ಅವೈಜ್ಞಾನಿಕ ಪಾದಚಾರಿ ರಸ್ತೆಗೆ ವಿರೋಧ
ಸರ್ಕಾರದ ಲಕ್ಷಾಂತರ ಹಣ ಅನಗತ್ಯ ವ್ಯಯಕಾಮಗಾರಿ ಆರಂಭಿಸಿ ಪರವಾನಗಿಗೆ ಅರ್ಜಿ!
Team Udayavani, Apr 12, 2019, 10:56 AM IST
ಹುಮನಾಬಾದ: ಡಾ| ಅಂಬೇಡ್ಕರ್ ವೃತ್ತದಿಂದ ಜೇರಪೇಟೆ ಕ್ರಾಸ್ ವರೆಗೆ ಕೈಗೊಳ್ಳಲಾಗುತ್ತಿರುವ ಫುಟಪಾತ್ ಕಾಮಗಾರಿ.
ಹುಮನಾಬಾದ: ಪಟ್ಟಣದ ಡಾ| ಅಂಬೇಡ್ಕರ್ ವೃತ್ತದಿಂದ ಜೇರಪೇಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗದಲ್ಲಿ ಕೈಗೊಳ್ಳುತ್ತಿರುವ ಪಾದಚಾರಿ ರಸ್ತೆ
ನಿರ್ಮಾಣ ಕಾಮಗಾರಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪಾದಚಾರಿಗಳಿಗೆ ಯವುದೇ ತೊಂದರೆ ಆಗದಿರಲಿ ಎನ್ನುವ ಉದ್ದೇಶದಿಂದ ರಸ್ತೆ ಅಂತ್ಯಕ್ಕೆ ಚರಂಡಿಗಳಿಗೆ ಹೊಂದಿಕೊಂಡು ಪಾದಚಾರಿ ರಸ್ತೆ ನಿರ್ಮಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ರಾಜ್ಯದ ಬೇರೆಲ್ಲೂ ಈವರೆಗೆ ಕೈಗೊಳ್ಳದ ರೀತಿ, ನೋಡಿರದ ರೀತಿ, ಅತ್ತ ಸಂಪೂರ್ಣ ರಸ್ತೆ
ಅಂತ್ಯದ ಚರಂಡಿಗೂ ಹೊಂದಿಕೊಂಡಿರದೇ ಇತ್ತ ಸಂಪೂರ್ಣ ರಸ್ತೆ ವಿಭಜಕಕ್ಕೂ ಹೊಂದಿಕೊಳ್ಳದೇ ಚರಂಡಿಯಿಂದ 15ಅಡಿ ಅಂತರದಲ್ಲಿ
ನಿರ್ಮಿಸುತ್ತಿರುವ ಯಾವುದೇ ಪ್ರಯೋಜನಕ್ಕೆ ಬಾರದೇ ಇರುವ ಈ ಫುಟ್‌ಪಾತ್ ನಿರ್ಮಾಣದಿಂದ ಸರ್ಕಾರದ ಲಕ್ಷಾಂತರ ಹಣ ಅನಗತ್ಯವಾಗಿ ವ್ಯಯಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿಗಳು ಸಾರ್ವಜನಿಕರು ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
ಎಚ್‌ಕೆಆಡಿಬಿ ಯೋಜನೆ ಅಡಿ 10 ಲಕ್ಷ ರೂ. ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಫುಟ್‌ಪಾತ್‌ಗೆ ಬಳಸುವ ಸಿಮೆಂಟ್ ಕಲ್ಲು ಬಳಸಿ
ಕಾಮಗಾರಿ ಕೈಗೊಳ್ಳುತ್ತಿದೆ. ಈ ಫುಟ್‌ಪಾತ್ ಅತ್ತ ಸಂಪೂರ್ಣ ರಸ್ತೆ ವಿಭಜಕಕ್ಕೂ ಇತ್ತಕಡೆ ಚರಂಡಿಗೂ ಹೊಂದಿಕೊಳ್ಳದೇ ಇರುವಂತಹ ಸಾರ್ವಜನಿಕರಿಗೆ
ಉಪಯೋಗವಿಲ್ಲದ ಕಾಮಗಾರಿ ಕೈಗೊಳ್ಳುವ ಬದಲು ಡಾಂಬರೀಕರಣ ಮಾಡಬಹುದಾಗಿತ್ತಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ರಸ್ತೆ ಕೆಳಗೆ ಹುಮನಾಬಾದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪುರಸಭೆಯ ಮುಖ್ಯ ಪೈಪ್‌ಲೈನ್ ಇದೆ. ರಸ್ತೆ ನಿರ್ಮಾಣ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪೈಪ್ ಒಡೆದು ಸಾರ್ವಜನಿಕರಿಗೆ ತೊಂದರೆ ಆಗುವುದು ಖಚಿತ. ಕಾಮಗಾರಿ ಆರಂಭಿಸಿದ ನಂತರ ಪರವಾನಗಿ ಸಂಬಂಧ ಪುರಸಭೆಗೆ ಅರ್ಜಿ ಸಲ್ಲಿಸಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಸಾರ್ವಜನಿಕರ ತೆರಿಗೆಯಿಂದ ಬಿಡುಗಡೆ ಆಗುವ ಸರ್ಕಾರ ಅನುದಾನ ಉದ್ದೇಶಿತ ಕೆಲಸಕ್ಕೆ ಬಳಕೆಯಾಗಬೇಕು. ಲಕ್ಷಾಂತರ ಹಣ ನಿರುಪಯುಕ್ತ ಆಗಲು ಅವಕಾಶ ಕಲ್ಪಿಸದೇ ಸಾರ್ವಜನಿಕರಿಗೆ ಉಪಯೋಗವಾಗಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಕೋಟ್ಯಂತರ ಹಣ ಸದ್ಬಳಕೆಯಾಗುವತ್ತ ಮೇಲಧಿಕಾರಿಗಳು ಚಿತ್ತ ಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ.
ಈ ಕಾಮಗಾರಿಗೆ ಎಚ್‌ಕೆಆರ್‌ಡಿಬಿ ಅನುದಾನ ನೀಡಿದೆ. ಸಂಪೂರ್ಣ
ಅವೈಜ್ಞಾನಿಕವಾದ ಈ ರಸ್ತೆ ನಿರ್ಮಾಣ ಮಾಡುವುದರಿಂದ ಪಾದಚಾರಿಗಳಿಗೂ, ವಾಹನ ಸವಾರರೂ ಸೇರಿದಂತೆ ಯಾರಿಗೂ
ಪ್ರಯೋಜನವಿಲ್ಲ. ಈ ಕಾಮಗಾರಿ ಕುರಿತು ಜಿಲ್ಲಾ ಧಿಕಾರಿ ಖುದ್ದು ಸ್ಥಳಕ್ಕೆ ಭೇಟಿನೀಡಿ, ಪರಿಶೀಲಿಸಬೇಕು.
. ಮಹೇಶ ಅಗಡಿ, ಪುರಸಭೆ ಹಿರಿಯ ಸದಸ್ಯ
ಎಚ್‌ಕೆಆರ್‌ಡಿಬಿಯ 10ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿ
ಕೈಗೊಳ್ಳಲಾಗುತ್ತಿದೆ. ಡಾಂಬರೀಕರಣ ರಸ್ತೆ ಕೈಗೊಂಡರೇ ಭವಿಷ್ಯದಲ್ಲಿ ಅಗೆಯುವ ಸಂದರ್ಭ ಬಂದರೇ ಹಣ ವ್ಯರ್ಥ ಪೋಲಾಗುತ್ತದೆ. ಸರ್ಕಾರದ ಅನುದಾನ ವ್ಯರ್ಥ ಪೋಲಾಗಿಸುವುದನ್ನು ತಪ್ಪಿಸಲು ಸಿಮೆಂಟ್ ಕಲ್ಲು ಬಳಸಲಾಗಿದೆ. ಒಂದು ರೀತಿ ಫುಟ್‌ಪಾತೂ ಹೌದು, ರಸ್ತೆಯೂ ಹೌದು.
. ರಾಜಕುಮಾರ ಕಲಬುರ್ಗಿ, (ಪಿಡಬ್ಲ್ಯೂಡಿ)
ಲೋಕೋಪಯೋಗಿ ಸಹಾಯಕ ಎಂಜಿನಿಯರ್
ಶಶಿಕಾಂತ ಕೆ.ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.