ಧರ್ಮಸಮನ್ವಯ ಕೇಂದ್ರ ಮಾಣಿಕಪ್ರಭು ಸಂಸ್ಥಾನ
ಸಂಗೀತ ಕಲಾವಿದರ ಪಾಲಿಗೆ ಪವಿತ್ರ ಕ್ಷೇತ್ರ ಶಿಕ್ಷಣ-ಸಾಹಿತ್ಯ ಸಕಲ ಕಲೆಗಳ ಪೋಷಣಾ ಕೇಂದ್ರ
Team Udayavani, Dec 13, 2019, 12:03 PM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಧರ್ಮಸಮನ್ವಯ ಖ್ಯಾತಿಗೆ ಪಾತ್ರವಾದ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನ ಸಕಲ ಕಲೆ-ಕಲಾವಿದರನ್ನು ಪೋಷಿಸುವ ಮೂಲಕ ಕಲಾಕ್ಷೇತ್ರದ ಮಾತೃತಾಣ, ಸಂಗೀತ ಕಲಾವಿದರ ಪಾಲಿಗೆ ಪವಿತ್ರ ಕ್ಷೇತ್ರ, ನಿರ್ಗತಿಕರ ಪಾಲಿನ ಆಶ್ರಯ ತಾಣವೆಂಬ ಖ್ಯಾತಿಯನ್ನೂ ಹೊಂದಿದೆ.
ಎರಡು ಶತಮಾನಗಳ ಇತಿಹಾಸ ಹೊಂದಿರುವ ಈ ಪವಿತ್ರ ಧಾರ್ಮಿಕ ಕ್ಷೇತ್ರ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಸಿಕೊಳ್ಳದೇ ಶೈಕ್ಷಣಿಕ, ಸಾಹಿತ್ಯ, ಸಂಗೀತ, ನೃತ್ಯಾದಿಯಾಗಿ ಸಲಕ ಕಲೆಗಳನ್ನು ಪೋಷಿಸುತ್ತ ಬಂದಿದೆ. ಕಲ್ಯಾಣ ಕರ್ನಾಟಕದ ಯಾವುದೇ ಪ್ರದೇಶದಲ್ಲಿಲ್ಲದ ಸಂಸ್ಕೃತ ವೇದ ಪಾಠಶಾಲೆ, ಅಂಧ ಮಕ್ಕಳ ವಸತಿ ಸಹಿತ ಶಾಲೆ, ನಿರ್ಗತಿಕ ಮಕ್ಕಳಿಗಾಗಿ ಅನಾಥಾಶ್ರಮ ಅಂಧ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಸ್ವಾವಲಂಬಿ ಜೀವನ ಸಾಗಿಸುವಂತೆ ಮಾಡಲು ಅವಿರತ ಶ್ರಮಿಸುತ್ತಿದೆ.
ಸಂಸ್ಥಾನ ಪೀಠಾಧಿ ಪತಿ ಡಾ|ಜ್ಞಾನರಾಜ ಮಹಾರಾಜರ ಮಾರ್ಗದರ್ಶನದಲ್ಲಿ ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭು, ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭುಗಳು ಸಂಸ್ಥಾನದ ಪ್ರತಿಯೊಂದು ಚಟುವಟಿಕೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕಾದು ಕುಳಿತರೂ ಸಿಗದ ಕಲಾವಿದರು: ಪ್ರತಿಷ್ಠಿತ ಸಂಘ ಸಂಸ್ಥೆಗಳು ಲಕ್ಷಾಂತರ ಹಣ ಕೈಯಲ್ಲಿಟ್ಟುಕೊಂಡು ಕುಳಿತರೂ ಕೆಲ ಕಲಾವಿದರು ಸಮಯ ನೀಡಲು ಹಿಂದೇಟು ಹಾಕುತ್ತಾರೆ. ಆದರೆ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನ ವಿಷಯದಲ್ಲಿ ಕಲಾವಿದರ ವಿಚಾರಧಾರೆ ಸಂಪೂರ್ಣ ಭಿನ್ನ. ಪ್ರಭು ಸಂಜೀವಿನಿ ಸಮಾಧಿ ಸಮ್ಮುಖದಲ್ಲಿ ಸಂಗೀತ ಸೇವೆ ಸಲ್ಲಿಸಲು ಅವಕಾಶ ಸಿಕ್ಕರೆ ಸುದೈವ ಎಂದು ಭಾವಿಸುತ್ತಾರೆ.
ಖ್ಯಾತಿವೆತ್ತ ಕಲಾವಿದರ ಸೇವೆ: ಈವರೆಗೆ ಪ್ರಭು ಸಂಸ್ಥಾನದಲ್ಲಿ ನಡೆದ ಸಂಗೀತ ದರ್ಬಾರ್ ಕಾರ್ಯಕ್ರಮಗಳಲ್ಲಿ ಭೀಮಸೇನ್ ಜೋಷಿ, ಖ್ಯಾತ ತಬಲಾವಾದಕ ಉಸ್ತಾದ ಜಾಕಿರ್ ಹುಸೇನ್, ಅಂತಾರಾಷ್ಟ್ರೀಯ ಖ್ಯಾತಿವೆತ್ತ ಶಹನಾಯಿ ವಾದಕ ದಿ.ಉಸ್ತಾದ್ ಬಿಸ್ಮಿಲ್ಲಾಖಾನ್, ರಾಜನ್-ಸಾಜನ್ ಮಿಶ್ರ, ವಿದ್ಯಾಮೋಹನ ಭಟ್, ಸಂಗೀತಾ ಕಟ್ಟಿ, ಮಾಲೀನಿ ರಾಜೂಕರ್, ಅಶ್ವಿನಿ ಭಿಡೆ, ವಿಆ ಸಹಸ್ರ ಬುದ್ಧೆ, ಗುಂಡೇಚಾ ಸಹೋದರರ ಸೋಲೊ, ಅಜಯ್ ಚಕ್ರವರ್ತಿ, ಅಸಾವರಿ ಪಾಠಣಕರ್, ಅನುಪ್ ಜಲೋಟಾ, ಪಂ. ವೆಂಕಟೇಶಕುಮಾರ, ಪಂ. ಸಂಜೀವ ಅಭ್ಯಂಕರ್, ಖ್ಯಾತ ಕವ್ವಾಲಿ ಕಲಾವಿದ ಉಸ್ತಾದ ಅಹ್ಮದ್ ಖಾನ್, ಸರೋದ ವಾದಕ ಅಮ್ಜದ್-ಅಲಿಖಾನ್, ರೋನು ಮುಜಂದಾರ್ ಹೀಗೆ ಇಲ್ಲಿ ಸಂಗೀತ ಸೇವೆ ಸಲ್ಲಿಸಿದವರು ಹೆಸರು ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತದೆಯೇ ಹೊರತು ಕಲಾವಿದರ ಹೆಸರು ಮುಗಿಯುವುದಿಲ್ಲ.
ಯೋಗ ದಂಡಗಳ ವಿಶೇಷತೆ: ಮಾಣಿಕಪ್ರಭುಗಳ ಜಯಂತಿ ಕಾರ್ಯಕ್ರಮದ ಆರಂಭದ ದಿನ ತೀರ್ಥಸ್ನಾನ ಬಳಿಕ ನಡೆಯುವ ಯೋಗದಂಡಗಳ ಪೂಜೆ ಹಿಂದೆ ವಿಶಿಷ್ಯ ಇತಿಹಾಸವಿದೆ. ಇಲ್ಲಿನ ಯೋಗದಂಡಗಳಿಗೂ 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅವಿನಾಭವ ಸಂಬಂಧವಿದ್ದು, ಸಂಗ್ರಾಮ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಿಠೂರ್ ನಿಂದ ಝಾನ್ಸಿರಾಣಿ ಲಕ್ಷ್ಮೀಬಾಯಿ, ನನಾ ಪೇಶ್ವೆ, ತಾತ್ಯಾ ಟೋಪೆ ಧೂತರಾಗಿ ರಂಗರಾವ್ ಹೆಸರಿನ ವ್ಯಕ್ತಿಯೊಬ್ಬರು ಮಾಣಿಕನಗರಕ್ಕೆ ಆಗಮಿಸಿ, ಸ್ವಾತಂತ್ರ್ಯ
ಸಂಗ್ರಾಮಕ್ಕೆ ಆಶೀರ್ವಾದ ಕೋರಿದ್ದರೆಂಬುದಕ್ಕೆ ಇತಿಹಾಸ ದಾಖಲೆ ಸಾಕ್ಷಿ ಇವೆ.
ಆ ವೇಳೆ ಪ್ರಭು ಸಂಸ್ಥಾನ ವಿಶೇಷ ಮಂತ್ರಶಕ್ತಿಯುಳ್ಳ 12,00 ಯೋಗ ದಂಡ ನೀಡಿತ್ತು. ಯುದ್ಧವಾದ ನಂದರ ಮರಳಿದ ಎಲ್ಲ ಯೋಗದಂಡಗಳೀಗ ಪ್ರಭು ಸಂಸ್ಥಾನದಲ್ಲಿ ಭದ್ರವಾಗಿವೆ. ವಿಶೇಷ ಶಕ್ತಿ ಹೊಂದಿದ ಯೋಗದಂಡಗಳಿರುವ ವಿಷಯ ಬ್ರಿಟೀಷರಿಗೆ ತಿಳಿಸಿದ್ದಲ್ಲದೇ ಬ್ರಿಟೀಷ್ ಅ ಧಿಕಾರಿ ಮೆಡೋಸ್ ಟೇಲರ್ ಮಾಣಿಕಪ್ರಭು ಸಂಸ್ಥಾನಕ್ಕೆ ಬಂದು ತನಿಖೆ ನಡೆಸಿದ್ದನೆಂದು ಇತಿಹಾಸ ದಾಖಲೆಗಳಿಂದ ತಿಳಿದುಬರುತ್ತದೆ.
ಉಚಿತ ಆರೋಗ್ಯ ತಪಾಸಣೆ: ಕಳೆದ ದಶಕದಿಂದ ಪ್ರತೀ ವರ್ಷ ಜಾತ್ರೆಯಲ್ಲಿ ಉಚಿತ ನೇತೃ ತಪಾಸಣೆ, ರಕ್ತ ತಪಾಸಣೆ, ವಿಕಲಚೇತನರ ತಪಾಸಣೆ ಹಾಗೂ ಚಿಕಿತ್ಸೆ ಜೊತೆಗೆ ಉಚಿತವಾಗಿ ಔಷಧ ವಿತರಿಸುವ ಕಾರ್ಯ ನಿರಂತರ ಮುಂದುವರಿಸಿಕೊಂಡು ಬರುತ್ತಿದ್ದು, ಈ ವರ್ಷ ಮಹಾರಾಷ್ಟ್ರ ಉಮರ್ಗದ ಡಾಸೆಂಡಗೆ ಅವರು ಸಕಲ ಕಾಯಿಲೆಗಳ ತಜ್ಞ ವೈದ್ಯರ ತಂಡದೊಂದಿಗೆ ಆಗಮಿಸಿ, ತಪಾಸಣೆ, ಚಿಕಿತ್ಸೆ, ಜೊತೆಗೆ ಔಷಧ ವಿತರಿಸುವ ಕಾರ್ಯ ನಡೆಸಿದ್ದು ವಿಶೇಷ.
ದಾಸೋಹ ವ್ಯವಸ್ಥೆ: ಪ್ರಭು ಸಂಸ್ಥಾನದಲ್ಲಂತೂ ವರ್ಷವಿಡೀ ನಿರಂತರ ದಾಸೋಹ ನಡೆಯುತ್ತದೆ. ವರ್ಷಗಳು ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡ ಸಂಸ್ಥಾನ ಆಡಳಿತ ಮಂಡಳಿ ಈ ಬಾರಿ ದಾಸೋಹ ವಿಭಾಗದಲ್ಲಿ ರೊಟ್ಟಿ ತಯಾರಿಕೆ ಸೇರಿದಂತೆ ಭಂಡಾರ ಖಾನೆಯಲ್ಲಿ ಪ್ರಸಾದ ಸಿದ್ಧಪಡಿಸಲು ಬೇಕಾಗುವ ಎಲ್ಲ ಪರಿಕರಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಏಕ ಕಾಲಕ್ಕೆ ಸಾವಿರಾರು ಭಕ್ತರಿಗೆ ಉಣಬಡಿಸುವಷ್ಟು ಪ್ರಸಾದ ಸಿದ್ಧಗೊಳ್ಳುತ್ತದೆ.
ಸಂಗೀತ ದರ್ಬಾರ್: ಜಾತ್ರೆಯ ಅತ್ಯಂತ ಪ್ರಮುಖ ಆಕರ್ಷಣೆ ಎಂದರೇ ಡಾ|ಜ್ಞಾನರಾಜ ಶ್ರೀಗಳ ಸನ್ನಿಧಿಯಲ್ಲಿ ನಡೆಯುವ ಸಂಗೀತ ದರ್ಬಾರ್. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಖ್ಯಾತಿವೆತ್ತ ಸಂಗೀತ, ನೃತ್ಯ ಕಲಾವಿದರು ಆಗಮಿಸುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಬಿ.ಪಾಟೀಲ, ಪಾಟೀಲ ಪರಿವಾರ ಹಾಗೂ ಗಣ್ಯರು ಪರಿವಾರ ಸಮೇತ ಆಗಮಿಸಿ, ಸಂಗೀತ ದರ್ಬಾರ್ ಕಣ್ಣು ತುಂಬಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.