ಜ್ಞಾನದ ದೇಗುಲ ಹಡಗಲಿ ಗ್ರಂಥಾಲಯ!

1965ರಲ್ಲಿಕಟ್ಟಡ ಆರಂಭ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಉರ್ದು ಪುಸ್ತಕಗಳು ಲಭ್ಯ

Team Udayavani, Oct 31, 2019, 6:15 PM IST

31-October-29

ಹೂವಿನಹಡಗಲಿ: ಪಟ್ಟಣದಲ್ಲಿರುವ ಕೇಂದ್ರ ಗ್ರಂಥಾಲಯ ಇಲ್ಲಿರುವ ಜನರ ಪಾಲಿಗೆ ಜ್ಞಾನಕೇಂದ್ರವಾಗಿದೆ. ಪ್ರಚಲಿತ ವಿದ್ಯಮಾನಗಳಿರುವ ದಿನಪತ್ರಿಕೆಯಿಂದ ಹಿಡಿದು ನಾಡಿನ ಹಿರಿಯರ ಸಾಹಿತಿಗಳ, ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಮಹನೀಯರ ಬಗ್ಗೆ ಸಮಗ್ರ ಮಾಹಿತಿ ಇರುವ ಪುಸ್ತಕಗಳು ಇಲ್ಲಿದ್ದು, ಗ್ರಂಥಾಲಯ ಜನರ ಓದುವ ದಾಹ ನೀಗಿಸುತ್ತಿದೆ.

ಹಡಗಲಿ ಗ್ರಂಥಾಲಯಕ್ಕೆ ದೀರ್ಘ‌ ಕಾಲದ ಇತಿಹಾಸವಿದೆ. 1965ರಲ್ಲಿ ಸ್ಥಾಪಿತಗೊಂಡಿದ್ದ ಗ್ರಂಥಾಲಯ ಮೊದಲು ಪಟ್ಟಣದ ಡಾ|ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಇತ್ತು. ನಂತರದಲ್ಲಿ ಇಲಾಖೆಯ ಸ್ವಂತ ಜಾಗದಲ್ಲಿ 2000-01ರಲ್ಲಿ ನೌಕರರ ಭವನದ ಪಕ್ಕದಲ್ಲಿ ಸುಸಜ್ಜಿತ ಕಟ್ಟಡ ಹೊಂದಿದೆ. ಜತೆಗೆ ಓದುವ ವಾತಾವರಣ ಕಲ್ಪಿಸಲು ಗಿಡ ಮರಗಳನ್ನು ಬೆಳೆಸಿ ಓದುಗರಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿದೆ.

ಹಡಗಲಿ ಗ್ರಂಥಾಲಯದಲ್ಲಿ ಒಟ್ಟು 3 ವಿಭಾಗಗಳಿದ್ದು, ಗ್ರಂಥಾಲಯದಲ್ಲೇ ಕುಳಿತು ವಿಶೇಷ ಪುಸ್ತಕ ಓದಲು ಸಂದರ್ಭ ಸೇವಾ ವಿಭಾಗ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗಲು ಸ್ಪರ್ಧಾತ್ಮಕ ವಿಭಾಗ, ನಿಯತಕಾಲಿಕ ಹಾಗೂ ಸಮಗ್ರ ಮಾಹಿತಿ ಒಳಗೊಂಡಂತೆ ಪುಸ್ತಕಗಳು, ಇತರೆ ಓದುಗರಿಗೆ ಅವಶ್ಯವಿರುವ ದಿನ ಪತ್ರಿಕೆಗಳು ಹೀಗೆ ಮೂರು ವಿಭಾಗದಲ್ಲಿ ಸುಮಾರು 35 ಸಾವಿರ ಪುಸ್ತಕಗಳನ್ನೊಳಗೊಂಡಿದೆ.

ಕನ್ನಡ, ಇಂಗ್ಲಿಷ್‌ ಹಿಂದಿಯಲ್ಲದೇ ಉರ್ದು ಭಾಷೆಯ ಪುಸ್ತಕಗಳು ಲಭ್ಯವಿದೆ. ಒಟ್ಟು 2300 ಓದುಗರ ಸದಸ್ಯರ ಸಂಖ್ಯೆ ಒಳಗೊಂಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಸದಸ್ಯತ್ವ ಹೊಂದಿದ ಗ್ರಂಥಾಲಯಕ್ಕೆ ಓದುಗರು ಕುಳಿತುಕೊಂಡು ಓದಲು ಆಸನದ ವ್ಯವಸ್ಥೆ ಸಹ ಮಾಡಲಾಗಿದೆ. ಒಂದೇ ಬಾರಿಗೆ 80-90 ಸಂಖ್ಯೆ ಓದುಗರು ಗ್ರಂಥಾಲಯದಲ್ಲಿ ಕುಳಿತುಕೊಂಡು ಓದಬಹುದಾಗಿದ್ದು, ಮಹಿಳಾ ಓದುಗರಿಗೆ ಪ್ರತ್ಯೇಕ ವ್ಯವಸ್ಥೆ ಸಹ ಮಾಡಲಾಗಿದೆ.

ಸದಸ್ಯತ್ವಕ್ಕಾಗಿ ಗ್ರಂಥಾಲಯವು ಶುಲ್ಕ ನಿಗದಿಪಡಿಸಿಡಿದ್ದು ಒಂದು ಪುಸ್ತಕಕ್ಕೆ 102 ರೂ.,
2 ಪುಸ್ತಕಕ್ಕೆ 152, 3 ಪುಸ್ತಕಕ್ಕೆ 202 ರೂ.ಗಳಂತೆ ಒಟ್ಟು ಒಬ್ಬ ಓದುಗ 3 ಪುಸ್ತಕಗಳನ್ನು 15 ದಿವಸಗಳ ಕಾಲ ಮಿತಿಯೊಳಗೆ ಪುಸ್ತಕವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಓದಬಹುದಾಗಿದೆ.

ಡಿಸಿ ಪ್ರಶಂಸನಾ ಪತ್ರ: ಇತ್ತೀಚೆಗೆ ಗ್ರಂಥಾಲಯದ ಮಾಹಿತಿಯನ್ನು ಸಮರ್ಪಕವಾಗಿ ಸಕಾಲದಲ್ಲಿ ಸಮಯಕ್ಕೆ ಸರಿಯಾಗಿ ಜಿಲ್ಲಾಧಿಕಾರಿಗಳಿಗೆ ಒದಗಿಸಿರುವುದರಿಂದಾಗಿ ಸಕಾಲ ಸೇವೆಗಳ ಅಧಿನಿಯಮದಲ್ಲಿ ರಾಜ್ಯದ ನಾಗರಿಕರ ಪರವಾಗಿ ಜಿಲ್ಲಾಧಿಕಾರಿ ನಕುಲ್‌ ಅವರು ಪ್ರಶಂಸನಾ ಪತ್ರ ನೀಡಿದ್ದಾರೆ.

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.