ಕಾಲುವೆ ಬಸಿ ನೀರಿಗೆ ಬಸವಳಿದ ಜನ!
ಮೀರಾಕೊರ್ನ ಹಳ್ಳಿಯ ಮನೆಗಳಲ್ಲೂ ಉಕ್ಕುವ ನೀರುಶಾಲಾ ಕಟ್ಟಡ ಶಿಥಿಲ; ಪಾಲಕರಲ್ಲಿ ಆತಂಕ
Team Udayavani, Nov 13, 2019, 12:50 PM IST
ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ: ಯಾವುದೇ ಒಂದು ನೀರಾವರಿ ಯೋಜನೆ ರೈತರಿಗೆ ಉಪಯೋಗವಾಗಬೇಕು. ಅಂದಾಗ ಮಾತ್ರ ಆ ಯೋಜನೆ ಸಾರ್ಥಕವಾಗುತ್ತದೆ. ಆದರೆ, ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ತಾಲೂಕಿನ ರೈತರಿಗೆ ಆನುಕೂಲವಾಗುವುದರೊಂದಿಗೆ ಕೆಲ ಗ್ರಾಮಗಳಿಗೆ ಕಂಟಕವಾಗಿ ಪರಿಣಮಿಸಿದೆ.
ಮೀರಾಕೊರ್ನಹಳ್ಳಿ ಗ್ರಾಮದ ಮೇಲ್ಭಾಗದಲ್ಲಿ ಯೋಜನೆಯ ಪ್ರಮುಖ ಕಾಲುವೆ ಹಾಯ್ದು ಹೋಗಿದೆ. ಆದರೆ ಆ ಕಾಲುವೆ ಮೂಲಕವಾಗಿ ಕೆಳಗೆ ಬಸಿ ನೀರು ಬರುತ್ತಿರುವುದರಿಂದಾಗಿ ಕಾಲುವೆ ಕೆಳಗೆ ಇರುವ ಮೀರಾಕೊರ್ನಹಳ್ಳಿ ಗ್ರಾಮ ಕಳೆದ 6-7 ವರ್ಷದಿಂದಲೂ ಗ್ರಾಮದ ತುಂಬೆಲ್ಲಾ ಬಸಿ ನೀರು ಉಂಟಾಗಿ ಜನತೆಗೆ ತೊಂದರೆಯಾಗಿದೆ. ಅಷ್ಟೇಯಲ್ಲದೆ ಯಾವುದಾದರೂ ಕೆಲಸಕ್ಕೆಂದು ಭೂಮಿ ಅಗೆದರೆ ಸಾಕು ನೀರು ಚಿಮ್ಮುತ್ತದೆ. ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದಲೂ ತಾಲೂಕಿನ ಮಿರಾಕೊರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಬುನಾದಿಯ ಕೆಳಗೆ ನೀರು ಹರಿಯುತ್ತಿದ್ದರಿಂದ ಕಟ್ಟಡಕ್ಕೆ ತೊಂದರೆಯಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇದರಿಂದಾಗಿ ಕಟ್ಟಡ ಶಿಥಿಲಗೊಂಡು ಮಕ್ಕಳಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಯೋಜನೆಯಿಂದಾಗಿ ಪ್ರಮುಖ ಕಾಲುವೆಗೆ ನೀರು ಹರಿಸಿದಾಗಲೊಮ್ಮೆ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಜನತೆ ಅತಂಕದಲ್ಲಿದ್ದಾರೆ. ಕಾಲುವೆಗೆ ನೀರು ಬಿಟ್ಟ ಸಮಯದಲ್ಲಿ ನೀರು ಬಸಿಯುತ್ತಿತ್ತು.
ಯಾವ ಸಮಯದಲ್ಲಾದರೂ ಅನಾಹುತವಾಗುದ ಸಾಧ್ಯತೆ ಹೆಚ್ಚಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಬುನಾ ದಿಯಿಂದ ನೀರು ಹೊರ ಬರುತ್ತಿದ್ದು, ಮಕ್ಕಳ ಪಾಲಕರು ಆತಂಕಗೊಂಡಿದ್ದಾರೆ. ಒಂದನೇ ತರಗತಿಯಿಂದ 7ನೇ ತರಗತಿವರೆಗೆ ತರಗತಿಗಳು ನಡೆಯುತ್ತಿವೆ. ಶಾಲೆಯ ಕಟ್ಟಡ ಈಗಾಗಲೇ ಶಿಥಿಲಗೊಂಡಿವೆ. ಮೂರು ಕೋಣೆಗಳ ಮೇಲ್ಛಾವಣಿಯ ಸಿಮೆಂಟ್ ಕೀಳುತ್ತಿದೆ. ಮಳೆ ಬಂದರೆ ಶಾಲೆಯ ಆವರಣವೂ ಜಲಾವೃತವಾಗುತ್ತದೆ.
ಮಕ್ಕಳಿಗೆ ಆಟವಾಡಲೂ ಜಾಗ ಇಲ್ಲದಂತಾಗಿದೆ. ಈಗಿರುವ ಶಾಲಾ ಕಟ್ಟಡ ಮೇಲೆ ಎರಡು ಕೋಣೆ ನಿರ್ಮಿಸಲಾಗಿದೆ. ಕೆಳ ಭಾಗದಲ್ಲಿ ನೀರು ಹೋಗುತ್ತಿರುವುದರಿಂದ ಅನಾಹುತವಾಗುವ ಹಂತಕ್ಕೆ ಬಂದಿದೆ.
ಶಾಲೆಯ ಮೂರು ಕೋಣೆಯಲ್ಲಿ ಮಳೆ ಬಂದರೆ ಸೋರುತ್ತಿವೆ. ಇನ್ನು ಕೆಲವು ಕೋಣೆಗಳಲ್ಲಿ ಮೇಲ್ಛಾವಣಿ ಕಿತ್ತು ಹೋಗಿವೆ. ಹಲವಾರು ಬಾರಿ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಶಿಕ್ಷಣ ಇಲಾಖೆ, ಜನಪ್ರತಿನಿ ಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.