ಸಹಕಾರಿ ಸಂಘಗಳಿಂದ ನೆರವು
ಸಣ್ಣ -ಅತಿ ಸಣ್ಣ ರೈತರ ಪಾಲಿಗೆ ಸಿದ್ದಸಿರಿ ಬ್ಯಾಂಕ್ ಆಶಾಕಿರಣ
Team Udayavani, Jan 10, 2020, 2:45 PM IST
ಇಂಡಿ: ಸಹಕಾರ ಸಂಘಗಳಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಜನರು ಸಾಲ ಪಡೆದುಕೊಳ್ಳಬೇಕಾದರೆ ಕನಿಷ್ಠ 2-3 ತಿಂಗಳು ಬೇಕಾಗುತ್ತದೆ. ಆದರೆ ಸಹಕಾರ ಸಂಘಗಳು ಗ್ರಾಹಕರಿಗೆ ಅವಶ್ಯವಿದ್ದ ಸಂದರ್ಭದಲ್ಲಿಯೇ ಸಾಲ ನೀಡಿ ಅವರ ನೆರವಿಗೆ ಬರುತ್ತವೆ ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕಿನ ನವೀಕರಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದಸಿರಿ ಸೌರ್ಹಾದ ಬ್ಯಾಂಕುಗಳು ಇಂದು ರಾಜ್ಯ ವ್ಯಾಪಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಸೌಹಾರ್ದ ಪತ್ತಿನ ಬ್ಯಾಂಕುಗಳು ನಡೆಯಬೇಕಾದರೆ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರಾದಿಯಾಗಿ ವಿಶಾಲ ಮನಸುಗಳು ಇದ್ದಾಗ ಮಾತ್ರ ಸಾಧ್ಯ. ಸಿದ್ದಸಿರಿ ಸೌಹಾರ್ದ ರಾಜ್ಯದ ರೈತರ ಹಿತ ಕಾಪಾಡುವುದರೊಂದಿಗೆ ಸಣ್ಣ, ಅತಿ ಸಣ್ಣ ರೈತರಿಗೆ ಸಹಾಯ ಮಾಡುವ ಮೂಲಕ ಆರ್ಥಿಕ ಸಬಲರನ್ನಾಗಿ ಮಾಡಿದೆ.
ಸಾರ್ವಜನಿಕರು, ರೈತರು, ಸಣ್ಣ ವ್ಯಾಪಾರಸ್ಥರು, ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದರೆ ಏನೆಲ್ಲ ದಾಖಲೆಗಳನ್ನು ಪಡೆದರೂ ಸಹಿತ ಸಕಾಲಕ್ಕೆ ಸಹಾಯಕ್ಕೆ ಬರುವುದಿಲ್ಲ . ಸಿದ್ದಸಿರಿ ಸೌಹಾರ್ದ ಬ್ಯಾಂಕುಗಳು ರಾಜ್ಯದಲ್ಲಿರುವ ಬೀದಿ ವ್ಯಾಪಾರಸ್ಥರಿಂದ ಹಿಡಿದು ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳಂತ ದುಡಿಯುವ ವರ್ಗಕ್ಕೂ,ಮಹಿಳಾ ಸ್ವಸಹಾಯ ಸಂಘಗಳಿಗೂ ಸಹಾಯ ಹಸ್ತ ನೀಡಿ ಸಬಲರನ್ನಾಗಿ ಮಾಡಿದೆ ಎಂದರು.
ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಶಾಸಕ, ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಸಿದ್ದಸಿರಿ ಸೌಹಾರ್ದ ಪತ್ತಿನ ನಿರ್ದೇಶಕ ಜಗದೀಶ ಕ್ಷತ್ರಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ ಯಾವ ರೀತಿಯಲ್ಲಿ ಮುನ್ನುಗ್ಗುತ್ತಿದೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಸಾನ್ನಿಧ್ಯವನ್ನು ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ರಾಜುಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ತಾಪಂ ಸದಸ್ಯ ಜೀತಪ್ಪ ಕಲ್ಯಾಣಿ, ಭೀಮರಾಯಗೌಡ ಪಾಟೀಲ, ಅಶೋಕ ಕರೂರ, ಗ್ರಾಪಂ ಮಾಜಿ ಅಧ್ಯಕ್ಷ ಅದಂ ಅಗರಖೇಡ, ಶಿವಯೋಗೆಪ್ಪ ಜೋತಗೊಂಡ, ರಮೇಶ ಅಡಗಲ್ಲ, ಸಿದ್ದು ಅರಳಗುಂಡಗಿ, ಶರಣಯ್ನಾ ಸ್ವಾಮಿ, ಪುಂಡಲೀಕ ಕರೂರ, ಶಿವಾನಂದ ನಂದಾಗೋಳ, ಚಂದು ಆಳೂರ,
ನಿರ್ದೇಶಕರಾದ ಡಾ| ರಮೇಶ ಬಿರಾದಾರ, ಬ್ಯಾಂಕಿನ ಹಿರಿಯ ಅ ಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.