ಅಭಿವೃದ್ಧಿಯತ್ತ ಪುರಸಭೆ ಸದಸ್ಯರು ಹರಿಸಲಿ ಚಿತ್ತ

ಹುಮನಾಬಾದ ಪಟ್ಟಣದ ಜ್ವಲಂತ ಸಮಸ್ಯೆ ಸವಾಲಾಗಿ ಸ್ವೀಕರಿಸಲಿ ನೂತನ ಜನಪ್ರತಿನಿಧಿಗಳು

Team Udayavani, Jun 10, 2019, 11:20 AM IST

10-Juen-12

ಹುಮನಾಬಾದ: ಪಟ್ಟಣದ ಹಿರೇಮಠ ಕಾಲೋನಿಯಲ್ಲಿ ಚರಂಡಿ ಸೌಲಭ್ಯವಿಲ್ಲದ್ದರಿಂದ ಸಿಸಿ ರಸ್ತೆ ಪಕ್ಕ ಸಾರ್ವಜನಿಕ ತ್ಯಾಜ್ಯ ಸಂಗ್ರಹಗೊಂಡಿದೆ

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಪುರಸಭೆ ಚುನಾವಣೆ ಮುಗಿದು ಈಗಾಗಲೇ ಫಲಿತಾಂಶ ಪ್ರಕಟಗೊಂಡಿದೆ. ಇನ್ನೇನು ಸರ್ಕಾರದ ನಿಯಮಾನುಸಾರ ಹೊಸ ಆಡಳಿತ ಮಂಡಳಿ ಸಭೆ ಸೇರಿ ನಗರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಇತ್ಯರ್ಥಪಡಿಸುವತ್ತ ಚಿತ್ತ ಹರಿಸಬೇಕಿದೆ.

ಕೋಟ್ಯಂತರ ವೆಚ್ಚವಾದರೂ ಉದ್ದೇಶಿತ ಕಾರ್ಯ ಕೈಗೊಡದೇ ಅಪೂರ್ಣ ಸ್ಥಿತಿಯಲ್ಲಿರುವ ಯುಜಿಡಿ ಕಾಮಗಾರಿ ಸಾರ್ವಜನಿಕರಿಗೆ ಬಳಕೆ ಬರುವ ರೀತಿಯಲ್ಲಿ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನೂತನ ಆಡಳಿತ ಮಂಡಳಿ ಮೇಲಿದೆ. ಅಂಬೇಡ್ಕರ್‌ ವೃತ್ತದಿಂದ ವಾಂಜ್ರಿ ವರೆಗಿನ ರಸ್ತೆ ವಿಸ್ತರಣೆ ಹಾಗೂ ವಿಭಜಕ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಗ್ರಿಲ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು.

ಪಟ್ಟಣದ ಪ್ರತಿಯೊಂದು ಮಾರ್ಗಗಳ ರಸ್ತೆಗಳು ವಿಸ್ತರಣೆಗೊಂಡು ಹಸಿರಿನಿಂದ ಕಂಗೊಳಿಸಿ, ಸಾರ್ವಜನಿಕರ ಕಣ್ಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದ ಶಾಸಕರೂ ಆದ ಸಚಿವ ರಾಜಶೇಖರ ಪಾಟೀಲ ಅವರು ಬಿಡುಗಡೆಗೊಳಿಸಿದ ಕೋಟ್ಯಂತರ ರೂ.ದಲ್ಲಿ ರಸ್ತೆ ವಿಭಜಕ ನಿರ್ಮಿಸಿದರೂ ಕೂಡ ಅಂಬೇಡ್ಕರ ವೃತ್ತದಿಂದ ವಾಂಜ್ರಿ ವರೆಗೆ ಹೂ-ಗಿಡಗಳಿಂದ ಕಂಗೊಳಿಸಬೇಕಾದ ರಸ್ತೆ ವಿಭಜಕ ಸಾರ್ವಜನಿಕ ತಿಪ್ಪೆಗುಂಡಿಗಳಾಗಿ ಪರಿವರ್ತನೆಯಾಗಿವೆ. ಸ್ವಚ್ಛತೆ ಕಾಪಾಡಿ ಹಸಿರುಮಯ ಮಾಡಬೇಕಿದೆ.

ಒಂದೂವರೆ ದಶಕದ ಹಿಂದೆ ವೀರಣ್ಣ ಪಾಟೀಲ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಿ, ಸಾರ್ವಜನಿಕರ ಆಕರ್ಷಣೆಗೆ ಕಾರಣವಾದ ಪುರಸಭೆ ಉದ್ಯಾನವೀಗ ಹೂ-ಗಿಡಗಳಿಲ್ಲದೇ ಭಣಗೊಡುತ್ತಿದೆ. ಉದ್ಯಾನ ಅಭಿವೃದ್ಧಿಗೆ ಈವರೆಗೆ ಬಿಡುಗಡೆಯಾದ ಲಕ್ಷಾಂತರ ಹಣದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜನಸಂಖ್ಯೆ ಹೆಚ್ಚಳದ ಸಮಸ್ಯೆಗಳು ಹೆಚ್ಚಾಗಿವೆ. ಅದಕ್ಕೆ ತಕ್ಕಂತೆ 23ಕ್ಕೆ ಸೀಮಿತಗೊಂಡಿದ್ದ ವಾರ್ಡ್‌ಗಳ ಸಂಖ್ಯೆ 27ಕ್ಕೆ ಹೆಚ್ಚಿದೆ. ಹೀಗಾಗಿ ಸದಸ್ಯರ ಮೇಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ಜವಾಬ್ದಾರಿ ಇದೆ. ಅದೆಷ್ಟೋ ವಾರ್ಡ್‌ಗಳಲ್ಲಿ ಚರಂಡಿ ಸೌಲಭ್ಯವಿಲ್ಲದೇ ಸಾರ್ವಜನಿಕ ತ್ಯಾಜ್ಯ ಸಿಸಿ ರಸ್ತೆಗಳ ಪಕ್ಕದಲ್ಲಿ ಸಂಗ್ರಹಗೊಂಡು ರೋಗಭೀತಿ ಸೃಷ್ಟಿಯಾಗಿದೆ. ಅನೇಕ ವಾರ್ಡ್‌ಗಳಲ್ಲಿ ಗಿಡಗಂಟೆ ಬೆಳೆದು ವಿಷಜಂತು ಸಂಚರಿಸುತ್ತಿದ್ದು, ನಿವಾಸಿಗಳು ಭಯದಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ಇದೆ.

ಸಿದ್ಧಾರ್ಥ ಬಡಾವಣೆಗೆ ಹೊಂದಿಕೊಂಡಿರುವ ಎನ್‌ಜಿಒ ಬಡಾವಣೆಯ ನಿವಾಸಿಗಳು ಅಶುದ್ಧ ನೀರಿ ಸಮಸ್ಯೆ ಎದುರಿಸುತ್ತಿದ್ದಾರೆ. ಬೈಪಾಸ್‌ ರಸ್ತೆಗೆ ಹೊಂದಿಕೊಂಡ ಹಿರೇಮಠ ಕಾಲೋನಿಯಲ್ಲಿ ಅಗತ್ಯ ಚರಂಡಿ ಸೌಲಭ್ಯವಿಲ್ಲದೇ ಜನ ತೀವ್ರ‌ ತೊಂದರೆ ಅನುಭವಿಸುತ್ತಿದ್ದಾರೆ. ಗಾಂನಗರ ಕಾಲೋನಿ ಚರಂಡಿ ವ್ಯವಸ್ಥೆ ಇದಕ್ಕೆ ಹೊರತಾಗಿಲ್ಲ.

ಹುಮನಾಬಾದ ಡಾ.ಅಂಬೇಡ್ಕರ ವೃತ್ತದಿಂದ ಜೇರಪೇಟೆ ಕ್ರಾಸ್‌ ವರೆಗೆ ಚರಂಡಿ ಸೌಲಭ್ಯವಿಲ್ಲದೇ ಬಸ್‌ ನಿಲ್ದಾಣದ ಮುಂಭಾಗದ ರಸ್ತೆ ಮಧ್ಯದಲ್ಲಿ ದುರ್ನಾತ ಹೆಚ್ಚಿ ಜನ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಣವಾಗಿದೆ. ಅದೆಷ್ಟೋ ಸಂಗ್ರಹಗೊಂಡ ತ್ಯಾಜ್ಯ ಸಕಾಲಕ್ಕೆ ವಿಲೆವಾರಿ ಗೊಳಿಸದ ಕಾರಣ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳಿಗೆ ರೋಗಭೀತಿ ಕಾಡುತ್ತಿದೆ.

ಖಾಸಗಿ ವಾಹನ ನಿಲ್ದಾಣ: ಅತ್ಯಾಕರ್ಷಕವಾಗಿ ನಿರ್ಮಿಸಲಾದ ಪುರಸಭೆ ಕಚೇರಿ ಮುಂಭಾಗದಲ್ಲಿ ಲಾರಿಗಳು ನಿಲ್ಲುತ್ತಿರುವ ಕಾರಣ ಸಾರ್ವಜನಿಕರಿಗೆ ಕಚೇರಿ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಹಿಂದೆ ಅದೆಷ್ಟೋ ಬಾರಿ ಸಾಮಾನ್ಯ ನಡುವಳಿಕೆಯಾದರೂ ವಾಹನ ನಿಲುಗಡೆ ಮಾತ್ರ ರಾಜಾರೋಷ ಮುಂದುವರಿದಿದೆ.

ರಸ್ತೆ ವಿಸ್ತರಣೆ ಬಳಿಕ ಜನ ಅಂದುಕೊಂಡಂತೆ ಸೌಂದರ್ಯ ವೃದ್ಧಿ ಬದಲಿಗೆ ಗುಜರಿ ಅಂಗಡಿ, ಹೊಟೇಲ್ ಮತ್ತಿತರ ವ್ಯಾಪಾರಿಗಳು ಶಡ್‌ ಹಾಕಿದ್ದರಿಂದ ರಸ್ತೆ ಸೌಂದರ್ಯಕ್ಕೆ ಹೊಡೆತ ಬೀಳುತ್ತಿದೆ. ಅಗ್ನಿಕುಂಡ ಸಮೀಪ ನಿರ್ಮಿಸುತ್ತಿರುವ ಮಳಿಗೆ ಶೀಘ್ರ ಪೂರ್ಣಗೊಳಿಸಿದಲ್ಲಿ ಕಳೆದುಹೋದ ರಸ್ತೆ ಸೌಂದರ್ಯ ಮರುಕಳಿಸಲು ಸಾಧ್ಯವಾಗುತ್ತದೆ. ಅದೆಷ್ಟೋ ವಾರ್ಡ್‌ಗಳಲ್ಲಿ ಈಗಲೂ ಅಳವಡಿಕೆಯಾಗದ ನೀರಿನ ಪೈಪ್‌ಲೈನ್‌ ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳ್ಳಬೇಕು.

ಪುರಸಭೆಗೆ ಆಯ್ಕೆಗೊಂಡ ಸದಸ್ಯರ ಪೈಕಿ ಅಹ್ಮದ್‌ ಮೈನೋದ್ದಿನ್‌(ಅಪ್ಸರಮಿಯ್ಯ), ಗುಜ್ಜಮ್ಮ ಕನಕಟಕರ್‌, ಪಾರ್ವತಿಬಾಯಿ ಶೇರಿಕಾರ ಸೇರಿ 3 ಜನ ಮಾತ್ರ ಸದಸ್ಯರು ಹಳಬರಾಗಿದ್ದು, ಇವರಿಗೆ ಅನುಭವ ಇದೆ. ಇನ್ನುಳಿದ 24 ಸದಸ್ಯರು ಹೊಸಬರಾಗಿದ್ದು, ವಾರ್ಡ್‌ ಸಂಚರಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿ, ಬಗೆಹರಿಸುವತ್ತ ಚಿತ್ತ ಹರಿಸುವ ಮೂಲಕ, ಸದಾ ಫೈಲ್ ಹಿಡಿದು ಸ್ವರ್ಥಕ್ಕಾಗಿ ಅಲೆದಾಡುವ ಸ‌ದಸ್ಯರಿದ್ದಾರೆ ಎಂಬ ಅಪವಾದ ತಪ್ಪಿಸಬೇಕು.

ಈ ನಿಟ್ಟಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಆಡಳಿತ ಮಂಡಳಿಯನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸುವುದು ಸಹಜ. ಆದರೆ ವರ್ಷವಿಡೀ ತಮ್ಮ ಇಡೀ ಸಮಯವನ್ನು ಸನ್ಮಾನಗಳಿಗಾಗಿಯೇ ವಿನಿಯೋಗಿಸದೇ ಜನ ಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿ ಸದಸ್ಯರಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆ.

ಹಿಂದಿನಿಂದಲೂ ನೋಡತ್ತ ಬಂದಿದ್ದೇವೆ. ಚುನಾವಣಾ ಪೂರ್ವದಲ್ಲಿ ಇರುವ ವಿನಯ ಚುನಾವಣೆ ನಂತರ ಮಾಯವಾಗುತ್ತದೆ. ಗೆಲ್ಲುವ ಮುನ್ನ ಅಪ್ಪ, ಅಣ್ಣ, ಅವ್ವ, ಅಕ್ಕ, ತಂಗಿ ಎನ್ನುವ ಸದಸ್ಯರು ಗೆದ್ದ ನಂತರ ಸಮಸ್ಯೆ ಹೇಳಿಕೊಳ್ಳಲು ಹೋದರೆ ಆಯಿತು ನೋಡ್ತಿನಿ ಅಂತಾರೆ. ಚರಂಡಿ ಸೌಲಭ್ಯವಿಲ್ಲ, ಕಂಬಕ್ಕೆ ವಿದ್ಯುತ್‌ ದೀಪಗಳೇ ಇಲ್ಲ. ಈ ಬಾರಿ ಹಾಗಾಗಲಿಕ್ಕಿಲ್ಲ ಅಂದುಕೊಂಡಿದ್ದೀವಿ. ಏನಾಗುತ್ತೋ ಕಾದು ನೋಡಬೇಕು.
• ಸಂತೋಷ ಭೋಲಾ,
ಹಿರೇಮಠ ಕಾಲೋನಿ ನಿವಾಸಿ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.