ನೀಲಕಂಠರಾಯನಗಡ್ಡಿಯಲ್ಲಿ ಮತ ಜಾಗೃತಿ
ಪ್ರವಾಹದ ಊರಿಗೆ ಮೊದಲ ಸಲ ಭೇಟಿ ನೀಡಿದ ಸಿಇಒ ಕವಿತಾ ಮನ್ನಿಕೇರಿ
Team Udayavani, Apr 13, 2019, 11:46 AM IST
ಹುಣಸಗಿ: ಮತದಾನ ಜಾಗೃತಿಗೆ ನೀಲಕಂಠರಾಯನಗಡ್ಡಿಗೆ ಅಧಿಕಾರಿಗಳೊಂದಿಗೆ ತೆರಳಿದ ಜಿಪಂ ಸಿಇಒ ಕವಿತಾ ಮನ್ನಿಕೇರಿ.
ಹುಣಸಗಿ: ಪ್ರತಿವರ್ಷ ಪ್ರವಾಹ ಎದುರಾಗಿ ಎಲ್ಲ ಕಡೆಗೂ ಸುದ್ದಿಯಾಗುವ ಕೃಷ್ಣಾನದಿ ದಂಡೆ ಆಚೆಗಿನ ನೀಲಕಂಠರಾಯನಗಡ್ಡಿ ಗ್ರಾಮ ಅದು. ದಶಕ ಕಳೆದರೂ ಇವರೆಗೂ ಮತದಾನ ಜಾಗೃತಿ ಆಗಿರಲಿಲ್ಲ. ಅಲ್ಲಿನ ಜನರಿಗೆ ಮತದಾನದ ಜಾಗೃತಿ ಮೂಡಿಸಲೇಬೇಕು ಎಂಬ ನಿರ್ಧಾರ ಮಾಡಿದ ಯಾದಗಿರಿ ಜಿಲ್ಲೆ ಸಿಇಒ ಹಾಗೂ ಚುನಾವಣಾ ಸ್ವೀಪ್ ಕಮಿಟಿ ಅಧ್ಯಕ್ಷೆ ಕವಿತಾ ಮನ್ನಿಕೇರಿ ಅವರು ಶುಕ್ರವಾರ ಸಂಜೆ ಗಡ್ಡಿಗೆ ಭೇಟಿ ನೀಡಿದರು.
ನೀಲಕಂಠರಾಯನಗಡ್ಡಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಕೃಷ್ಣಾನದಿ ದಾಟಿಕೊಂಡೇ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ಎಷ್ಟೋ ಚುನಾವಣೆಗಳು ಬಂದರೂ ಗ್ರಾಮಸ್ಥರಿಗೆ ಯಾವುದೇ ಜಾಗೃತಿ ಕಾರ್ಯಕ್ರಮ ನಡೆಸಿ ಪ್ರಜ್ಞೆ ಮೂಡಿಸಿರಲಿಲ್ಲ. ಈ ಬಾರಿ ಲೋಕಸಭಾ ಚುನಾವಣಾ ಉದ್ದೇಶ ಹಾಗೂ ಮತದಾನದ ಶೇಕಡಾವಾರು ಫಲಿತಾಂಶ ಹೆಚ್ಚಿಸುವ ಸಲುವಾಗಿ
ನೀಲಕಂಠರಾಯನಗಡ್ಡಿಗೆ ಕಲಾ ತಂಡದೊಂದಿಗೆ ಸ್ವೀಪ್ ಕಮಿಟಿ ಅಧ್ಯಕ್ಷೆ ಕವಿತಾ ಮನ್ನಿಕೇರಿ ತೆರಳಿ ಜಾಗೃತಿ ಮೂಡಿಸಿದರು.
ಶುಕ್ರವಾರ ಸಂಜೆ 7:00ಗಂಟೆ ಆಗುತ್ತಲೇ ಕೃಷ್ಣಾನದಿ ದಂಡೆಯಲ್ಲಿ ಇಳಿದ ಅವರು ಕಲ್ಲು ಬಂಡೆ ಮೆಟ್ಟಿದ ಅನುಭವದೊಂದಿಗೆ ಅರ್ಧ ಕಿಮೀ ನಡೆದುಕೊಂಡು ಗಡ್ಡಿ ತಲುಪಿ ಸಾಹಸ ಮೆರೆದರು. ಗಡ್ಡಿಯೊಳಗೆ ಬರುತ್ತಿದ್ದಂತೆ
ಗ್ರಾಮಸ್ಥರು ಬರುವಿಕೆಗಾಗಿ ಕಾಯುತ್ತಿದ್ದರು. ಅಲ್ಲಿನ ಜನರ ವೇಷ ಮತ್ತು ಮನೆಗಳ ನೋಡಿ ಆಶ್ಚರ್ಯವಾದರು. ಹಾಗೇ ಜಾಗೃತಿ ವೇಳೆ ಹಿರಿಯ ಮತದಾರರಿಗೆ ಸನ್ಮಾನ ಮಾಡಿ ಮಾನವೀಯತೆ ಮೆರೆದ ಅವರು ಅವರೊಂದಿಗೆ ಕುಳಿತು ಮತದಾನದ ಜಾಗೃತಿ ಕಾರ್ಯಕ್ರಮ ವೀಕ್ಷಿಸಿದರು. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎನಿಸುವಂತಿತ್ತು.
ಜಾಗೃತಿ ಮೂಡಿಸಿದ ನಂತರ ರಾತ್ರಿ 8:00ಕ್ಕೆ ಮರಳಿ ಯಾದಗಿರಿಯತ್ತ ಪ್ರಯಾಣಿಸಲು ಕಲ್ಲು ಮುಳ್ಳು ತಾಗಿಸಿಕೊಂಡು ಒಂದೊಂದು ಹೆಜ್ಜೆ ಮೆಲ್ಲಗೆ ಇಡುತ್ತ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನಡೆದು ಬಂದರು.
ಹೊಸ ಅನುಭವ: ನೀಲಕಂಠರಾಯನಗಡ್ಡಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಕರ್ತವ್ಯ ಏನೂ ಮಾಡುವಂತಿಲ್ಲ. ಚುನಾವಣೆ ಬೇರೆ. ಹೀಗಾಗಿ ಮತದಾನದ ಜಾಗೃತಿ ಮೂಡಿಸುವುದು ಅಗತ್ಯವಾಗಿತ್ತು. ಸಂಚಾರ ಸಮಸ್ಯೆ ನಡೆವೆಯೇ ಕಲ್ಲು, ಮುಳ್ಳಿನ ದಾರಿಯಲ್ಲಿ ನಡೆದ ಹೊಸ ಅನುಭವ ನನ್ನಗಾಗಿದೆ ಎಂದು ಕವಿತಾ ಮನ್ನಿಕೇರಿ ಅವರು ಉದಯವಾಣಿಗೆ ಜತೆಗೆ ಅನಿಸಿಕೆ ಹಂಚಿಕೊಂಡರು.
ನೀರಿಗಾಗಿ ಅಳಲು ತೋಡಿಕೊಂಡ ಜನರು: ನಮಗೆ ಕುಡಿಯಲು ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿನ ಜನರು ಅಳಲು ತೋಡಿಕೊಂಡರು. ಪ್ರತಿಜ್ಞಾನವಿಧಿ ಬೋಧನೆ: 40 ಕುಟುಂಬ ಇರುವ ಇಲ್ಲಿ 132 ಮತಗಳು ಇವೆ. ಹೀಗಾಗಿ ಎಲ್ಲ ಮತಗಳು ಚಲಾವಣೆ ಆಗಲೇಬೇಕು ಎಂಬ ನಿರ್ಧಾರದೊಂದಿಗೆ ಹಿರಿಯ ಮತದಾರರು ಸೇರಿದಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಗುಳೆ ಹೋದ ಎಲ್ಲರನ್ನು ಮರಳಿ ಕರಿಸಿ ಮತದಾನ ಮಾಡಬೇಕು. ವೃದ್ಧರಿಗೆ, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತದಾನ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಟ್ಟರು.
ಬಾಲಪ್ಪ ಎಂ. ಕುಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.