ಅನುದಾನ ಸದ್ಬಳಕೆಯಾದರೆ ಸಾರ್ಥಕ
ಸೌಲಭ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆ ತಂದಾಗಲೆ ತೃಪ್ತಿ: ಶಾಸಕ ಪಾಟೀಲ
Team Udayavani, Aug 18, 2019, 10:26 AM IST
ಹುಮನಾಬಾದ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು.
ಹುಮನಾಬಾದ: ಶಾಸಕರ ಅನುದಾನ ಮಾತ್ರವಲ್ಲದೇ ಎಚ್ಕೆಆರ್‌ಡಿಬಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾಲೇಜು ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ನೀಡಿದ್ದೇನೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅನುದಾನ ಪಡೆದು ಮೂಲಸೌಲಭ್ಯ ಕಲ್ಪಿಸಿಕೊಂಡ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ ಸೌಲಭ್ಯಕ್ಕೆ ತಕ್ಕಂತೆ ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ತಂದಾಗಲೇ ಅನುದಾನ ನೀಡಿದ ನಮಗೂ ತೃಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
1700 ಬಡ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿಯುವುದು ಸಂತಸದ ಸಂಗತಿ. ನಾನು ನೀಡಿದ ಅನುದಾನದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣವಾಗಿರುವುದು ನೆಮ್ಮದಿ ನೀಡಿದೆ. ಫಲಿತಾಂಶ ಸುಧಾರಣೆ ಆಗಬೇಕೆಂಬ ಉದ್ದೇಶದ ಹಿಂದೆ ಇಲ್ಲಿ ಏನೂ ಪ್ರಗತಿ ಇಲ್ಲವೆಂದೇನಲ್ಲ. ಇನ್ನೂ ಹೆಚ್ಚು ಪ್ರಮಾಣದಲ್ಲಿ ಸುಧಾರಣೆ ಆಗಬೇಕೆಂಬ ಸದುದ್ದೇಶವಿದೆ ಎಂದರು. ಗುರು-ಶಿಷ್ಯರ ಮಧ್ಯ ಗೌರವದ ಭಾವನೆ ಇರಬೇಕೇ ಹೊರತು ಅದು ಸಲುಗೆ ರೂಪ ಪಡೆದರೆ ಅಪಾಯಕ್ಕೆ ಕಾರಣವಾಗುತ್ತದೆ. ಈ ವಿಷಯದಲ್ಲಿ ಕೊಂಚ ಎಚ್ಚೆತ್ತುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳಿತು ಎಂದು ಸಲಹೆ ನೀಡಿದರು.
ಈ ಕ್ಷೇತ್ರದ ಶಾಸಕನಾದ ನನಗೆ ಸರ್ಕಾರ ಮಾಸಿಕ 40,000 ರೂ. ಸಂಬಳ ನೀಡುತ್ತದೆ. ಆದರೆ ಇಲ್ಲಿನ ಪ್ರಾಧ್ಯಾಪಕರು ನನಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಡಾ|ತುಪ್ಪದ ಅವರೆ ನಿಮಗೆಷ್ಟು ಸಂಬಳ ಎಂಬ ಶಾಸಕರ ಪ್ರಶ್ನೆಗೆ 2 ಲಕ್ಷ ರೂ. ಎನ್ನುವ ಬದಲು ಎರಡು ಬೆರಳು ಮಾಡಿ ತೋರಸಿದಾಗ, ಏನು ತುಪ್ಪದವರೆ ಬಿ.ಎಸ್.ಯಡಿಯೂರಪ್ಪ ಅವರಂತೆ ಎರಡು ಬೆರಳು ತೋರಿಸುತ್ತಿದ್ದಿರಿ ಎಂದು ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಬಾಬುರಾವ್ ಪರಮಶೆಟ್ಟಿ ಮಾತನಾಡಿ, ಶಾಸಕ ರಾಜಶೇಖರ ಪಾಟೀಲ ಅವರು ತಮ್ಮ ಸ್ವಂತ ಸಂಸ್ಥೆಗಿಂತ ನಾಲ್ಕೈದು ಪಟ್ಟು ಹೆಚ್ಚು ಅನುದಾನ ನೀಡಿರುವುದನ್ನು ಗಮನಿಸಿದರೆ ಬಡ ಮಕ್ಕಳ ಮೇಲಿನ ಅವರ ಕಳಕಳಿ ಎಷ್ಟಿದೆ ಎಂಬುದು ತಿಳಿಯುತ್ತದೆ. 4 ದಶಕಗಳ ಹಿಂದೆ ಪಟ್ಟಣದಲ್ಲಿ ಶೈಕ್ಷಣಿಕ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಮಾಜಿ ಸಚಿವ ದಿ.ಬಸವರಾಜ ಪಾಟೀಲ ಅವರು ಪದವಿಪೂರ್ವ, ಪದವಿ ಮಹಾವಿದ್ಯಾಲಯ ಆರಂಭಿಸುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ವೀರಣ್ಣ ತುಪ್ಪದ ಮಾತನಾಡಿ, ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈ ಮಟ್ಟಕ್ಕೆ ಬೆಳೆಯಲು ಶಾಸಕರ ಇಚ್ಛಾಶಕ್ತಿಯೇ ಕಾರಣ ಎಂದು, ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಇನ್ನೋರ್ವ ನಿರ್ದೇಶಕ ಸುರೇಶ ಘಾಂಗ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವರಾವ್ ತಳಘಟಕರ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಡಾ|ಜಯಕುಮಾರ ಸಿಂಧೆ, ಅಲ್ಕಾ ಡಿ.ಸೋಲಂಕರ್, ಡಾ|ಶಾಂತಕುಮಾರ ಬನಗುಂಡಿ, ಡಾ|ಸಂಜೀವಕುಮಾರ, ಡಾ|ರಾಜಕುಮಾರ, ಡಾ|ಸಚಿನ್ ಕುಲಕರ್ಣಿ, ಮಾಧವರಾವ್, ವೀರೇಶ ಹಳಿಮನಿ, ಮಲ್ಲಿಕಾರ್ಜುನ ಬಾಳಿ, ಡಾ|ರೂತಾ ತಾಳ್ಮಡ್ಗಿ, ಡಾ|ಜೈಶ್ರೀ ಶೆಟ್ಟಿ, ಅಂಬರೀಶ ಕನ್ಹೇರಿ, ರಾಜಾಬಾಯಿ, ಸಂಪತಕುಮಾರಿ ಮೊದಲಾದವರು ಇದ್ದರು. ಕಿರಣ-ಅರುಣ ಪ್ರಾರ್ಥಿಸಿದರು. ಡಾ|ಮಹಾದೇವಿ ಹೆಬ್ಟಾಳೆ ನಿರೂಪಿಸಿದರು. ಡಾ|ಪ್ರಹ್ಲಾದ ಚೇಂಗ್ವೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.