ಬೆಳಘಟ್ಟ ಮಾರ್ಗವಾಗಿಯೇ ನೀರು ಬರಲಿ
Team Udayavani, May 31, 2019, 4:15 PM IST
ಜಗಳೂರು: ಕಲ್ಲೇದೇವರಪುರ ಗ್ರಾಮದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಸಹಯೋಗದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು.
ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಶಾಖಾ ಕಾಲುವೆ ಮಾರ್ಗ ಮತ್ತು ನೀರು ಹಂಚಿಕೆಯ ಬಗ್ಗೆ ದೇಸಾಯಿ ನೇತೃತ್ವದಲ್ಲಿ ನೇಮಕವಾಗಿರುವ ಸಮಿತಿ ರದ್ದಾಗಿಲ್ಲ. ಹದಿನೈದು ದಿನಗಳೊಳಗೆ ಸಮಿತಿ ಸಭೆಯನ್ನು ಕರೆಯಬೇಕು ಎಂದು ಮುಖ್ಯ ಇಂಜಿನಿಯರ್‌ಗೆ ಜಿಲ್ಲಾಧಿಕಾರಿ ಶಿವಮೂರ್ತಿ ಸೂಚನೆ ನೀಡಿದರು.
ಗುರುವಾರ ತಾಲೂಕಿನ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ವತಿಯಿಂದ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮತ್ತು ಈ ಭಾಗದ ನೀರು ಹಂಚಿಕೆಗೆ ಸಂಬಂಧಿಸಿದಂತೆ ದೇಸಾಯಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆ ಸಮಿತಿ ರದ್ದಾಗಿಲ್ಲ. ಹೋರಾಟಗಾರರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದರು.
ಈ ವೇಳೆ ಹೋರಾಟ ಸಮಿತಿ ಕಾರ್ಯದರ್ಶಿ ಓಬಳೇಶ್ ಮಾತನಾಡಿ, ಈ ಯೋಜನೆಗಾಗಿ ಕಳೆದ 11 ವರ್ಷಗಳಿಂದ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮ ಪಾಲಿನ 2.4 ಟಿಎಮ್ ಸಿ ನೀರು ನಮಗೆ ದೊರೆಯಬೇಕು. ಮತ್ತು ಬೆಳಘಟ್ಟ ಮಾರ್ಗದಿಂದ ಸಂಗೇನಹಳ್ಳಿಯ ಕೆರೆಯಲ್ಲಿ ಸಂಗ್ರಹಿಸಿ ನಂತರ ತಾಲೂಕಿನ ವಿವಿಧ ಗ್ರಾಮಗಳಿಗೆ ಸರಬರಾಜು ಮಾಡಬೇಕು. ಕಾತ್ರಳ್ ಕ್ರಾಸ್ ಮೂಲಕ ಬಂದರೆ 72 ಕಿ.ಮಿ ದೂರವಾಗಲಿದ್ದು, ಈ ಭಾಗದಿಂದ ನಮಗೆ ನೀರು ಬರುವುದು ಬೇಡ ಎಂದು ಸಭೆಯ ಗಮನಕ್ಕೆ ತಂದರು. ಇವರ ಪ್ರಶ್ನೆಗಳಿಗೆ ಉತ್ತರಿಸಿದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಮುಖ್ಯ ಇಂಜಿನಿಯರ್ ಶಿವಕುಮಾರ್, ಬೆಳಘಟ್ಟ ಮಾರ್ಗದಿಂದ ಕಾಲುವೆ ನಿರ್ಮಾಣ ಮಾಡಲು 6 ಕಿ.ಮಿ. ದೂರದವರೆಗೆ ಭೂಮಿ 40 ಅಡಿ ಎತ್ತರವಾಗಲಿದೆ. ನೀರು ಹರಿಯಲು ಸಮಸ್ಯೆಯಾಗಲಿದೆ ಎಂಬ ಮಾಹಿತಿ ಇದೆ. ಆದ್ದರಿಂದ ಬೆಳಘಟ್ಟ ಅಥವಾ ಚಿತ್ರದುರ್ಗದ ಕಾತ್ರಾಳ್ ಕ್ರಾಸ್ ಮಾರ್ಗ ನಿರ್ಧರಿಸಲು ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯ ವರದಿಯನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ವಾರದಲ್ಲಿ ಬೆಂಗಳೂರಿಗೆ ತೆರಳಿ ಸಮಿತಿ ಸಭೆಯ ದಿನಾಂಕವನ್ನು ಗೊತ್ತುಪಡಿಸಿಕೊಂಡು ಬರಲಾಗುವುದು. 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಅಧಿಕಾರಿಗಳ ಸಭೆಯಿಂದ ಯಾವುದೇ ಸಮಸ್ಯೆ ಬಗೆ ಹರಿಯುವುದಿಲ್ಲ. ನೀರಾವರಿ ನಿಗಮದ ಹಂತದಲ್ಲಿ ನೀರಾವರಿ ಸಚಿವರನ್ನೊಳಗೊಂಡ ಸಭೆಯಲ್ಲಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಂಗೇನಹಳ್ಳಿ ಕೆರೆಯ ಮೂಲಕವೇ ಜಗಳೂರಿಗೆ ನೀರು ಹರಿಯಬೇಕು. ಜೂ. 3 ರಂದು ನಡೆಯಲಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು ಸರಕಾರದ ಗಮನವನ್ನು ಸೆಳೆಯಬೇಕಾಗಿದೆ. ತಾಲೂಕಿಗೆ ಭದ್ರೆ ನೀರು ಹರಿಯುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು
ಸಮಸ್ಯೆ ಬಗ್ಗೆ ನಿಮಗೆ ಮನವರಿಕೆಯಾಗಿದ್ದು ಜೂ.3 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದಾಗ, ಜನರು ಪ್ರತಿಭಟನೆ ಮಾಡಿ ಸರಕಾರದ ಗಮನ ಸಳೆಯುವಂತ ಕೆಲಸ ಮಾಡುತ್ತೇವೆ ಎಂದು ಒಕ್ಕೊರಲಿನಿಂದ ಉತ್ತರಿಸಿದರು. ಆಗ ಜಿಲ್ಲಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ತಾಪಂ ಇಒ ಜಾನಕಿರಾಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್, ಡಿವೈಎಸ್‌ಪಿ ನಾಗರಾಜ್ ಐತಾಳ್, ಸಿಪಿಐ ಪ್ರವೀಣ್ ನೀಲಮ್ಮನವರ್, ಪಿಎಸ್‌ಐ ಇಮ್ರಾನ್‌ಬೇಗ್, ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯ ಮುಖಂಡರಾದ ನಾಗಲಿಂಗಪ್ಪ, ಲಿಂಗರಾಜ್, ವೀರಸ್ವಾಮಿ, ಮಹಾಲಿಂಗಪ್ಪ, ಪ್ರಕಾಶರೆಡ್ಡಿ, ತಿಮ್ಮಾರೆಡ್ಡಿ, ಎಸ್.ಕೆ.ರಾಮರೆಡ್ಡಿ, ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಚಿರಂಜೀವಿ, ಗ್ರಾಪಂ ಮಾಜಿ ಅಧ್ಯಕ್ಷ ಬಡಯ್ಯ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.