![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 21, 2019, 7:22 PM IST
ಜಾಲಹಳ್ಳಿ: ಮಳೆಗೆ ಜಲಾವೃತಗೊಂಡ ಜಾಲಹಳ್ಳಿ ವಿದ್ಯುತ್ ಪ್ರಸರಣ ಉಪ ಕೇಂದ್ರ
ಚಂದ್ರಶೇಖರ ನಾಡಗೌಡ
ಜಾಲಹಳ್ಳಿ: ಪಟ್ಟಣದ 33 ಕೆವಿ ವಿದ್ಯುತ್ ಪ್ರಸರಣ ಉಪ ಕೇಂದ್ರ ಅಲ್ಪ ಮಳೆ ಸುರಿದರೂ ಜಲಾವೃತ್ತವಾಗುವುದರಿಂದ ಕೇಂದ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಕೈಕೊಟ್ಟು ಜನತೆ ನಾನಾ ಸಮಸ್ಯೆ ಎದುರಿಸುವಂತಾಗಿದೆ.
ಜಾಲಹಳ್ಳಿ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜೆ.ಜೆ. ಶಿಕ್ಷಣ ಸಂಸ್ಥೆ ಪಕ್ಕದ 33 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರ ತಗ್ಗು ಪ್ರದೇಶದಲ್ಲಿದೆ. ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ಕೇಂದ್ರದ ಆವರಣದಲ್ಲಿ ನೀರು ನಿಲ್ಲುತ್ತದೆ. ನಿಂತ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಮಳೆ ಬಂದು ಮೂರ್‍ನಾಲ್ಕು ದಿನವಾದರೂ ತಗ್ಗಿನಲ್ಲಿ ನೀರು ನಿಂತಿರುತ್ತದೆ. ಹೀಗಾಗಿ ಪ್ರಸರಣ ಕೇಂದ್ರದ ಸಿಬ್ಬಂದಿ ಜೀವ ಭಯದಲ್ಲೇ ಕಾರ್ಯ ನಿರ್ವಹಿಸಬೇಕಿದೆ.
ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಜಾಲಹಳ್ಳಿ ವಿದ್ಯುತ್ ಪ್ರಸರಣ ಕೇಂದ್ರ ಜಲಾವೃತವಾಗಿದೆ. ಪರಿಣಾಮ ಗ್ರಾಮಸ್ಥರು ವಿದ್ಯುತ್ ಇಲ್ಲದೇ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು. ಕತ್ತಲೆಯಲ್ಲಿ ಗ್ರಾಮ: ಈ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ
ಹೆಚ್ಚು ಗ್ರಾಮಗಳು ಬರುತ್ತಿದ್ದು, ಮಳೆ ಬಂದು ಪ್ರಸರಣ ಕೇಂದ್ರದಲ್ಲಿ ನೀರು ನಿಂತರೆ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯಬೇಕಾಗುತ್ತದೆ. ಪ್ರಸರಣ ಕೇಂದ್ರದ ಪಕ್ಕದಲ್ಲಿ ಹಳ್ಳವಿದ್ದು, ಈ ಹಳ್ಳಕ್ಕೆ ಎಚ್.ಸಿದ್ದಾಪುರು ಸೇರಿ ಹಲವು ಸೀಮೆಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ಈ ಹಳ್ಳದ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ಹಳ್ಳವನ್ನು ಕಿರಿದು ಮಾಡಿದ್ದಾರೆ.
ಪರಿಣಾಮ ಹಳ್ಳಕ್ಕೆ ಬರುವ ನೀರು ಕೂಡ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನುಗ್ಗಿ ಇಡೀ ಕೇಂದ್ರವೇ ಜಲಾವೃತವಾಗುತ್ತದೆ. ಇದರಿಂದ ವಿದ್ಯುತ ಪ್ರಸರಣ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಗೆ ವಿದ್ಯುತ್ ಪ್ರಸರಣ ಉಪ ಕೇಂದ್ರ ಜಲಾವೃತಗೊಂಡ ಪರಿಣಾಮ ಗ್ರಾಮದಲ್ಲಿ ಎರಡು ದಿನ ವಿದ್ಯುತ್ ಕೈಕೊಟ್ಟು ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಯಿತು.
ರಕ್ಷಣೆ ಗೋಡೆ ನಿರ್ಮಾಣಕ್ಕೆ ಅನುದಾನ: ವಿದ್ಯುತ್ ಪ್ರಸರಣ ಉಪ ಕೇಂದ್ರಕ್ಕೆ ನೀರು ನುಗ್ಗದಂತೆ ತಡೆಯಲು ಕೇಂದ್ರದ ಸುತ್ತ ರಕ್ಷಣೆ ಗೋಡೆ ನಿರ್ಮಿಸಲು ಸರಕಾರ 20 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಆದರೆ ಗುತ್ತಿಗೆದಾರರು ಕೆಲಸ ಆರಂಭಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೂಡಲೇ ಸಂಬಂ ಧಿಸಿದ ಅದಿ ಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮೇಲ್ದರ್ಜೆಗೆ ಏರಿಕೆ: ಸದಾ ಅಪಾಯದ ಅಂಚಿನಲ್ಲಿರುವ 33 ಕೆವಿ ಸಾಮರ್ಥ್ಯದ ಜಾಲಹಳ್ಳಿ ವಿದ್ಯುತ್ ಪ್ರಸರಣ ಉಪ ಕೇಂದ್ರವನ್ನು 110 ಕೆವಿ ಸಾಮರ್ಥ್ಯಕ್ಕೆ ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ. ಜೆಸ್ಕಾಂ ಅ ಧಿಕಾರಿಗಳು ಸುರಕ್ಷಿತ ಸ್ಥಳವನ್ನು ಗುರುತಿಸಬೇಕು. 33 ಕೆವಿ ಸ್ಟೇಷನ್‌ನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.