ಕಗ್ಗಲಗಟ್ಟಿ ತಾಂಡಾದಲ್ಲಿಲ್ಲ ನೀರಿನ ಸಮಸ್ಯೆ
24 ಕೆರೆಗಳಿಗೆ ನೀರು ಪೂರೈಕೆ
Team Udayavani, Aug 30, 2019, 4:20 PM IST
ಹೂವಿನಹಡಗಲಿ: ಕಗ್ಗಲಗಟ್ಟಿ ತಾಂಡಾದ ಕೆರೆಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಕಾರ್ಯಕ್ಕೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಚಾಲನೆ ನೀಡಿದರು
ಹೂವಿನಹಡಗಲಿ: ತಾಲೂಕಿನ ಕಗ್ಗಲಗಟ್ಟಿ ತಾಂಡಾ ದೊಡ್ಡ ತಾಂಡಾಗಳಲ್ಲಿ ಒಂದಾಗಿದ್ದು, ಇಲ್ಲಿ 3325 ಜನ ಸಂಖ್ಯೆಯಿದೆ. ಇಷ್ಟೊಂದು ದೊಡ್ಡ ಸಂಖ್ಯೆ ಜನತೆಗೆ ದಶಕಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇತ್ತು. ಇಂದು ತುಂಗಭದ್ರಾ ನದಿಯಿಂದ ಇಲ್ಲಿನ ಕೆರೆಗೆ ನೀರುಣಿಸುವ ಮೂಲಕವಾಗಿ ಈ ಗ್ರಾಮದಲ್ಲಿದ್ದ ದಶಕಗಳ ಸಮಸ್ಯೆ ಬಗೆಹರಿಸಲಾಗಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ತಾಲೂಕಿನ ಕಗ್ಗಲಗಟ್ಟಿ ತಾಂಡಾದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಕಳೆದ ಬಾರಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಾಗ ತಾಂಡಾದ ಜನತೆ ಇಲ್ಲಿನ ನೀರಿನ ಸಮಸ್ಯೆ ಕುರಿತು ಕೊಡಗಳನ್ನೇ ನನಗೆ ತೋರಿಸಿದ್ದರು. ಆದರೆ ಮೊದಲನೇ ಬಾರಿ ಗೆದ್ದಾಗ ಸಮಸ್ಯೆ ಬಗೆಹರಿಸಲು ಸಾದ್ಯವಾಗಲಿಲ್ಲ, ಈಗ ಎರಡನೇ ಬಾರಿ ಗೆದ್ದ ಮರುದಿನದಿಂದಲೇ ಈ ತಾಂಡಾ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದರು.
ತಾಲೂಕಿನ ಕಾಲ್ವಿ, ತಾಂಡಾ, ಬಿತ್ಯಾನತಾಂಡಾ, ಬಾನ್ಯಾನತಾಂಡಾ ಒಳಗೊಂಡಂತೆ ಸುಮಾರು 63 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ. ಕೆಲಸ ತುಂಬಾ ಭರದಿಂದ ಸಾಗಿದೆ ಎಂದರು. ತಾಲೂಕಿನಲ್ಲಿ ಕಳೆದ 6 ವರ್ಷಗಳ ಅವಧಿಯಲ್ಲಿ ನೀರಾವರಿಗೆ ಹೆಚ್ಚು ಒತ್ತು ಕೊಡಲಾಗಿದ್ದು, ಒಟ್ಟು 24 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿದೆ. ಇದರಿಂದಾಗಿ ದನ ಕರುಗಳಿಗೆ ಜನತೆಗೆ ನೀರಿನ ಸಮಸ್ಯೆ ತಪ್ಪಿದಂತಾಗುತ್ತದೆ, ವಿಶೇಷಾವಾಗಿ ರೈತರಿಗೆ ತಮ್ಮ ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.
ಯಾವುದೇ ಒಂದು ಗ್ರಾಮಕ್ಕೆ ಸಾಮೂಹಿಕವಾಗಿ ಕೆಲಸವಾಗಬೇಕಾದಲ್ಲಿ ಗ್ರಾಮದವರೆಲ್ಲ ಒಗ್ಗಟ್ಟಾಗಿ ಇರಬೇಕು ಅಂದಾಗ ಜನಪರ ಕೆಲಸ ಕಾರ್ಯಗಳು ನಡೆಯುತ್ತವೆ. ಇಲ್ಲವಾದಲ್ಲಿ ವಿನಾಕಾರಣ ರಾಜಕಾರಣದಿಂದಾಗಿ ಕೆಲಸಗಳು ವಿಳಂಬವಾಗುತ್ತವೆ. ಕಾರಣ ನೀವುಗಳು ಒಗ್ಗಟ್ಟಿನಿಂದ ಇರಿ ಎಂದರು.
ರಾಬಕೋ ನಿರ್ದೇಶಕ ಕಾಂತಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಬಸಣ್ಣ, ತಾಪಂ ಸದಸ್ಯೆ ಶ್ವೇತಾಬಾಯಿ ಲಕ್ಷ್ಮಣ, ಗ್ರಾ.ಪಂ ಅಧ್ಯಕ್ಷೆ ಮಂಜುಳಮ್ಮ ಮಲ್ಲಿಕಾರ್ಜುನ, ವಿಶಾಲಾಕ್ಷಿ ಬಾಯಿ, ವಿ.ಡಿ.ನಾಯ್ಕ, ಭೀಮಾನಾಯ್ಕ, ಚಂದ್ರಣ್ಣ, ಲಕ್ಕಿಬಾಯಿ, ಕೊಳಚಿ ಹಾಲಪ್ಪ, ಶಿವಪುತ್ರಪ್ಪ, ಬಾಲಾಜಿ, ಪುಟ್ಟನಾಯ್ಕ, ಲಕ್ಷ್ಮಣ, ಯುವರಾಜ್, ಠಾಕೋರ್ ನಾಯ್ಕ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ಐಗೋಳ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭಾಕರ ಗೌಡ್, ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.