ನೀರು ಹರಿಯುವ ಕಾಲುವೆ ಮುಚ್ಚಿದ ಗುತ್ತಿಗೆದಾರ!
ಲೋಡ್‌ಗಟ್ಟಲೆ ಡಾಂಬರು ತ್ಯಾಜ್ಯದಿಂದ ತೊಂದರೆ • ವಿಲೇವಾರಿ ಮಾಡಲು ಸ್ಥಳೀಯರ ಆಗ್ರಹ
Team Udayavani, Jul 25, 2019, 4:02 PM IST
ಹುಳಿಯಾರು ಕೆರೆಗೆ ತಿಮ್ಲಾಪುರ ಕೆರೆಯಿಂದ ನೀರು ಹರಿಸಲು ನಿರ್ಮಿಸಿರುವ ಕಾಲುವೆಗೆ ಹಳೆಯ ಡಾಂಬರ್ ರಸ್ತೆ ತ್ಯಾಜ್ಯ ಸುರಿದಿರುವುದು.
ಎಚ್.ಬಿ.ಕಿರಣ್ ಕುಮಾರ್
ಹುಳಿಯಾರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 243ರ ಕಾಮಗಾರಿ 1 ವರ್ಷದಿಂದ ನಡೆಯುತ್ತಿದೆ. ನೀಲನಕ್ಷೆ ತಿರುಚಿರುವುದು, ಚರಂಡಿ ಸ್ಲ್ಯಾಬ್ ಕಳಪೆ, ಮಂದಗತಿ ಕಾಮಗಾರಿ, ರಸ್ತೆಗೆ ನೀರು ಹಾಕದಿರುವುದು ಹೀಗೇ ಹಲವು ದೂರುಗಳು ಕಾಮಗಾರಿ ಆರಂಭವಾದ ದಿನದಿಂದ ಗುತ್ತಿಗೆದಾರರ ಮೇಲೆ ಒಂದಿಲ್ಲೊಂದು ಕೇಳಿಬರುತ್ತಲೇ ಇತ್ತು. ಈಗ ಹೊಸದಾಗಿ ಕೆರೆಯ ಕಾಲುವೆ ಮುಚ್ಚಿರುವ ಆರೋಪ ಕೇಳಿಬಂದಿದೆ.
ಕಾಮಗಾರಿ ಮಾಡುವಾಗ ಹಳೆಯ ಡಾಂಬರ್ ರಸ್ತೆ ಕಿತ್ತು ಅದನ್ನು ಹುಳಿಯಾರು ಕೆರೆಗೆ ನೀರು ಹರಿಯುವ ಕಾಲುವೆಗೆ ಸುರಿದಿದ್ದು, ಇದರಿಂದ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತಮ ಮಳೆಯಾದರೆ ಹುಳಿಯಾರು ಕೆರೆಗೆ ನೀರು ಬಾರದಂತೆ ಮಾಡಿದ್ದಾರೆ. ಡಾಂಬಾರ್ ತ್ಯಾಜ್ಯ ನಾಲೆಯಲ್ಲಿ ಉಳಿದರೆ ನೀರು ಕಲುಷಿತಗೊಂಡು ಪ್ರಾಣಿ, ಪಕ್ಷಿಗಳ ಜೀವಕ್ಕೆ ಕಂಟಕವಾಗುವ ಆತಂಕ ಕಾಡುತ್ತಿದೆ.
ಕೆರೆಗೆ ನೀರು ಹರಿಸುವ ಕಾಲುವೆ: ಯಾವುದೇ ಜಲಮೂಲ ಇಲ್ಲದ ಹುಳಿಯಾರು ಕೆರೆಗೆ ನೀರು ಹರಿಸುವ ಸಲುವಾಗಿ ಸ್ಥಳೀಯರ ಬೇಡಿಕೆ ಮೇರೆಗೆ ಮೂರು ದಶಕಗಳ ಹಿಂದೆ ತಿಮ್ಲಾಪುರ ಕೆರೆಯಿಂದ ಹುಳಿಯಾರು ಕೆರೆಗೆ ನೀರು ಹರಿಸಲು ಕಾಲುವೆ ನಿರ್ಮಿಸಲಾಗಿತ್ತು.
ಕಾಲುವೆ ನಿರ್ಮಿಸಿದ ಅನೇಕ ವರ್ಷಗಳು ತಿಮ್ಲಾಪುರ ಕೆರೆ ತುಂಬದ ಕಾರಣ ಹುಳಿಯಾರು ಕೆರೆಗೆ ನೀರು ಬರಲೇ ಇಲ್ಲ. ಹಾಗಾಗಿ ಇದು ಒಣ ಕಾಲುವೆ ಎಂದು ಕುಖ್ಯಾತಿಯಾಯಿತು. ನಂತರದ ದಿನಗಳಲ್ಲಿ ತಿಮ್ಲಾ ಪುರ ಕೆರೆ ತುಂಬಿದಾಗ ನೀರು ಹರಿದು ಹುಳಿಯಾರು ಕೆರೆಯಲ್ಲಿ ನೀರು ನಿಲ್ಲುವ ಮೂಲಕ ಕಾಲುವೆ ನಿರ್ಮಾಣ ಸಾರ್ಥಕ ಎನ್ನಿಸಿತ್ತು.
ಹೇಮೆ ನೀರು ಹರಿಯುವ ಕಾಲುವೆ: ಚಿಕ್ಕನಾಯಕನ ಹಳ್ಳಿ ತಾಲೂಕಿಗೆ ಮಂಜೂರಾಗಿರುವ ಹೇಮೆ ನೀರು ಹರಿಸುವ ಯೋಜನೆಯಲ್ಲಿ ತಿಮ್ಲಾಪುರ ಕೆರೆಯೂ ಸೇರಿದೆ. ಅಲ್ಲದೆ ಪಾವಗಡ ತಾಲೂಕಿಗೆ ಹೋಗುವ ಭದ್ರ ನೀರೂ ತಿಮ್ಲಾಪುರ ಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹೋಗುತ್ತದೆ. ಹಾಗಾಗಿ ಹೇಮೆ ಮತ್ತು ಭದ್ರ ಯೋಜನೆಯಿಂದ ತಿಮ್ಲಾಪುರ ಕೆರೆ ತುಂಬು ವುದು ಖಚಿತ ಎನ್ನಲಾಗಿದೆ. ತಿಮ್ಲಾಪುರ ಕೆರೆ ತುಂಬಿದರೆ ಹುಳಿಯಾರು ಕೆರೆಗೆ ನೀರು ಹರಿಯುತ್ತದೆ.
ಸ್ಥಳೀಯರ ಆಕ್ರೋಶ: ಹೇಮಾವತಿ ಕಾಮಗಾರಿ ಸಾಸಲು ಗ್ರಾಮದ ಬಳಿ ಶರವೇಗದಲ್ಲಿ ನಡೆಯುತ್ತಿದ್ದು, ಈ ಕಾಮಗಾರಿ ಮುಗಿದ ತಕ್ಷಣ ಹುಳಿ ಯಾರು ಒಣ ಕಾಲುವೆ ಒತ್ತುವರಿ ತೆರವು ಮಾಡಿ ಕಾಲುವೆ ಸ್ವಚ್ಛ ಮಾಡಿಸುವ ಚಿಂತನೆ ಸ್ಥಳೀಯರಲ್ಲಿತ್ತು. ಅಷ್ಟರಲ್ಲಾಗಲೇ ಗುತ್ತಿಗೆದಾರರು ಕಾಲುವೆ ಮುಚ್ಚಿ ದ್ದಾರೆ. ಕಾಮಗಾರಿ ಆರಂಭದಲ್ಲಿ ಒಣಕಾಲುವೆಗೆ ಗುತ್ತಿಗೆದರರು ಸೇತುವೆ ನಿರ್ಮಿಸಿದ್ದಾರೆ. ಆದರೂ ಸೇತುವೆ ಪಕ್ಕ ತ್ಯಾಜ್ಯ ಸುರಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.