ಹಳ್ಳಿಖೇಡದ ವಿಶಿಷ್ಟ ನಾಗೇಶ್ವರನಿಗೆ ವಿಶೇಷ ಪೂಜೆ
Team Udayavani, Aug 5, 2019, 10:05 AM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ನಾಗರ ಪಂಚಮಿ ಹಬ್ಬವನ್ನು ದೇಶದೆಲ್ಲಡೆ ವೈಶಿಷ್ಟ ್ಯಪೂರ್ಣ ಆಚರಿಸಲಾಗುತ್ತದೆ. ಆದರೆ ಹಳ್ಳಿಖೇಡ(ಬಿ) ಪಟ್ಟಣದಲ್ಲಿರುವ ನಾಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ನಾಗರಪಂಚಮಿಗೆ ಕೇವಲ ಪಟ್ಟಣ, ತಾಲೂಕು, ಜಿಲ್ಲೆ ಮಾತ್ರವಲ್ಲದೇ ಇಡೀ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲೇ ವಿಶೇಷ ಮಹತ್ವವಿದೆ.
ವಿಶೇಷ ಪೂಜೆಗಳ ಮೂಲಕ ವಿವಿಧ ನಾಗದೋಷಗಳಿಗೆ ಪರಿಹಾರ ಕಂಡುಕೊಳ್ಳಲು ಇಲ್ಲಿ ಅವಕಾಶವಿದೆ. ಇಲ್ಲಿ ಇತರೆಡೆಯಂತೆ ಕೇವಲ ಒಂದು ದಿನದ ಉತ್ಸವವಾಗಿ ಆಚರಿಸದೇ, ತವರು ಮರೆಮಾಚಿದ ಮಹಿಳೆಯರಿಗೆ ನಾಗೇಶ್ವರ ದೇವಸ್ಥಾನ ಒಂದು ರೀತಿಯಲ್ಲಿ ತವರಿಗೂ ಮೀರಿದಂತೆ ಮಹಿಳೆಯರು ಇಲ್ಲಿ ಪೂಜಿಸುತ್ತಾರೆ. ಆ ಕಾರಣಕ್ಕಾಗಿಯೇ ಈ ದೇವಸ್ಥಾನ ಮಹಿಳೆಯರ ಪಾಲಿನ ಎರಡನೇ ತವರೆಂದು ಕರೆಯಲಾಗುತ್ತದೆ. ಈ ಊರಿಗೆ ಬಂದ ಬಹುತೇಕ ಸೊಸೆಯಂದಿರು ಈ ಹಬ್ಬಕ್ಕೆ ತವರಿಗೆ ಹೋಗದೇ ಈ ಊರನ್ನೇ ತವರೆಂದು ಭಾವಿಸಿ, ನಾಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಕೃತಾರ್ಥರಾಗುತ್ತಾರೆ.
ಹೊಸ ಬಟ್ಟೆ ಧರಿಸಿ, ಅಲಂಕಾರಗಳೊಂದಿಗೆ ಕೈಯಲ್ಲೊಂದು ಹಾಲು ತುಂಬಿದ ತಂಬಿಗೆ, ಜೋಳದ ಅಳ್ಳು, ಅಳ್ಳಿಟ್ಟು, ಕಡಲೆ ಇತ್ಯಾದಿಗಳನ್ನು ನಾಗನಾಥ ದೇವರಿಗೆ ನೈವೇದ್ಯ ಸ್ವರೂಪದಲ್ಲಿ ಸಮರ್ಪಿಸುತ್ತಾರೆ. ಇಲ್ಲಿ ವರ್ಷವಿಡೀ ಕ್ಷೀರಾಭಿಷೇಕ ಇತ್ಯಾದಿ ನಡೆಯುತ್ತಿರುತ್ತವೆ. ನಾಗೇಶ್ವರ ಮೂರ್ತಿ ಮೆರವಣಿಗೆ ನಡೆಯುವುದರಿಂದ ಪ್ರತೀ ವರ್ಷಷ ಡಿಸೆಂಬರ್ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆದರೂ ಕೂಡ, ಉತ್ಸವಗಳ ದೃಷ್ಟಿಯಿಂದ ನೋಡಿದಾಗ ಈಗ ನಡೆಯುವ ನಾಗಪಂಚಮಿ ಸೇರಿ ಒಟ್ಟು ಎರಡು ದೊಡ್ಡ ಜಾತ್ರೆ ನಡೆಯುವುದು ಹಳ್ಳಿಖೇಡ(ಬಿ) ಪಟ್ಟಣದ ನಾಗಪಂಚಮಿ ವಿಶೇಷ.
ಮಾಲಾಧಾರಿಗಳ ವ್ರತ: ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ 41 ದಿನಗಳ ಕಾಲ ಚಾಕಲೇಟ್ ವರ್ಣದ ಉಡುಪನ್ನು ಧರಿಸುತ್ತಾರೆ. ಅಯ್ಯಪ್ಪಸ್ವಾಮಿ ಭಕ್ತರು ಧರಿಸುವ ಮಾಲಾಧಾರಿಗಳ ಮಾದರಿಯಲ್ಲೇ ಇವರೂ ಮಾಲಾಧಾರಿಗಳಾಗಿ ವ್ರತ ನಡೆಸುತ್ತಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಳ್ಳಿಖೇಡ (ಬಿ) ನಾಗೇಶ್ವರ ದೇವಸ್ಥಾನ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಏಕೈಕ ನಾಗೇಶ್ವರ ದೇವಾಲಯ. ಒಂದು ನಾಗಪಂಚಮಿ ಸಂಭ್ರಮ, ಎರಡನೇಯದು ದೀಪಾವಳಿಯಲ್ಲಿ ನಡೆಯುವ ನಾಗೇಶ್ವರ ಜಾತ್ರೆಯ ಸಂಭ್ರಮ. ಉತ್ಸವ ಸಂದರ್ಭದಲ್ಲಿ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ನಿಯೋಜನೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
•ನಾಗಯ್ಯಸ್ವಾಮಿ,
ತಹಶೀಲ್ದಾರ್ ಹುಮನಾಬಾದ
ಸಂತಾನ ಫಲ ಪ್ರಾಪ್ತಿ, ನಾಗದೋಷ, ಕಾಳಸರ್ಪದೋಷ ನಿವಾರಣೆ, ಮಂಗಳ ದೋಷ ನಿವಾರಣೆ, ದೃಷ್ಟಿದೋಷ, ಚರ್ಮರೋಗ ಶಾಶ್ವತ ನಿರ್ಮೂಲನೆ ಕಟ್ಟಿಟ್ಟ ಬುತ್ತಿ. ಭಕ್ತಿ, ಶ್ರದ್ಧೆಯಿಂದ ಪೂಜಿಸುವ ಭಕ್ತರಿಗೆ ನವಫಲಗಳು ಪ್ರಾಪ್ತಿಯಾಗುತ್ತವೆ. ಇದೇ ಕಾರಣಕ್ಕಾಗಿ ಇಲ್ಲಿಗೆ ಕೇವಲ ಹಳ್ಳಿಖೇಡ (ಬಿ) ಪಟ್ಟಣ, ಜಿಲ್ಲೆ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
•ಡಾ| ಅಶೋಕಸ್ವಾಮಿ ಹಾಲಾ,
ಪ್ರಧಾನ ಅರ್ಚಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.