ಕ್ರೀಡಾಂಗಣ ಸಮಸ್ಯೆಗಳ ತಾಣ
ಇನ್ನೂ ಪೂರ್ಣಗೊಳ್ಳದ ಪೆವಿಲಿಯನ್-ಟ್ರ್ಯಾಕ್ ಕಾಮಗಾರಿ
Team Udayavani, Jul 5, 2019, 11:20 AM IST
ಹೂವಿನಹಡಗಲಿ: ಕ್ರೀಡಾಂಗಣದಲ್ಲಿ ಕೈಗೊಂಡಿರುವ ಅರೆಬರೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಕಲ್ಲು-ಮಣ್ಣುಗಳ ರಾಶಿ ಬಿದ್ದಿರುವುದು.
ಹೂವಿನಹಡಗಲಿ: ಜಿಪಿಜಿ ಸರ್ಕಾರಿ ಪಪೂ ಕಾಲೇಜ್ ಹಿಂದುಗಡೆಯಿರುವ ತಾಲೂಕು ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ.
ಪಟ್ಟಣ ಜನತೆಯ ಕ್ರೀಡಾ ಚಟುವಟಿಕೆ ಹಾಗೂ ವಾಯುವಿಹಾರಕ್ಕೆ ಇರೋದು ಇದೊಂದೆ ಕ್ರೀಡಾಂಗಣ. ಈ ಕ್ರೀಡಾಂಗಣಕ್ಕೆ ಈಗ ಗ್ರಹಣ ಬಡಿದಂತಾಗಿದೆ. ಕ್ರೀಡಾಂಗಣದ ಸುತ್ತಲೂ ಕಲ್ಲು ಮುಳ್ಳುಗಳು ಬಿದ್ದಿದ್ದು ಅರೆಬರೆ ಕಾಮಗಾರಿಯ ಅವಶೇಷಗಳು ಅಲ್ಲೆ ಇವೆ. ಸ್ವಚ್ಛತೆ ಇಲ್ಲದಿರುವುದು ಸಾರ್ವಜನಿಕರಿಗೆ ಇರುವ ಒಂದು ಕ್ರೀಡಾಂಗಣವೂ ಸಹ ನಿರುಪಯುಕ್ತವಾಗುವ ಹಂತ ತಲುಪಿದಂತಾಗಿದೆ.
ರಾತ್ರಿಯಾಗುತ್ತಲೇ ದ್ವಿಚಕ್ರ ವಾಹನ ಸವಾರರು ಕ್ರೀಡಾಂಗಣದ ಒಳಗಡೆಯೇ ಬೈಕ್ ತೆಗೆದುಕೊಂಡು ಹೋಗಿ ನಿಲ್ಲಿಸುವುದರಿಂದ ಕ್ರೀಡಾಂಗಣದ ಟ್ರ್ಯಾಕ್‌ಗಳೆಲ್ಲ ಹಾಳಾಗುತ್ತಿದೆ. ಸಾಲದೆಂಬಂತೆ ಮೈದಾನದ ತುಂಬೆಲ್ಲ ಗಿಡ ಗಂಟೆಗಳು ಬೆಳೆಯುತ್ತಿವೆ. ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಇತ್ತ ಗಮನಹರಿಸಬೇಕಿದೆ.
ಆಗಸ್ಟ್ ತಿಂಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟಗಳು ಪ್ರಾರಂಭ ವಾಗುತ್ತಿದ್ದು ಮಕ್ಕಳಿಗೂ ಸಹ ತೊಂದರೆಯಾಗಬಹುದು. ಸುಮಾರು 1 ಕೋಟಿ ರೂಗಳ ಆನುದಾನದಲ್ಲಿ ಕೈಗೊಂಡ ತಾಲೂಕು ಕ್ರೀಡಾಂಗಣದಲ್ಲಿ ಫೆವಿಲಿಯನ್ ಹಾಗೂ ಟ್ಯ್ರಾಕ್ ಕಾಮಗಾರಿ ಜೂನ್ 30ರೊಳಗೆ ಪೂರ್ಣಗೊಳ್ಳಬೇಕಾಗಿದ್ದು ಇನ್ನೂ ಅರೆಬರೆಯಾಗಿದೆ.
ಸಾಧ್ಯವಾದಷ್ಟು ಬೇಗ ತಾಲೂಕು ಕ್ರೀಡಾಂಗಣವನ್ನು ಸುಸ್ಥಿಗೆ ತರಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕ್ರೀಡಾ ಪ್ರೇಮಿಗಳ ಅಗ್ರಹಿಸಿದ್ದಾರೆ.
ಕಾಮಗಾರಿ ಸ್ವಲ್ಪ ತಡವಾಗಿದೆ. ಜುಲೈ 30ರೊಳಗೆ ಎಲ್ಲಾ ಕಾಮಗಾರಿ ಮುಗಿಸಿಕೊಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾತ್ರಿ ಸಮಯದಲ್ಲಿ ಕಾವಲು ಕಾಯಲು ಹೋಂಗಾರ್ಡ್‌ಗಳ ನೇಮಕಕ್ಕೆ ಟೆಂಡರ್ ಕರೆಯಲಾಗುವುದು. ಸರದಿ ಪ್ರಕಾರವಾಗಿ ಒಟ್ಟು 3 ಜನ ಹೋಂಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
•ಸುರೇಶ್ ಬಾಬು
ಸಹಾಯಕ ನಿರ್ದೇಶಕರು, ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.