM IST
ಹುಬ್ಬಳ್ಳಿ: ಕೇಶ್ವಾಪುರದ ಸೇವಾ ಸದನದ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ನಡೆದ ಮದುವೆಗೆ ಗಣ್ಯರು ಸಾಕ್ಷಿಯಾದರು.
ಹುಬ್ಬಳ್ಳಿ: ಕೇಶ್ವಾಪುರದ ಬನಶಂಕರಿ ಬಡಾವಣೆಯ ಸೇವಾ ಸದನದ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿದ್ದು ವಿದ್ಯಾರ್ಜನೆ ಮಾಡಿದ ಇಬ್ಬರು ಯುವತಿಯರು ಬುಧವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಈ ಅಪರೂಪದ ಮದುವೆಗೆ ಗಣ್ಯರು ಸಾಕ್ಷಿಯಾದರು.
ಜಾಹ್ನವಿ ಹಾಗೂ ಸಂಜನಾ ಸಪ್ತಪದಿ ತುಳಿದ ಯುವತಿಯರು. ಜಾಹ್ನವಿ ಅಂಕೋಲಾ ತಾಲೂಕಿನ ಹೆಗ್ಗದ್ದೆಯ ಕಿರಣರಾಜ್‌ರನ್ನು, ಸಂಜನಾ ಇದೇ ತಾಲೂಕಿನ ಅಚವೆ ತಾರಿಗದ್ದೆಯ ರವೀಂದ್ರ ಭಟ್ರನ್ನು ವರಿಸಿದರು. ಇಬ್ಬರೂ ಯುವಕರು ಕೃಷಿ ಮಾಡಿಕೊಂಡಿದ್ದು, ಅಡಿಕೆ, ತೆಂಗು, ಮಾವಿನ ತೋಟವಿದ್ದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಮಂಗಳವಾರದಿಂದಲೇ ಮದುವೆಯ ಸಿದ್ಧತಾ ಕಾರ್ಯಗಳು ನಡೆದಿದ್ದವು. ಚಪ್ಪರ ಪೂಜೆ, ಮೆಹಂದಿ ಕಾರ್ಯಕ್ರಮಗಳು ನಡೆದವು. ಸುತ್ತಲಿನ ಬಡಾವಣೆಯ ಮಹಿಳೆಯರು ಮದುವೆ ಸಿದ್ಧತೆಯಲ್ಲಿ ಪಾಲ್ಗೊಂಡರು. ಕೆಲ ತಿಂಗಳ ಹಿಂದೆ ಎರಡೂ ವರ ಕುಟುಂಬಗಳು ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿದ್ದರು. ಕೇಂದ್ರದ ವತಿಯಿಂದ ಎರಡೂ ಕುಟುಂಬದವರ ಮನೆಗೆ ತೆರಳಿ ಸ್ಥಿತಿ-ಗತಿ ತಿಳಿದು ಮದುವೆಗೆ ಸಮ್ಮತಿಸಲಾಗಿತ್ತು. ಜಾಹ್ನವಿ ಎಸ್‌ಎಸ್‌ಎಲ್ಸಿವರೆಗೆ ಶಿಕ್ಷಣ ಪಡೆದಿದ್ದು, ಕಳೆದ 4 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸಂಜನಾ ಹೋಮ್ ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ 12:45ಕ್ಕೆ ಗುರು ಹಿರಿಯರ ಸಮ್ಮುಖದಲ್ಲಿ ಗಣ್ಯರು ನವದಂಪತಿಗಳಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ನಂದಕುಮಾರ- ಭಾರತಿ ನಂದಕುಮಾರ (ಜಾಹ್ನವಿ) ಮತ್ತು ಶಾಂತಣ್ಣ ಕಡಿವಾಲ-ಗೀತಾಂಜಲಿ ಕಡಿವಾಲ (ಸಂಜನಾ) ಕನ್ಯಾದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.