ಬಸ್ ತಂಗುದಾಣ ದುಸ್ಥಿತಿ ನೋಡಿ!
ಕುದರಿ ಸಾಲವಾಡಗಿ-ಹುಣಶ್ಯಾಳ ಪಿ.ಬಿ. ಗ್ರಾಮಸ್ಥರ ಗೋಳು ಕೇಳ್ಳೋರ್ಯಾರು ಇಲ್ಲವೇ ಸ್ವಾಮಿ
Team Udayavani, Apr 28, 2019, 10:30 AM IST
ಹೂವಿನಹಿಪ್ಪರಗಿ: ಕುದರಿ ಸಾಲವಾಡಗಿಯ ಗ್ರಾಮದ ಬಸ್ ತಂಗುದಾಣದಲ್ಲಿ ಹಂದಿ, ನಾಯಿಗಳು ವಾಸವಾಗಿದ್ದರಿಂದ ಸಾರ್ವಜನಿಕರು ಕಲ್ಲು ತುಂಬಿದ್ದಾರೆ.
ಹೂವಿನಹಿಪ್ಪರಗಿ: ಗ್ರಾಮೀಣ ಪ್ರದೇಶದ ಜನರ ಅನಕೂಲಕ್ಕಾಗಿ ಸರಕಾರ ಲಕ್ಷ, ಲಕ್ಷ ಹಣ ವ್ಯಯ ಮಾಡಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಹಳ್ಳಿಯ ಮಹಿಳೆಯರು ಮತ್ತು ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಪ್ರತಿ ಗ್ರಾಮದಲ್ಲಿ ಸರಕಾರ ಬಸ್ ನಿಲ್ದಾಣ, ತಂಗುದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ ಇಲ್ಲಿ ಅದು ಎಲ್ಲ ಲೆಕ್ಕಕ್ಕಿಲ್ಲ, ಹಳ್ಳಿಗಳ ಬಸ್ ತಂಗುದಾಣಗಳು ಕಸದ ತಿಪ್ಪೆಯಾಗಿ, ಹಂದಿಗಳು ವಾಸಿಸುವ ಮನೆಯಾಗಿ ಪರಿವರ್ತಿತವಾಗಿವೆ. ಅಲ್ಲಿ ಹೊದರೆ ಸಾಕು ಗಬ್ಬೆಂದು ದುರ್ವಾಸನೆ ಬಡಿಯುತ್ತದೆ. ಅಲ್ಲಿ ನಡೆಯಬಾರದ ಕೆಲಸಗಳು ನಡೆಯುತ್ತವೆ. ಅವುಗಳನ್ನು ಕೇಳುವ ಅಧಿಕಾರ ಯಾರ ಹೆಗಲಿಗಿದೆ ಎಂಬುವುದೆ ಹಲವರ ಪ್ರಶ್ನೆಯಾಗಿದೆ.
ಹೌದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಹಾಗೂ ಹುಣಿಶ್ಯಾಳ ಪಿ.ಬಿ ಗ್ರಾಮದ ಬಸ್ ತಂಗುದಾಣಗಳನ್ನು ನೋಡಿದರೆ ಸಂಪೂರ್ಣ ಚಿತ್ರಣ ತಿಳಿಯುತ್ತದೆ. ಮಹಿಳೆಯರು ಹಾಗೂ ಶಾಲಾ ಮಕ್ಕಳು ಬಸ್ ಬರುವ ತನಕ ತಂಗುದಾಣಗಳಲ್ಲಿ ವಿಶ್ರಾಂತಿ ಪಡೆಯುವ ವಾತಾವರಣವಿಲ್ಲ. ತಂಗುದಾಣಗಳಲ್ಲಿ ಕಲ್ಲು, ಮುಳ್ಳಿನ ಕಂಟಿ ಕಾಣ ಸಿಗುತ್ತವೆ. ಹೀಗಾಗಿ ಬಹುತೇಕ ಮಕ್ಕಳು ಹಾಗೂ ಮಹಿಳೆಯರು ಅಕ್ಕ ಪಕ್ಕ ಇರುವ ಹೊಟೇಲ್ಗಳಲ್ಲಿ ನಿಂತು ತಮ್ಮ ಮುಂದಿನ ದಾರಿ ತುಳಿಯುತ್ತಾರೆ.
ಮುಂದಿನ ಭಾಗವಾಗಿ ವಿಚಾರಿಸಿದರೆ ಇಂದಿನ ಬಿರು ಬಿಸಿಲು ಮತ್ತು ಮಳೆಗಾಲದಲ್ಲಿ ಇವರ ಗೋಳ ಕೇಳುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಇನ್ನೂ ಬಸ್ ತಂಗುದಾಣಗಳು ಗ್ರಾಪಂನವರ ಹದ್ದಿನಲ್ಲಿ ಬರುವುದರಿಂದ ಅವರೇ ಅದರ ಕಾಳಜಿ ವಹಿಸಬೇಕು ಎಂದು ಸರಕಾರದ ಆದೇಶವಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರ ಬಗ್ಗೆ ಗ್ರಾಮಸ್ಥರು ಹಲವಾರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಇನ್ನಾದರೂ ಮಹಿಳೆಯರ ಹಾಗೂ ಶಾಲೆ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಇಲ್ಲಿ ಮಕ್ಕಳು ಹಾಗೂ ಮಹಿಳೆಯರು ತಂಗುದಾಣದಲ್ಲಿ ಕುರಲು ಸುಜಜ್ಜಿತ ವಾತವಾರಣ ಇಲ್ಲ, ಇದು ಹಂದಿ ನಾಯಿಗಳ ತಾಣವಾಗಿದೆ. ಇಲ್ಲಿ ಯಾವ ಪ್ರಯಾಣಿಕರು ಬಂದು ಕೂರಲ್ಲ. ಗ್ರಾಪಂ ಸಿಬ್ಬಂದಿಗೆ ನಾವು ಹಲವು ಬಾರಿ ಹೇಳಿದರು ಇತ್ತ ಕಡೆ ಯಾರು ತಲೆ ಹಾಕುತ್ತಿಲ್ಲ.
•ಪ್ರಕಾಶ ಪಾಟೀಲ, ಕುದರಿ ಸಾಲವಾಡಗಿ ಗ್ರಾಮಸ್ಥ
ಬಸ್ ತಂಗುದಾಣದಲ್ಲಿ ಮುಳ್ಳಿನ ಕಂಟಿಗಳು ಬೆಳದಿವೆ. ಮಳೆ ಬಂದರೆ ಪ್ರಯಾಣಿಕರು ಎಲ್ಲಿ ನಿಂತು ಕೊಳ್ಳಬೇಕು. ಬಸ್ ಬರುವವರೆಗೂ ಹೊಟೇಲ್ ಹಾಗೂ ಗಿಡ ಮರಗಳನ್ನೆ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
•ಸಂಗಮೇಶ್ವರ ಬಿರಾದಾರ,
ಹುಣಿಶ್ಯಾಳ ಪಿಬಿ ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.