ಗ್ರಾಮೀಣ ಪತ್ರಕರ್ತರ ಸಾಧನೆ ಅಪಾರ
ಮಾಧ್ಯಮ ಕ್ಷೇತ್ರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ
Team Udayavani, Jul 28, 2019, 10:46 AM IST
ಹುಣಸಗಿ: ಹುಣಸಗಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ತಿಮ್ಮಮ್ಮ ಶಂಭನಗೌಡ್ರ ಸಸಿಗೆ ನೀರೆರೆದು ಉದ್ಘಾಟಿಸಿದರು.
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಂದ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕ್ರೀಮಿನಾಶಕ ಔಷಧ ಬಳಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ಕಲಬುರಗಿ ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಎಸ್.ಆರ್. ಮಣೂರ ಹೇಳಿದರು.
ಹುಣಸಗಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಹುಣಸಗಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತುಂಬಾ ಮುಂದುವರಿದಿದ್ದು, ಅಷ್ಟೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಿದೆ ಎಂದರು.
ನಂತರ ಮಾತನಾಡಿದ ಅಲ್ಮಾ ಮಿಡಿಯಾ ಸ್ಕೂಲ್ ಸಂಸ್ಥಾಪಕ ಹಾಗೂ ಚಿತ್ರ ನಿರ್ದೇಶಕ ಗೌರೀಶ ಅಕ್ಕಿ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಹೇಳಿದ ಗಾಂಧೀಜಿ ಅವರಂತೆ ಹಳ್ಳಿಗಾಡಿನ ಪತ್ರಕರ್ತರ ಸಾಧನೆ ಅಪಾರ ಎಂದರು.
ಹುಣಸಗಿ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ರಾಘವೇಂದ್ರ ಕಾಮನಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಿಮ್ಮಮ್ಮ ಶಂಭನಗೌಡ್ರ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್ ವಿಶೇಷ ವರದಿಗಳ ಗ್ಯಾಲರಿ ಅನಾವರಣಗೊಳಿಸಿದರು. ಡಾ| ವೀರಭದ್ರಗೌಡ, ಎಚ್.ಸಿ. ಪಾಟೀಲ ಮತ್ತು ಮಹಾದೇವಿ ಬೇವಿನಾಳಮಠ ಪತ್ರಿಕಾ ಒದುಗರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಪರಿಷತ್ ಮಾಜಿ ಸದಸ್ಯ ವೆಂಕಟಗಿರಿ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ನಾರಾಯಣ ಡಿ. ನಾಯಕ, ದೇವಣ್ಣ ಮಲಗಲದಿನ್ನಿ, ರಾಜು ಮಲಗಲದಿನ್ನಿ, ಹುಣಸಗಿ ತಹಶೀಲ್ದಾರ್ ಸುರೇಶ ಚವಲರ್, ಸಿಪಿಐ ಪಂಡಿತ್ ಸಗರ್ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೋರಮ್ಮ ಯಡಿಯೂರಮಠ, ಮಾಜಿ ಸೈನಿಕ ಹೇಮಂತ ರಾಠೊಡ, ಹಿರಿಯ ಪತ್ರಕರ್ತ ಎಸ್.ಆರ್. ಮಣೂರ, ಗೌರೀಶ ಅಕ್ಕಿ ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಭೀಮಶೇನರಾವ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಶಿವಶರಣ ಕಟ್ಟಿಮನಿ ಸ್ವಾಗತಿಸಿದರು. ಬಸವರಾಜ ಅಂಗಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.