ರೈತರಿಗೆ-ಭೂಮಿ, ಕೂಲಿಕಾರರಿಗೆ-ಕೆಲಸ ನೀಡಲು ಹಿಂದೇಟು
Team Udayavani, Oct 25, 2019, 5:43 PM IST
ಹುಣಸಗಿ: ಆಡಳಿತ ನಡೆಸಿದ ಎಲ್ಲ ಸರಕಾರಗಳು ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಉಚಿತ ಭೂಮಿ ನೀಡುವ ಜತೆಗೆ ಎಲ್ಲ ಮೂಲ ಸೌಲಭ್ಯ ನೀಡುತ್ತಿವೆ. ಆದರೆ ಊಳುವ ರೈತನಿಗೆ ಭೂಮಿ ಮತ್ತು ಕೃಷಿ ಕೂಲಿಕಾರರರಿಗೆ ಕೆಲಸ ನೀಡಲು ಕಾನೂನು ತೊಡಕಾಗುತ್ತಿದೆ ನೆಪ ಹೇಳಿ ಜಾರಿಕೊಳ್ಳುತ್ತಿವೆ ಎಂದು ರಾಜ್ಯ ಮುಖಂಡ ನಿತ್ಯಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಕೂಲಿಕಾರರ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
ಸಮ ಸಮಾಜ ನಿರ್ಮಾಣಕ್ಕಾಗಿ ದಾಸರು, ಶರಣರು, ಸಂತರು ಸಮಾಜಸೇವೆಯಲ್ಲಿ ತೊಡಿಗಿಸಿಕೊಂಡಿದ್ದರು. ಆದರೆ ಇದುವರೆಗೂ ಅದು ಕೈಗೂಡುತ್ತಿಲ್ಲ. ಇದಕ್ಕೆ ಸರಕಾರದ ನೀತಿ-ನಿಯಮಗಳೇ ಕಾರಣ. ಯಾವುದೇ ಸೌಲಭ್ಯ ನೀಡದೇ
ನೆರೆ ಹಾವಳಿ ಪೀಡಿತ ಪ್ರದೇಶದಲ್ಲಿ ಜನರ ಜೀವನ ಹದೆಗೆಟ್ಟಿದ್ದು, ಅವರ ಬದುಕು ನೀರು ಪಾಲಾಗಿದೆ. ಪುನರ್ವಸತಿ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಸುರೇಖಾ ಕುಲಕರ್ಣಿ ಮಾತನಾಡಿ, ಹಕ್ಕುಗಳಿಗಾಗಿ ಹೋರಾಟ ಮಾಡಲು ಹೋದರೆ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಆದ್ದರಿಂದ ನಮ್ಮ ಹಕ್ಕು ಪಡೆದುಕೊಳ್ಳಲು ನಾವೇ ಹೋರಾಟ ಮಾಡುವುದು ಅನಿವಾರ್ಯ. ಸಂಘಟಿತರಾಗಿ ಹೋರಾಟ ಮಾಡಿದ್ದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದರು.
ಮುಖಂಡ ದಾವಲಸಾಬ ನದಾಫ್ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದಂತೆ ಕೂಲಿಕಾರರು ಕೂಡ ಹೋರಾಟ ಮಾಡಲು ಮುನ್ನುಗ್ಗಬೇಕಿದೆ ಎಂದರು. ಸಮ್ಮೇಳನ ಆರಂಭಕ್ಕೂ ಮುನ್ನ ಪ್ರಾರಂಭವಾದ ಮೆರವಣಿಗೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ನೀಲಕಂಠೇಶ್ವರ ದೇವಸ್ಥಾನದವರೆಗೂ ನಡೆಯಿತು.
ಮಲ್ಲಮ್ಮ ಕೋಡ್ಲಿ, ಮಲ್ಲಮ್ಮ ಗಡದ, ಸೋಫಿಸಾಬ ನದಾಫ್, ಬಂದಗೀಸಾಬ ಅಗ್ನಿ, ಕಾಶೀನಾಥ ಹಾದಿಮನಿ, ಬಸವರಾಜ ಅನಸೂರ, ಬಸಮ್ಮ ಆಲಾಳ, ಸಿದ್ದಪ್ಪ ಪೂಜಾರಿ, ರಾಜು ದೊಡ್ಡಮನಿ, ಇಮಾಮಬಿ ಇತರರು ಇದ್ದರು. ಬಸವರಾಜ ಕಾಮನಟಗಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.