ನೀರಿನ ಮರು ಬಳಕೆ ಇಂದಿನ ಅಗತ್ಯ
ಸಕಲ ಜೀವಿಗಳಿಗೆ ನೀರು ಅತ್ಯವಶ್ಯಕ•ನೀರು ಸಮರ್ಪಕ ಬಳಕೆ ಅರಿವು ಹೊಂದಿ
Team Udayavani, Jul 20, 2019, 10:17 AM IST
ಜಗಳೂರು: ಬಿಳಿಚೋಡು ಗ್ರಾಪಂ ಸಭಾಂಗಣದಲ್ಲಿ ನಡೆದ ಮಣ್ಣು ಸಂರಕ್ಷಣೆ ಮತ್ತು ಜಲಶಕ್ತಿ ಕುರಿತ ಸಭೆಯಲ್ಲಿ ಕೇಂದ್ರ ತಂಡದ ಮುಖ್ಯಸ್ಥ ಡಾ| ವಿಶಾಲ್ ಪ್ರತಾಪ್‌ಸಿಂಗ್ ಮಾತನಾಡಿದರು.
ಜಗಳೂರು: ಗ್ರಾಮಗಳಲ್ಲಿ ಬಳಕೆ ಮಾಡಿದ ನೀರನ್ನು ವ್ಯರ್ಥಗೊಳಿಸದೆ ಒಂದೆಡೆ ಶೇಖರಿಸಿ ಬಳಕೆ ಮಾಡಬಹುದು ಎಂದು ಮಣ್ಣು ಸಂರಕ್ಷಣೆ ಹಾಗೂ ಜಲಶಕ್ತಿ ಪರಿಶೀಲನಾ ಕೇಂದ್ರ ತಂಡದ ಮುಖ್ಯಸ್ಥ ಡಾ| ವಿಶಾಲ್ ಪ್ರತಾಪ್‌ಸಿಂಗ್ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಣ್ಣು ಸಂರಕ್ಷಣೆ ಮತ್ತು ಮತ್ತು ಜಲಶಕ್ತಿ ಯೋಜನೆಯಡಿ ಮಾಡಿರುವ ಕಾಮಗಾರಿಗಳನ್ನು ಪರಿಶೀಲಿಸಿ, ನಂತರ ಬಿಳಿಚೋಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಣ್ಣು ಸಂರಕ್ಷಣೆ ಮತ್ತು ಜಲಶಕ್ತಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಸ್ಥರು ಬಳಕೆ ಮಾಡಿದ ಚರಂಡಿ ನೀರನ್ನು ಎಲ್ಲಿಗೆ ಬಿಡುತ್ತೀರಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್ ಕುಮಾರ್‌ರನ್ನು ಪ್ರಶ್ನಿಸಿದಾಗ, ಬಳಕೆ ಮಾಡಿದ ನೀರನ್ನು ಊರ ಹೊರಗಿನ ಹಳ್ಳಕ್ಕೆ ಬಿಡುತ್ತೇವೆ ಎಂದರು.
ಪ್ರತಿನಿತ್ಯ ಪ್ರತಿಯೊಬ್ಬರು ಸ್ನಾನ, ಬಟ್ಟೆ ಮತ್ತು ಪಾತ್ರೆ ತೊಳೆಯುವುದು ಸೇರಿದಂತೆ ಇತರೆ ಬಳಕೆಗೆ ಸಾವಿರಾರು ಲೀಟರ್ ನೀರು ಚರಂಡಿ ಮೂಲಕ ಹಳ್ಳ ಸೇರಿ ವ್ಯರ್ಥವಾಗುತ್ತದೆ.
ಗ್ರಾಮದ ಹೊರಭಾಗದಲ್ಲಿ ದೊಡ್ಡ ಗುಂಡಿಯನ್ನು ತೆಗೆದು, ಅದರಲ್ಲಿ ಗ್ರಾಮಸ್ಥರು ಬಳಕೆ ಮಾಡಿದ ಚರಂಡಿ ನೀರು ಶೇಖರಿಸಿದರೆ ಕೆಲವು ದಿನಗಳ ನಂತರ ಈ ಕೊಳಚೆ ನೀರಿನಲ್ಲಿರುವ ಗಟ್ಟಿ ಪದಾರ್ಥಗಳು ತಳದಲ್ಲಿ ಶೇಖರಣೆಯಾಗುತ್ತವೆ. ಮೇಲೆ ತಿಳಿ ನೀರು ನಿಲ್ಲುತ್ತದೆ. ಆ ನೀರನ್ನು ನೀವು ಶುದ್ಧೀಕರಿಸಿ ಬಳಕೆ ಮಾಡಿಕೊಳ್ಳಬಹುದು. ತಳದಲ್ಲಿ ಶೇಖರಣೆಯಾದ ಗಟ್ಟಿ ಪದಾರ್ಥಗಳು ಕೊಳೆತು ಗುಣಮಟ್ಟದ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಅದನ್ನೂ ಬಳಸಬಹುದು. ಈ ರೀತಿ ಮಾಡುವುದರಿಂದ ಅಂರ್ತಜಲ ಮಟ್ಟ ಹೆಚ್ಚಾಳವಾಗುತ್ತದೆ. ಈ ಪದ್ಧತಿಯನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆಯಿಂದ ಹೊಸಕೆರೆ ಸಮೀಪ ಇಳಿಜಾರು ಪ್ರದೇಶದಲ್ಲಿ ಬಂಡ್ ಹಾಗೂ ಬದು ನಿರ್ಮಾಣ ಮಾಡಿದ್ದು ಅಂರ್ತಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಿ ಕೆರೆಯಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕಾಗಿದೆ.
ಸಕಲ ಜೀವಿಗಳಿಗೆ ನೀರು ಅತೀ ಅವಶ್ಯಕವಾಗಿ ಬೇಕು. ನೀರಿನ ಸಮರ್ಪಕ ಬಳಕೆ ಕುರಿತು ನಾವೆಲ್ಲ ಅರಿವು ಹೊಂದಬೇಕಾಗಿದೆ. ಜಲಸಿರಿ ಯೋಜನೆಯ ಉದ್ದೇಶ ಅಂರ್ತಜಲ ಮಟ್ಟ ಹೆಚ್ಚಿಸುವುದು. ಇದಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.
ಸಭೆಗೂ ಮುನ್ನ ಅಧಿಕಾರಿಗಳ ತಂಡ ತಾಲೂಕಿನ ಹೊಸಕೆರೆ, ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇ ಅರಿಕೆರೆ ಕೆರೆ, ಕಲ್ಲೇನಹಳ್ಳಿಯ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ| ದೇವಿತಾ ರಾಜು, ಪ್ರಭಾರಿ ಈಒ ವೀರಭದ್ರಸ್ವಾಮಿ , ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಪ್ರಭಾಕರ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Udayavani follow-up; ಶುಲ್ಕ ಪಡೆದೂ ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ
Research; ತುರಿಸದ ಸುವರ್ಣ ಗಡ್ಡೆ, ಕೆಸು: ಎನ್‌ಐಟಿಕೆಗೆ ಪೇಟೆಂಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.