ಫೋನ್ ಮಾಡಿದ್ರೆ ರೈತನ ಮನೆ ಬಾಗಿಲಿಗೇ ಮೇವು!
ಪ್ರತಿ ರೈತನಿಗೆ ಒಂದು ವಾರಕ್ಕಾಗುವಷ್ಟು ಮೇವು ವಿತರಣೆ
Team Udayavani, Aug 11, 2019, 10:12 AM IST
ಜಗಳೂರು: ಬಿದರಕೆರೆ ಗ್ರಾಮದಲ್ಲಿ ರೈತರ ಮನೆ ಬಾಗಿಲಲ್ಲಿ ತೂಕ ಮಾಡಿ ಮೇವು ನೀಡಲಾಯಿತು.
ರವಿಕುಮಾರ ಜೆಓ ತಾಳಿಕೆರೆ
ಜಗಳೂರು: ರೈತರ ಮನೆ ಬಾಗಿಲಿಗೆ ಮೇವು ನೀಡುವಂತಹ ವಿನೂತನ ಕಾರ್ಯಕ್ರಮವನ್ನು ಕಂದಾಯ ಇಲಾಖೆಯಿಂದ ಮಾಡಲಾಗುತ್ತಿದೆ.
ಈ ಹಿಂದೆ ರೈತರ ಮನೆ ಬಾಗಿಲಿಗೆ ಹಕ್ಕುಪತ್ರ, ಸಾಗುವಳಿ ಪತ್ರ , ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸುವಂತ ವ್ಯವಸ್ಥೆಯನ್ನು ಕಂದಾಯ ಇಲಾಖೆಯಿಂದ ಮಾಡಲಾಗಿತ್ತು. ಆದರೆ ಈ ಬಾರಿ ಒಂದು ಕೈ ಮೇಲೆ ಹೋಗಿ ರೈತರ ಮನೆ ಬಾಗಿಲಿಗೇ ಮೇವು ಸರಬರಾಜು ಮಾಡುವಂತಹ ಕೆಲಸಕ್ಕೆ ಇಲಾಖೇ ಮುಂದಾಗಿದ್ದು, ಇದಕ್ಕೆ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಬರಗಾಲದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕಿನ ಗುರುಸಿದ್ದಪುರ, ಕೊಣಚಗಲ್ ಗುಡ್ಡ, ಹಿರೇ ಮಲ್ಲನಹೊಳೆ ಗ್ರಾಮದ ಸಮೀಪ ಗೋಶಾಲೆಗಳನ್ನು ತೆರೆಯಲಾಗಿದ್ದು, ಇಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ರಾಸುಗಳಿವೆ.
14 ಸಂಚಾರಿ ಮೇವು ಘಟಕ: ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸಂಚಾರಿ ಮೇವು ಘಟಕವನ್ನು ಪ್ರಾರಂಭಿಸಲಾಗಿದ್ದು, ರೈತರ ಅವಶ್ಯಕತೆಗನುಗುಣವಾಗಿ ಮೇವು ನೀಡಲಾಗುತ್ತಿದೆ.
2 ರೂ.ಗೆ ಕೆಜಿ ಒಣ ಮೇವು: ಮೇವು ಬೇಕಾಗಿರುವ ರೈತರು ತಮ್ಮ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗೆ ಜಾನುವಾರಗಳ ಪಟ್ಟಿ ನೀಡಬೇಕು. ಒಂದು ಹಸುವಿಗೆ 15 ಕೆಜಿವರೆಗೂ ಮೇವು ನೀಡಲಾಗುತ್ತಿದ್ದು, ಒಂದು ವಾರಕ್ಕೆ ಆಗುವಷ್ಟು ಮೇವನ್ನು ಒಂದೇ ಬಾರಿಗೆ ನೀಡಲಾಗುತ್ತಿದೆ.
ಸಹಾಯವಾಣಿ: ಮೇವು ಬೇಕಾದ ರೈತರು 08196-227338 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ರೈತರ ಮನೆ ಬಾಗಿಲಿಗೆ ಮೇವು ತಲುಪಿಸುವಂತಹ ವ್ಯವಸ್ಥೆ ಇದೆ.
ತಾಲೂಕಿನ ಬಿದರಕೆರೆ, ತೋರಣಗಟ್ಟೆ, ನಿಬಗುರು, ಕಲ್ಲೇದೇವರಪು, ಹೊಸಕೆರೆ ಸೇರಿದಂತೆ 14 ಕಡೆ ಸಂಚಾರಿ ಮೇವು ಘಟಕಗಳನ್ನು ತೆರೆಯಲಾಗಿದೆ.
ರೈತರಿಂದ ಮುಂಗಡ ಬುಕ್ಕಿಂಗ್: ತಾಲೂಕಿನದ್ಯಾಂತ ಈಗಾಗಲೇ 5 ಲೋಡ್ ಮೇವನ್ನು ವಿತರಣೆ ಮಾಡಲಾಗಿದ್ದು, ರೈತರಿಂದ 3 ಲೋಡ್‌ಗೂ ಅಧಿಕ ಮೇವಿಗಾಗಿ ಮುಂಗಡ ಬುಕ್ಕಿಂಗ್ ಆಗಿದೆ. ಮೇವು ಸಾಗಣೆ ಮಾಡುವವರೇ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಮೇವು ವಿತರಣೆ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.