ರಾಯಣ್ಣ ಚರಿತ್ರೆ ಪಠ್ಯಕ್ಕೆ ಅಳವಡಿಸಿ: ಚಳಕಾಪೂರೆ
Team Udayavani, Aug 19, 2019, 3:03 PM IST
ಹುಮನಾಬಾದ: ದುಬಲಗುಂಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ನಡೆಯಿತು.
ಹುಮನಾಬಾದ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತತ್ವಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ಅವರ ಬದುಕು, ಹೋರಾಟ ಮತ್ತು ದೇಶಕ್ಕಾಗಿ ಸಲ್ಲಿಸಿದ ಸೇವೆ ವಿಷಯವನ್ನು ಪಠ್ಯಕ್ಕೆ ಅಳವಡಿಸುವ ಮೂಲಕ ಹೊಸ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಗೊಂಡ ಸಮಾಜದ ಮುಖಂಡ ಅಶೋಕ ಚಳಕಾಪುರೆ ಸರ್ಕಾರಕ್ಕೆ ಒತ್ತಾಯಿಸಿದರು.
ದುಬಲಗುಂಡಿ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಶಿಕ್ಷಣ ಪಡೆಯದೇ ವ್ಯರ್ಥ ಕಾಲಹರಣ ಮಾಡುತ್ತಿರುವ ನಮ್ಮ ಸಮುದಾಯದ ಯುವಕರು ಮೊದಲು ಸಾಕ್ಷರರಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಹೆತ್ತ ಪಾಲಕರು ಹಾಗೂ ನೆಲೆ ನೀಡಿದ ಊರವರಿಗೂ ಬೇಕಾದವರಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಇಡೀ ಜೀವನವನ್ನು ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿಸಿಕೊಳ್ಳದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಆದರ್ಶ ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಸೇನೆಯಲ್ಲಿ ಸೇರಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಬೇಕು ಎಂದರು.
ಗ್ರಾಮ ಪಂಚಾಯತ ಸದಸ್ಯ ನಾಗರಾಜ ಭೋಜಗುಂಡಿ, ಸೂರ್ಯಕಾಂತ ಚಳಕಾಪೂರೆ, ಮಾಣಿಕರಾವ್ ಭೋಲಾ, ಪ್ರಮುಖರಾದ ಅಶೋಕ ಚಳಕಾಪೂರೆ, ಬಾಬುರಾವ್ ಹಳೆಂಬರ, ಶರಣಪ್ಪ ಭೋಜಗುಂಡಿ, ಬಸಪ್ಪ ಭೋಜಗುಂಡಿ, ವಿಠಲ್ ಭೋಜಗುಂಡಿ ಮಾತನಾಡಿದರು.
ವೈಜಿನಾಥ ಭೋಜಗುಂಡಿ, ಶಿವಾನಂದ ಭೋಜಗುಂಡಿ, ಸಿದ್ದಪ್ಪ ಚಳಕಾಪೂರೆ, ರವಿಕಾಂತ ಭೋಜಗುಂಡಿ, ರಾಹುಲ ಹಳೆಂಬರ, ಪ್ರಶಾಂತ ಭೋಜಗುಂಡಿ, ವೈಜಿನಾಥ ಬೆಳಕೇರಿ, ದತ್ತು ಹಳೆಂಬರ, ಸಿದ್ದಲಿಂಗ ಸೋನಕೇರಿ, ಅಂಬ್ರೇಶ್ ಕಲ್ಲೂರ, ಮಲ್ಲಪ್ಪ ಭೋಜಗುಂಡಿ, ಮಾರುತಿ ಕೋಟಗಿರಿ, ಗುಂಡಪ್ಪ ಭೋಜಗುಂಡಿ, ಲಕ್ಷ್ಮೀಕಾಂತ ಭೋಜಗುಂಡಿ, ಯಲ್ಲಾಲಿಂಗ ಸೋನಕೇರಿ, ಕಂಟೆಪ್ಪ ಆಣದೂರೆ, ಶರಣು ಆಣದೂರೆ, ಅನೀಲ ಬೆಳಕೇರಿ, ಮಂಜು ಭೋಜಗುಂಡಿ, ವೈಜಿನಾಥ ಸೋನಕೇರಿ, ಲೋಕೇಶ ಮುತ್ಯಾ ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಧರಿಸಿದ ಹಳದಿ ಶಾಲು, ಡೊಳ್ಳು ಕುಣಿತ ಹಾಗೂ ಹಾಡಿಗೆ ಹೆಜ್ಜೆ ಹಾಕಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.