ಪದವಿ ಜತೆ ಸ್ನಾತಕೋತ್ತರಕ್ಕೂ ಅವಕಾಶ
ಸರ್ಕಾರದ ಸೌಲಭ್ಯ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲಿ: ಡಾ| ತುಪ್ಪದ
Team Udayavani, Jul 24, 2019, 11:29 AM IST
ಹುಮನಾಬಾದ: ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪುನರ್ ಮನನ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ ಉದ್ಘಾಟಿಸಿದರು.
ಹುಮನಾಬಾದ: ಬದಲಾದ ಕಾಲಮಾನಕ್ಕೆ ತಕ್ಕಂತೆ ಸರ್ಕಾರ ಕನಿಷ್ಟ ಶುಲ್ಕದಲ್ಲಿ ಬಡ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನಕ್ಕೂ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪುನರ್‌ಮನನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂರು ದಶಕಗಳ ಹಿಂದೆ ಸರ್ಕಾರ ಇಂಥ ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಪದವಿಪೂರ್ವ ಮತ್ತು ಪದವಿ ಶಿಕ್ಷಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದರು.
ಪಾಲಕರು ನಿಮ್ಮ ಮೇಲೆ ಏನೆಲ್ಲ ನಿರೀಕ್ಷೆ ಇಟ್ಟುಕೊಂಡು ಹಳ್ಳಿಯಿಂದ ತಾಲೂಕು ಕೇಂದ್ರದ ಕಾಲೇಜಿಗೆ ಕಳಿಸಿದ್ದಾರೆ. ಮೂರು ವರ್ಷ ಕಾಲ ವ್ಯರ್ಥ ಕಾಲಹರಣ ಮಾಡದೇ ಕಠಿಣ ಪರಿಶ್ರಮದೊಂದಿಗೆ ಗುರಿ ಸಾಧಿಸುವ ಮೂಲಕ ಪಾಲಕರ ಕನಸು ನನಸಾಗಿಸಬೇಕು ಎಂದು ಹೇಳಿದರು.
ಡಾ| ಗವಿಸಿದ್ಧಪ್ಪ ಪಾಟೀಲ, ಡಾ|ಪ್ರಹ್ಲಾದ್ ಚೆಂಗಟೆ ವಾಣಿಜ್ಯಶಾಸ್ತ್ರ, ಡಾ| ಶಾಂತಕುಮಾರ ಬನಗುಂಡಿ, ಡಾ| ಸಂಜೀವಕುಮಾರ, ಮಲ್ಲಿಕಾರ್ಜುನ ಬಾಳಿ, ಡಾ|ಜಯಶ್ರೀ ಶೆಟ್ಟಿ, ಪ್ರೊ|ಸಂಪತ್‌ಕುಮಾರಿ, ವೀರೇಶ ಹಳೇಮನಿ ಅವರ ನೇತೃತ್ವದಲ್ಲಿ ವಿಭಾಗವಾರು ಗ್ರಂಥಾಲಯ ಸೌಲಭ್ಯ, ಕೀಡ್ರಾ ಮಹತ್ವ, ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ, ಪದವಿ ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು.
ದೈಹಿಕ ಶಿಕ್ಷಣ ವಿಭಾಗದ ಡಾ|ರವಿ ನಾಯಕ, ಗ್ರಂಥಪಾಲಕ ರಾಜಕುಮಾರ ಟಿ., ಹಿಂದಿ ವಿಭಾಗದ ಡಾ|ರಾಜಾಬಾಯಿ, ಭೌತಶಾಸ್ತ್ರ ವಿಭಾಗದ ಬಸವರಾಜ ನಿಂಬೂರೆ, ಕನ್ನಡ ವಿಭಾಗದ ಡಾ|ಮಹಾದೇವಿ ಹೆಬ್ಟಾಳೆ, ಡಾ| ರೂತಾ ಪ್ರಭುರಾವ್, ರಂಗನಾಥ, ದಿಲೀಪ ಪತಂಗೆ, ಕುಮಾರಿ ಅಶ್ವಿನಿ, ಅಂಬರೀಶ ಕನೇರಿ, ಮಾದವರಾವ್ ಉಪಸ್ಥಿತರಿದ್ದರು.
ಕಾಲೇಜು ಸಿಬ್ಬಂದಿ ಕಾರ್ಯದರ್ಶಿ ಪ್ರೊ|ಅಲಕಾ ಡಿ. ಸೋಲಂಕರ ಸ್ವಾಗತಿಸಿದರು. ಡಾ| ಜಯಕುಮಾರ ಶಿಂಧೆ ನಿರೂಪಿಸಿದರು. ಐ.ಕ್ಯು.ಎ.ಸಿ. ಸಂಯೋಜಕಿ ಪ್ರೊ| ಪ್ರೇಮಲತಾ ಮುನ್ನೊಳ್ಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು
Gurupura: 300 ಕೆ.ಜಿ. ಗೋಮಾಂಸ ಸಾಗಾಟ; ಇಬ್ಬರ ಸೆರೆ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.