ಶಿಕ್ಷಣಕ್ಕೆ ಫುಲೆ ಕೊಡುಗೆ ಅಪಾರ: ನಿಜಲಿಂಗ
ಎಲ್ಲ ಜನಾಂಗಕ್ಕೂ ಶಿಕ್ಷಣ ಕೊಟ್ಟರು ವಿಜ್ಞಾನ ಒಪ್ಪಿ -ಅಪ್ಪಿಕೊಳ್ಳೋ ಣ
Team Udayavani, Sep 26, 2019, 11:14 AM IST
ಜೇವರ್ಗಿ: ಶಿಕ್ಷಣ ವ್ಯವಸ್ಥೆಗೆ ಸಾವಿತ್ರಿಬಾಯಿ ಫುಲೆ ದಂಪತಿ ಕೊಡುಗೆ ಅಪಾರವಾಗಿದೆ ಎಂದು ಸೊನ್ನ ಎಸ್‌ಜಿಎಸ್‌ವಿ ಪಿಯು ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಅಕ್ಷರದವ್ವ ಸಾವಿತ್ರಿ ಬಾ ಫುಲೆ ಅವರಿಗೆ ನಮನ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಗಣಪತಿ, ಸರಸ್ವತಿ ಮಾಡದ ಸಾಧನೆ, ಕ್ರಾಂತಿಯನ್ನು ಅಕ್ಷರದವ್ವ ಫುಲೆ ಮಾಡಿದ್ದಾರೆ. ಸಾವಿತ್ರಿ ಬಾಯಿ ಫುಲೆ ದೇಶವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದರು. ಸಮಾಜದಲ್ಲಿ ಸಾಕಷ್ಟು ಕಷ್ಟ-ನೋವನ್ನು ಅನುಭವಿಸಿದ ಫುಲೆ ಎದೆಗುಂದದೆ ಎಲ್ಲ ಜಾತಿ, ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಅಪಾರ ಶ್ರಮಪಟ್ಟರು. ಆದರೆ ನಾವು ಅವರನ್ನು ಮರೆತು ಬೇರೆ ಯಾರನ್ನೋ ಪೂಜಿಸುತ್ತಿರುವುದು ದುರ್ದೈವದ ಸಂಗತಿ ಎಂದರು.
ಅನ್ನ, ಶಿಕ್ಷಣ, ಉದ್ಯೋಗ ಕೊಟ್ಟವರನ್ನು ಮರೆತರೆ ಹೆತ್ತ ತಂದೆ-ತಾಯಿಯನ್ನು ಮರೆತಂತೆ. ಆದರೆ ನಾವುಗಳು ವಿಜ್ಞಾನವನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವ ಬದಲು ಅವಮಾನ ಮಾಡುತ್ತಿದ್ದೇವೆ. ವಿಜ್ಞಾನಿಗಳು ಅನಾಚಾರಕ್ಕೆ ನಿಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಚಿಗರಳ್ಳಿ ಮಠದ ಸಿದ್ದಕಬೀರ ಸ್ವಾಮೀಜಿ ಸಾನ್ನಿಧ್ಯ, ವೇದಿಕೆ ತಾಲೂಕು ಸಂಚಾಲಕ ಶಿವಕುಮಾರ ಗೋಲಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ
ವಿಭಾಗೀಯ ಸಂಚಾಲಕ ಹಣಮಂತ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪ ತಹಶೀಲ್ದಾರ್ ಬಸವರಾಜ ರಕ್ಕಸಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಡಾ| ಸಿದ್ದು ಪಾಟೀಲ, ಪ್ರಾಂಶುಪಾಲ ಬಸವರಾಜ ಕೊಂಬಿನ್, ಹೈಯಾಳಪ್ಪ ಗಂಗಾಕರ, ಶಿವಕುಮಾರ ಕಲ್ಲಾ, ಶ್ರೀಮಂತ ಧನ್ನಕರ್, ಮಲ್ಲಿಕಾರ್ಜುನ ಕುಳಗೇರಿ, ರವಿ ಕುಳಗೇರಾ, ಮಲ್ಲಿಕಾರ್ಜುನ ಮಳ್ಳಿ, ಪ್ರಭಾಕರ ಸಾಗರ, ಪೀರಪ್ಪ ರೇವನೂರ ಆಗಮಿಸಿದ್ದರು.
ಲಿಂಗಸೂಗೂರ ಬಿಆರ್‌ಸಿ ಹಣಮಂತ ಕುಳಗೇರಿ, ದಾವಣಗೆರೆ ವಿವಿಯ ಸಹ ಪ್ರಾಧ್ಯಾಪಕ ಡಾ| ಸಿದ್ದು ಕಕ್ಕಳಮೇಲಿ, ಡಾ| ಅಶೋಕ ದೊಡ್ಮನಿ, ನಿವೃತ್ತ ಶಿಕ್ಷಕ ಬಸಣ್ಣ ಬಬಲಾದ ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.