ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ
Team Udayavani, Jun 5, 2019, 11:32 AM IST
ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ: ಪ್ರಸ್ತುತ ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ತನಕ ಕಳೆದ ವರ್ಷ ಹೋಲಿಕೆ ಮಾಡಿದಲ್ಲಿ ವಾರ್ಷಿಕ ಸರಾಸರಿ ಮಳೆ 144 ಮಿಮೀ ಆಗಬೇಕಿತ್ತು. ಕಳೆದ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಅಂದರೆ ಈ ಹೊತ್ತಿಗಾಗಲೇ 226 ಮಿಮೀ ಮಳೆ ಆಗಿತ್ತು. ಪ್ರಸ್ತುತ ಈ ಬಾರಿ 25 ಮಿಮೀ ಮಾತ್ರ ಮಳೆಯಾಗಿ ಶೇ.66ರಷ್ಟು ವಾಡಿಕೆ ಮಳೆಗಿಂತ ಕೊರತೆಯಾಗಿರುವುದು ತಾಲೂಕಿನ ರೈತರನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷ ಮೇ ಅಂತ್ಯದಲ್ಲಿ 53,961 ಹೆಕ್ಟೇರ್ ಪ್ರದೇಶದ ಒಟ್ಟು ಗುರಿಯಲ್ಲಿ 17.23 ರಷ್ಟು ಬಿತ್ತನೆ ಆಗಿತ್ತು. ಆದರೆ ಈ ವರ್ಷ ಈ ತನಕ ಒಂದು ಹೆಕ್ಟೇರ್ ಪ್ರದೇಶದಷ್ಟು ಸಹ ಬಿತ್ತನೆಯಾಗದಿರುವುದು ತಾಲೂಕಿನಲ್ಲಿ ಕಂಡು ಬಂದಿದ್ದು, ರೈತರ ಬದುಕು ಭವಿಷ್ಯದಲ್ಲಿ ಕಷ್ಟದಾಯಕ ಎನ್ನುವ ಮುನ್ಸೂಚನೆ ತೋರುತ್ತಿದೆ. ಕಳೆದ ಬಾರಿ ಒಟ್ಟಾರೆ ಮುಂಗಾರಿನಲ್ಲಿ 99.58 ರಷ್ಟು ಬಿತ್ತನೆಯಾಗಿತ್ತು. ಹಿಂಗಾರಿನಲ್ಲಿ ಒಟ್ಟು 24,672 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 17,616 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಶೇ 71.40 ರಷ್ಟು ಸಾಧನೆ ಮಾಡಲಾಗಿತ್ತು.ಈ ಬಾರಿ ಮುಂಗಾರಿಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಒಟ್ಟು 3 ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದ್ದು, ಹಡಗಲಿ, ಹಿರೇಹಡಗಲಿ, ಇಟಗಿ ಕಸಬಾದಲ್ಲಿ ಸಂಪರ್ಕ ಕೇಂದ್ರ ತೆರಯಲಾಗಿದೆ. ಅಲ್ಲದೇ ಬೀಜ ವಿತರಣೆಗೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ರೈತರಿಗೆ ಬಿತ್ತನೆ ಬೀಜದ ಸಮಸ್ಯೆಯಾಗಬಾರದು ಎನ್ನುವ ಹಿನ್ನೆಲೆಯಲ್ಲಿ 3 ಉಪ ಕೇಂದ್ರಗಳನ್ನು ಹೊಳಲು, ಹೊಳಗುಂದಿ, ಹಿರೇಮಲ್ಲನಕೇರಿ ಗ್ರಾಮಗಳಲ್ಲಿ ತೆರಯಲಾಗಿದೆ.
ರೈತರಿಗೆ ಅಗತ್ಯ ಬೀಜ ಸಂಗ್ರಹ ಮಾಡಲಾಗಿದ್ದು, ಭತ್ತ ಸುಮಾರು 60 ಕ್ವಿಂಟಲ್, ಜೋಳ 36 ಕ್ವಿಂ., ರಾಗಿ 12 ಕ್ವಿಂ., ಮೆಕ್ಕೆಜೋಳ 240 ಟನ್, ಸಜ್ಜೆ 36 ಕ್ವಿಂ.ತೊಗರಿ 240 ಕ್ವಿಂ. ಹೆಸರು 18 ಕ್ವಿಂ. ಸೂರ್ಯಕಾಂತಿ ಬೀಜ 24 ಕ್ವಿಂಟಲ್ದಷ್ಟು ಸಂಗ್ರಹಿಸಲಾಗಿದ್ದು, ಮಳೆ ಬಿದ್ದ ತಕ್ಷಣ ರೈತರಿಗೆ ಆಗತ್ಯ ಬೀಜಗಳನ್ನು ವಿತರಿಸಲಾಗುವುದು. •ನೀಲಾನಾಯ್ಕ,
ಕೃಷಿ ಸಹಾಯಕ ನಿರ್ದೇಶಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.