ಜಮಖಂಡಿಯಲ್ಲಿ ಮಾವಾ ಮಾರಾಟ ಜೋರು?
Team Udayavani, Nov 14, 2019, 3:19 PM IST
ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.
ಮಾವಾ ದಂಧೆಕೋರರು ತಮ್ಮ ಮನೆಗಳಲ್ಲಿ ಮಷೀನ್‌ಗಳ ಮೂಲಕ ಸಿದ್ಧಪಡಿಸಿದ ಮಾವಾ ಪಾಕೆಟ್‌ಗಳನ್ನು ಕಳೆದ 15 ದಿನಗಳಿಂದ ಗುಪ್ತವಾಗಿ ಮಾರಾಟ ನಡೆಸುತ್ತಿದ್ದಾರೆ. ಮೊಬೈಲ್ ಮೂಲಕ ಮಾವಾ ದಂಧೆ ಜೋರಾಗಿದ್ದು, ದಿನದಿಂದ ದಿನಕ್ಕೆ ಸಂಚಾರಿ ಮಾವಾ ಮಾರಾಟಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಪೊಲೀಸ್ ಠಾಣೆಗೆ ನೂತನವಾಗಿ ಪಿಎಸ್‌ಐ ಮತ್ತು ಸಿಪಿಐ ನಿಯೋಜನೆಗೊಂಡ ದಿನದಿಂದ ಒಂದು ವಾರದವರೆಗೆ ಮಾತ್ರ ಮಾವಾ ಮಾರಾಟ ದಂಧೆಗಳಿಗೆ ಕಡಿವಾಣ ಬೀಳುತ್ತದೆ.
ಮಾವಾ ಮಾರಾಟ ಅಂಗಡಿಗಳು ಒಂದು ವಾರ ಸಾಮಾನ್ಯವಾಗಿ ಬಂದ್ ಆಗಿರುತ್ತದೆ. ಪೊಲೀಸ್ ಇಲಾಖೆ ಕಣ್ಣುತಪ್ಪಿಸಿ ಮಾವಾ ಮಾರಾಟ ದಂಧೆ ನಡೆಯುತ್ತಿದೆ. ಮಾರಾಟಗಾರರು ಬೇಕಾದವರಿಗೆ ಮಾತ್ರ ಮಾವಾ ನೀಡುತ್ತಿದ್ದಾರೆ. ಬೇರೆಯವರು ಕೇಳಿದರೆ ನೀಡುವುದಿಲ್ಲ, ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಾರೆ.
ನಗರಕ್ಕೆ ಹೊಸದಾಗಿ ಪೊಲೀಸ್ ಅಧಿಕಾರಿಗಳು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಕ್ರಮ ಮಾವಾ ಮಾರಾಟ ದಂಧೆ ಬಂದ್ ಮಾಡಿಸುವುದು ಸಾಮಾನ್ಯವಾಗಿದೆ.ನಂತರ ಮೊದಲಿನಂತೆ ವ್ಯಾಪಾರ ವಹಿವಾಟ ನಡೆಸುವುದು ಮಾಮೂಲಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.