ಸೂರಿಲ್ಲ .ಇವರಿಗೆ ಗುಡಿಸಲೇ ಎಲ್ಲ..!
ಬೀಸುವ ಕಲ್ಲು-ಒರಳು ಮಾಡುವುದೇ ಕಾಯಕ ಅರ್ಜಿ ಸಲ್ಲಿಸಿ ದಶಕ ಕಳೆದರೂ ಸಿಕ್ಕಿಲ್ಲ ಮನೆ
Team Udayavani, Oct 30, 2019, 2:53 PM IST
ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಸದಾ ಜನರಿಂದ ತುಂಬಿದ ಪಟ್ಟಣದ ಹೃದಯಭಾಗ ಎಂದೇ ಹೇಳಲಾಗುವ ಮಾಣಿಕನಗರದ ಪ್ರವೇಶ ದ್ವಾರ ಹಾಗೂ ಬೀದರ್ ರಸ್ತೆ ತಿರುವಿಗೆ ಹೊಂದಿಕೊಂಡಿರುವ ಗುಡಿಸಲು ವಾಸಿಗಳಿಗೆ ಇನ್ನೂ ಸೂರು ದೊರೆಯದಿರುವುದು ವಿಪರ್ಯಾಸ.
ಕಳೆದ ಎರಡೂವರೆ ದಶಕದಿಂದ ಬೀಸುವ ಕಲ್ಲು, ಒರಳುಗಳನ್ನು ನಿರ್ಮಿಸಿಕೊಂಡು ತಲೆ ಮೇಲೆ ಹೊತ್ತುಕೊಂಡು ಪಟ್ಟಣದ ವಿವಿಧ ವಾರ್ಡ್ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಗೆ ಅಲೆದಾಡಿ ಬದುಕು ನಡೆಸುತ್ತಿರುವ ಬೋವಿ ಸಮಾಜಕ್ಕೆ ಸೇರಿದ ಕೆಲ ಕುಟುಂಬಗಳು ನೆಲೆಯಿಲ್ಲದೇ ಗುಡಿಸಲಿನಲ್ಲಿಯೇ ವಾಸವಾಗಿದ್ದಾರೆ.
ಈ ಗುಡಿಸಲುಗಳಲ್ಲಿ 50ಕ್ಕೂ ಅಧಿಕ ಜನರು ಮಳೆ, ಚಳಿ, ಗಾಳಿ, ಬಿಸಿಲು, ವಿಷಜಂತು, ನಾಯಿ, ಹಂದಿ ಕಾಟ ಜತೆಗೆ ವಾಹನಗಳು ಉಗುಳುವ ವಿಷಯುಕ್ತ ಹೊಗೆ, ಸದ್ದು ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆ ಬಂದಾಗ ಗುಡಿಸಲುಗಳು ಅದೆಷ್ಟೋ ಸಲ ಜಲವೃತಗೊಂಡಿದ್ದಾಗಿದೆ. ನಿತ್ಯವೂ ಸೊಳ್ಳೆಕಾಟ ತಪ್ಪಿದ್ದಲ್ಲ. ಮಕ್ಕಳು ಮಲೇರಿಯಾ, ಟೈಫಾಯ್ಡ ಮತ್ತಿತರ ಕಾಯಿಲೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ನೋವಿನಿಂದ ನುಡಿಯುತ್ತಾರೆ ನಾಗಪ್ಪ ಬೋವಿ.
ಈ ಕುಟುಂಬಗಳು ಕಳೆದ ಒಂದೂವರೆ ದಶಕ ಹಿಂದೆಯೇ ಸ್ಥಳೀಯ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿದರೂ ಯಾರೊಬ್ಬರೂ ಗಮನ ಹರಿಸಿದ್ದಿಲ್ಲ. ಆರಂಭದಲ್ಲಿ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದಾಗ ನೀವು ಸ್ಥಳೀಯ ನಿವಾಸಿಗಳು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ನಿಯಮಾನುಸಾರ ನಿಮಗೆ ಮನೆ ಮಂಜೂರು ಆಗಲ್ಲ ಎಂದು ಹೇಳಿ ತಿರಸ್ಕರಿಸಿದ್ದರು.
ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ಕುಟುಂಬಗಳು ಮತದಾರರ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿ ಸೇರಿದಂತೆ ಎಲ್ಲ ಪ್ರಮಾಣಪತ್ರಗಳನ್ನು ಪಡೆದಿದ್ದಾಗಿದೆ ಆದರೂ ಸೂರು ಮಾತ್ರ ಸಿಕ್ಕಿಲ್ಲ.
ಮತಕ್ಕೆ ಬೇಕು ಮನೆ ಬೇಡ: ನಾವು ಸರ್ಕಾರದ ನಿಯಮ ಪ್ರಕಾರ ಎಲ್ಲ ಪ್ರಮಾಣಪತ್ರ ಹೊಂದಿದ್ದೇವೆ. ಪ್ರತಿ ಚುನಾವಣೆ ವೇಳೆ ತಪ್ಪದೇ ನಮ್ಮನ್ನು ಆಟೋದಲ್ಲಿ ಮತದಾನಕ್ಕಾಗಿ ಕರೆದೊಯುತ್ತಾರೆ. ನಮ್ಮ ಹಕ್ಕನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸುತ್ತೇವೆ. ಆದರೆ ಮನೆ ಭಾಗ್ಯ ಕಲ್ಪಿಸುವಂತೆ ಮಾಡಿದ ಮನವಿಗೆ ಪುರಸಭೆ ಆಡಳಿತ ತಿರಸ್ಕರಿಸುವುದು ಯಾವ ನ್ಯಾಯ ಎನ್ನುತ್ತಾರೆ ಅಶೋಕ ಬೋವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ
Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.