ನೀರು ಬಳಕೆದಾರರ ಸಂಘಗಳು ನಿಷ್ಕ್ರಿಯ

•ಶೇ.50 ಸಂಘಗಳು ಹೆಸರಿಗಷ್ಟೇ ಸೀಮಿತ •ನೋಂದಣಿಯಾದ 3,235 ಪೈಕಿ ಕೇವಲ 1,669 ಸಕ್ರಿಯ

Team Udayavani, Jul 4, 2019, 9:56 AM IST

04-July-2

ಅಮರೇಗೌಡ ಗೋನವಾರ
ಹುಬ್ಬಳ್ಳಿ:
ಜಲ ಸಂರಕ್ಷಣೆ, ನೀರಿನ ಸದ್ಬಳಕೆಯ ಸಹಭಾಗಿತ್ವ ಮಹದಾಸೆಯೊಂದಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಆರಂಭಿಸಲಾಗಿತ್ತು. ರಾಜ್ಯದಲ್ಲಿ ಇಲ್ಲಿವರೆಗೆ ನೋಂದಣಿಯಾದ ಒಟ್ಟು ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ಶೇ.50ರಷ್ಟು ಸಂಘಗಳು ನಿಷ್ಕ್ರಿಯವಾಗಿವೆ.

ನೀರಾವರಿ ಸೌಲಭ್ಯದಡಿ ಎಲ್ಲರಿಗೂ ಸಮಾನ ನೀರು ಹಂಚಿಕೆ, ಮುಖ್ಯವಾಗಿ ಕೊನೆ ಭಾಗದ ರೈತರಿಗೆ ನೀರು ತಲುಪಬೇಕು ಎಂಬ ಉದ್ದೇಶದಿಂದ ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸ್ಪಷ್ಟ ರೂಪ ನೀಡಲಾಗಿತ್ತು. ಆರಂಭದಲ್ಲೇ ರಾಜಕೀಯ ಸೋಂಕು ಪಡೆದಂತಾಗಿದ್ದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

ರಾಜ್ಯದ ಆಯಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರಾವರಿ ಜಮೀನಿಗೆ ನೀರು ನೀಡಿಕೆ, ನೀರು ಪೋಲು ತಪ್ಪಿಸುವುದು, ವಿತರಣಾ ಹಾಗೂ ಹೊಲಗಾಲುವೆಗಳ ಸಣ್ಣಪುಟ್ಟ ದುರಸ್ತಿ, ಸ್ವಚ್ಛತೆ, ಸಮರ್ಪಕ ನೀರಿನ ಹಂಚಿಕೆಯ ಮಹತ್ವದ ಜವಾಬ್ದಾರಿ ಸಂಘಗಳಿಗಿದೆ. ಹಲವು ಪೂರ್ವಗ್ರಹ ಪೀಡಿತ ಅನಿಸಿಕೆಗಳು, ಸರ್ಕಾರಗಳ ಉದಾಸೀನತೆ, ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ದಷ್ಟಪುಷ್ಟವಾಗಿ ಬೆಳೆಯಬೇಕಾಗಿದ್ದ ಸಂಘಗಳು ನಿಧಾನಕ್ಕೆ ಸೊರಗತೊಡಗಿದವು. ಅರ್ಧದಷ್ಟು ಸಂಘಗಳು ಇಂದು ದಾಖಲೆಗಳಿಗೆ ಸೀಮಿತ ಎನ್ನುವಂತಿವೆ.

ನೋಂದಣಿ 3,235, ಸಕ್ರಿಯ 1,669: ನೀರಿನ ಸದ್ಬಳಕೆ ಹಾಗೂ ಸುಸ್ಥಿರ ನೀರಾವರಿ ವ್ಯವಸ್ಥೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1987ರ ಜಲನೀತಿ ಅನ್ವಯ ಪಾಲುದಾರಿಕೆ ನೀರಾವರಿ ನಿರ್ವಹಣೆ(ಪಿಐಎಂ)ರೂಪಿಸಿತ್ತು. ಅದರ ಅಡಿಯಲ್ಲಿ ನೀರು ಬಳಕೆದಾರರ ಅಸೋಸಿಯೇಶನ್‌ಗಳನ್ನು ರಚಿಸಲಾಗಿತ್ತು. ಕೇಂದ್ರ ಸರ್ಕಾರದ ಪಿಐಎಂ ಬೆಂಬಲಿಸಿ 15 ರಾಜ್ಯಗಳು ಶಾಸನ ರಚಿಸಿದ್ದು, ಸುಮಾರು 24 ರಾಜ್ಯಗಳಲ್ಲಿ ಸುಮಾರು 13.5 ಮಿಲಿಯನ್‌ ಹೆಕ್ಟೇರ್‌ ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿ 57,000 ನೀರು ಬಳಕೆದಾರರ ಅಸೋಸಿಯೇಶನ್‌ಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲೂ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಕರ್ನಾಟಕ ನೀರಾವರಿ ಕಾಯ್ದೆ 2002ರ ಅಡಿಯಲ್ಲಿ ಸ್ಥಾಪಿಸಬಹುದಾಗಿದ್ದು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ನೋಂದಾಯಿಸಬೇಕಾಗಿದೆ. ಹಾಗೂ ಕರ್ನಾಟಕ ನೀರಾವರಿ ನಿಗಮದೊಂದಿಗೆ ಪರಸ್ಪರ ತಿಳಿವಳಿಕೆ ಒಡಂಬಡಿಕೆ (ಎಂಒಯು)ಮಾಡಿಕೊಳ್ಳಬೇಕಾಗಿದೆ. ರಾಜ್ಯ ಆರು ನೀರಾವರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಹೊಂದಿದೆ.

ನೀರಾವರಿ ಪ್ರದೇಶ ಎಷ್ಟು?: ತುಂಗಭದ್ರ ಪ್ರೊಜೆಕ್ಟ್ ಅಡಿಯಲ್ಲಿ ಸುಮಾರು 4,66,339 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೆ, ಮಲಪ್ರಭಾ-ಘಟಪ್ರಭಾ ಅಡಿಯಲ್ಲಿ 6,50,377 ಹೇಕ್ಟರ್‌, ಕಾವೇರಿ ಪ್ರೊಜೆಕ್ಟ್ ಅಡಿಯಲ್ಲಿ 7,00,558 ಹೆಕ್ಟೇರ್‌, ಕೃಷ್ಣ ಮೇಲ್ದಂಡೆ ಪ್ರೊಜೆಕ್ಟ್ ಅಡಿಯಲ್ಲಿ 6,48,200 ಹೆಕ್ಟೇರ್‌, ಭದ್ರಜಲಾಶಯ ಪ್ರೊಜೆಕ್ಟ್ ಅಡಿಯಲ್ಲಿ 2,66,217 ಹೆಕ್ಟೇರ್‌, ನೀರಾವರಿ ವಲಯ ಪ್ರೊಜೆಕ್ಟ್ ಅಡಿಯಲ್ಲಿ 1,45,066 ಹೆಕ್ಟೇರ್‌ ನೀರಾವರಿ ಪ್ರದೇಶ ಬರುತ್ತದೆ.

ನೀರಾವರಿ ಪ್ರದೇಶದಲ್ಲಿ ನೀರಿನ ನಿರ್ವಹಣೆ ಹಾಗೂ ನೀರಿನ ಸದ್ಬಳಕೆ ಉದ್ದೇಶದೊಂದಿಗೆ ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಆರಂಭಿಸಲಾಗಿತ್ತು. ಇದುವರೆಗೆ ರಾಜ್ಯದಲ್ಲಿ ಸುಮಾರು 3,235 ನೀರು ಬಳಕೆದಾರರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಇದರಲ್ಲಿ 2,313 ಸಂಘಗಳು ಪರಸ್ಪರ ತಿಳಿವಳಿಕೆ ಒಡಂಬಡಿಕೆ ಮಾಡಿಕೊಂಡಿವೆ. ಇದರಲ್ಲಿ 1,669 ಸಂಘಗಳು ಮಾತ್ರ ವಾಸ್ತವಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.

ರಾಜ್ಯದಲ್ಲಿನ ನೀರಾವರಿ ಪ್ರದೇಶ ವ್ಯಾಪ್ತಿಗನುಗುಣವಾಗಿ ನೀರಾವರಿ ನಿರ್ವಹಣೆಗೆ ಸುಮಾರು 5,000ಗಳ ರಚನೆ ಗುರಿ ಹೊಂದಲಾಗಿತ್ತು. ಇದುವರೆಗೆ ನೋಂದಣಿ ಆಗಿದ್ದು 3,235 ಮಾತ್ರ ಅದರಲ್ಲಿ ಅರ್ಧದಷ್ಟು ಸಂಘಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆ ತೋರದೆ ನಿಷ್ಕ್ರಿಯತೆಗೆ ಜಾರಿವೆ. ಇದ್ದ 1,669 ಸಂಘಗಳಲ್ಲಿಯ ಕೆಲವೊಂದು ಅತ್ಯುತ್ತಮ ಸಾಧನೆ ತೋರಿದರೆ, ಇನ್ನು ಕೆಲವು ಹಲವು ಸಮಸ್ಯೆಗಳ ಸುಳಿಗೆ ಸಿಲುಕಿವೆ. ಸಮಸ್ಯೆಗಳಿಂದ ಹೊರಬರಲು ಸೆಣಸುತ್ತಿವೆ.

ನೀರನ ಬಳಕೆ ಸಾಮರ್ಥ್ಯ ಹೆಚ್ಚಳ, ನೀರಿನ ಹಂಚಿಕೆಯಲ್ಲಿ ಸಮಾನತೆ, ಭೂಮಿ-ನೀರಿನ ಉತ್ಪಾದಕತೆ ಹೆಚ್ಚಿಸುವುದು, ನೀರಿನ ಬಳಕೆಯಲ್ಲಿ ಆರ್ಥಿಕತೆ ಮಿತವ್ಯಯ ಅರಿವು, ನೆಲ-ಜಲ ಸಂರಕ್ಷಣೆ, ಬೆಳೆ ಉತ್ಪಾದಕತೆ ಹಾಗೂ ಆದಾಯ ಹೆಚ್ಚಳದ ಮೂಲಕ ರೈತರ ಒಟ್ಟಾರೆ ಕ್ಷೇಮಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನೀರಾವರಿ ನಿರ್ವಹಣೆಯಲ್ಲಿ ರೈತರು, ಬಳಕೆದಾರರ ಸಹಭಾತ್ವವನ್ನು ಪರಿಣಾಮಕಾರಿಯಾಗಿ ಹೊಂದುವ ಮಹತ್ವದ ಉದ್ದೇಶದೊಂದಿಗೆ ಆರಂಭವಾಗಿದ್ದ ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ಇಂದು ಅನೇಕವೂ ಇದ್ದು ಇಲ್ಲದ ಸ್ಥಿತಿಗೆ ತಲುಪಿದ್ದು, ಅವುಗಳ ಪುನಶ್ಚೇತನಕ್ಕೆ ಸರ್ಕಾರ ಪ್ರಮಾಣಿಕ ಯತ್ನ ತೋರಬೇಕಿದೆ. ಜತೆಗೆ ಪಾಲುದಾರರು ತಮ್ಮ ಸಕ್ರಿಯತೆ ತೋರಬೇಕಾಗಿದೆ.

ರಾಜಕೀಯ ಮುಕ್ತವಾಗಲಿ
ನೀರು ಬಳಕೆದಾರರ ಸಹಕಾರ ಸಂಘಗಳ ಆರಂಭಿಕ ಸಂದರ್ಭದಲ್ಲೇ ಇವುಗಳನ್ನು ರಾಜಕೀಯ ಗಂಜಿ ಕೇಂದ್ರ ಮಾದರಿಯಲ್ಲಿ ಬಿಂಬಿಸುವ ಯತ್ನ ನಡೆದಿತ್ತು. ಇದರಿಂದಾಗಿಯೇ ಸಂಘದ ಮುಖ್ಯಸ್ಥನ ಬೆಂಬಲಿಸುವ ಪಕ್ಷದ ಆಧಾರದಲ್ಲೇ ಅವುಗಳನ್ನು ನೋಡಿದವರೆ ಹೆಚ್ಚು. ಆ ಪಕ್ಷಗಳ ಬೆಂಬಲಿಗರೇ ಸಂಘದಲ್ಲಿ ಮೇಲುಗೈ ಪಡೆದು ಉದಾಹರಣೆಗಳು ಇಲ್ಲದಿಲ್ಲ. ನೀರು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಜಾತಿ, ಮತ, ಧರ್ಮ, ಪಕ್ಷಗಳನ್ನು ಮೀರಿದ್ದು ಎಂಬ ತಿಳಿವಳಿಕೆ ಬರಬೇಕಾಗಿದೆ. ಮೂಲ ಉದ್ದೇಶದ ಅರಿವಿನೊಂದಿಗೆ ಸಂಘಗಳನ್ನು ಆದಷ್ಟು ರಾಜಕೀಯ ಸೋಂಕಿನಿಂದ ಮುಕ್ತವಾಗಿಸಬೇಕಿದೆ.

ಜಾಗತಿಕವಾಗಿ ಜಲಕ್ಷಾಮ ತೀವ್ರತೆ ಪಡೆಯುತ್ತಿದೆ. ನಗರಗಳು ಬೆಳೆದಂತೆ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂಬಂತೆ ಜಲಾಶಯಗಳ ಮೇಲೆ ಅವಲಂಬನೆ-ಒತ್ತಡ ಹೆಚ್ಚುತ್ತಿದ್ದು, ಕೃಷಿಗೆ ನೀರು ಕೊರತೆ ಹೆಚ್ಚುತ್ತಲೇ ಸಾಗುತ್ತಿದೆ. ಎರಡು ಬೆಳೆಗಳಿಗೆ ನೀರು ಸಿಗುತ್ತಿರುವ ಪ್ರದೇಶದ ಕೃಷಿ ಒಂದೇ ಬೆಳೆಗೆ ಬಂದು ನಿಂತಿದೆ. ಒಂದು ಬೆಳೆ ಬೆಳೆಯುವರಿಗೆ ನೀರಿಲ್ಲದೆ, ನೀರಾವರಿ ಸೌಲಭ್ಯ ಹೊಂದಿದ್ದರೂ ಮಳೆಗಾಗಿ ಮುಗಿಲು ನೋಡಬೇಕಾಗಿದೆ. ಜಲಕ್ಷಾಮ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಜಲ ಸಂರಕ್ಷಣೆ, ಸದ್ಬಳಕೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಜಲಜಾಗೃತಿ, ಲಭ್ಯ ನೀರಿನ ಸದ್ಬಳಕೆ ನಿಟ್ಟಿನಲ್ಲಿ ಅರಿವಿನ ಅಭಿಯಾನದಡಿ ‘ಉದಯವಾಣಿ’ಯ ಯತ್ನವಿದು.

ಟಾಪ್ ನ್ಯೂಸ್

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.