ದನದ ಕೊಟ್ಟಿಗೆಯಂತಾದ ಡಿಸಿಸಿ ಬ್ಯಾಂಕ್
•ರೈತರ ಪರದಾಟ-ದಲ್ಲಾಳಿಗಳ ಹಾವಳಿ •ಇಕ್ಕಟ್ಟಿನ ಜಾಗದಲ್ಲಿ ಸಿಬ್ಬಂದಿ ಹೈರಾಣ •ಬದಲಾಗಬಲ್ಲದೇ ಚಿತ್ರಣ!
Team Udayavani, Aug 23, 2019, 10:03 AM IST
ಜೇವರ್ಗಿ: ಡಿಸಿಸಿ ಬ್ಯಾಂಕ್ ಎದುರು ನೀರಿನ ರಾಡಿಯಲ್ಲೇ ಕುಳಿತಿರುವ ರೈತ ಮಹಿಳೆಯರು.
ವಿಜಯಕುಮಾರ ಎಸ್. ಕಲ್ಲಾ
ಜೇವರ್ಗಿ: ಪಟ್ಟಣದ ಜಿಲ್ಲಾ ಪಂಚಾಯತ್ ಕಚೇರಿ ಎದುರಿಗಿರುವ ಡಿಸಿಸಿ ಬ್ಯಾಂಕ್ ಸ್ಥಳದ ಅಭಾವ, ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಬರುವ ರೈತರಿಗೆ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಇಲ್ಲದೇ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ.
ತಾಲೂಕಿನ ಸಾವಿರಾರು ರೈತರ ಖಾತೆಗಳಿರುವ ಪಟ್ಟಣದ ಕಲಬುರಗಿ -ಯಾದಗಿರಿ ಜಿಲ್ಲಾ ಸಹಕಾರ ಸಂಘದ ತಾಲೂಕು ಶಾಖೆ (ಡಿಸಿಸಿ ಬ್ಯಾಂಕ್) ಯನ್ನು ಕಳೆದ ಹತ್ತಾರು ವರ್ಷಗಳಿಂದ 15×15 ಅಡಿ ಜಾಗದಲ್ಲಿ ನಡೆಸಲಾಗುತ್ತಿದೆ.
ನಿತ್ಯ ಶಾಖೆಗೆ ಬರುವ ರೈತರು, ಮಹಿಳೆಯರು, ವೃದ್ಧರು, ಸಾರ್ವಜನಿಕರು ಒಂದಿಲ್ಲೊಂದು ಸಮಸ್ಯೆ ಎರುರಿಸು ವಂತಾಗಿದೆ. ಇಕ್ಕಟಾಗಿರುವ ಸ್ಥಳದಲ್ಲಿ ನಿತ್ಯ ಹಣಕಾಸಿನ ವ್ಯವಹಾರ ನಡೆಸಲು ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಈ ಶಾಖೆಯಲ್ಲಿ ವ್ಯವಸ್ಥಾಪಕ, ಕ್ಯಾಶಿಯರ್, ಕ್ಲರ್ಕ್, ಫಿಲ್ಡ್ ಆಫೀಸರ್, ಸೇವಕ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಮಹಿಳಾ ಶೌಚಾಲಯ, ಬೆಳಕಿನ ವ್ಯವಸ್ಥೆ ಹೀಗೆ ಹಲವಾರು ಸಮಸ್ಯೆಗಳ ನಡುವೆ ಒಲ್ಲದ ಮನಸ್ಸಿನಿಂದ ಸಿಬ್ಬಂದಿ ಕೆಲಸ ಮಾಡಬೇಕಿದೆ. ಮಳೆಗಾಲದಲ್ಲಿ ಮಳೆ ನೀರು ಶಾಖೆ ಒಳಗೆ ನುಗ್ಗಿ ವಿದ್ಯುತ್ ಶಾರ್ಟ್ ಸರ್ಕ್ನೂಟ್ ಸಂಭವಿಸಿ ಕಂಪ್ಯೂಟರ್, ಫ್ಯಾನ್ ಸುಟ್ಟು ಹೋಗಿರುವಂತಹ ಘಟನೆ ಕೂಡ ನಡೆದಿವೆ. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ಪರಿಸರದ ಕರೆಗೆ ಬ್ಯಾಂಕಿನ ಸಿಬ್ಬಂದಿಗೆ ಗಿಡಗಳ ಕಂಟಿಗಳೇ ಆಸರೆಯಾಗಿದೆ. ಶೌಚಾಲಯ ಇದ್ದರೂ ಅನೇಕ ವರ್ಷಗಳಿಂದ ಬೀಗವನ್ನೇ ತೆರೆದಿಲ್ಲ. ಇಕ್ಕಟಾಗಿರುವ ಸ್ಥಳದ ಈ ಬ್ಯಾಂಕಿಗೆ ನಿತ್ಯ ನೂರಾರು ರೈತರು ಬರುವುದರಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಕೆಲಸ ಮುಗಿಸಿಕೊಡು ಹೋಗಬೇಕು. ಅನೇಕ ಸಲ ಹಣ ಕಳ್ಳತನವಾಗಿರುವ ಘಟನೆಗಳು ನಡೆದಿವೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಖೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರೂ ಯಾರೂ ಕ್ಯಾರೆ ಎಂದಿಲ್ಲ. ಕಳೆದ ಒಂದು ವರ್ಷದ ಹಿಂದೆ ಕರ್ನಾಟಕ ಬ್ಯಾಂಕ್ ಹತ್ತಿರದ ಕಟ್ಟಡವೊಂದಕ್ಕೆ ಬ್ಯಾಂಕ್‌ನ್ನು ಸ್ಥಳಾಂತರಿಸಲಾಗಿತ್ತು. ಆದರೆ ಅಕ್ಕ-ಪಕ್ಕದ ಮಳಿಗೆ ಮಾಲೀಕರು ತಕರಾರು ಎತ್ತಿದ ಪರಿಣಾಮ ಮರಳಿ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಶಾಖೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುವುದರಿಂದ ಹಣ ಎಣಿಕೆ ಮಶೀನ್ ಇಲ್ಲದೇ ಕ್ಯಾಶಿಯರ್ ರಾತ್ರಿಯವರೆಗೂ ಕರ್ತವ್ಯ ನಿರ್ವಹಿಸಬೇಕಾಗಿದೆ. 10ಕ್ಕೂ ಹೆಚ್ಚು ದಲ್ಲಾಳಿಗಳು ಬ್ಯಾಂಕಿನ ಬಳಿ ರೈತರನ್ನು ವಂಚಿಸುತ್ತಿದ್ದರೂ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಬದಲು ದಲ್ಲಾಳಿಗಳು ವ್ಯವಹಾರಕ್ಕೆ ಆಗಮಿಸಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಪಡಿಸುತ್ತಿದ್ದಾರೆ ಎನ್ನು ಆರೋಪ ಕೇಳಿಬರುತ್ತಿದೆ.
ಈ ಹಿಂದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಈ ಶಾಖೆಯ ಮೂವರನ್ನು ಅಮಾನತು ಮಾಡಲಾಗಿತ್ತು. ಕೂಡಲೇ ಸಂಬಂಧಿಸಿದವರು ರೈತರ, ಸಿಬ್ಬಂದಿಯ ಹಿತದೃಷ್ಟಿಯಿಂದ ಬೇರೆ ಕಟ್ಟಡಕ್ಕೆ ಶಾಖೆ ಸ್ಥಳಾಂತರ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿಸಿಸಿ ಬ್ಯಾಂಕ್‌ಶಾಖೆಯಲ್ಲಿ ನಿತ್ಯ ರೈತರಿಗೆ, ಮಹಿಳೆಯರಿಗೆ, ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಕೂಡಲೇ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ, ಮೂಲ ಸೌಕರ್ಯ ಕಲ್ಪಿಸಬೇಕು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಆ. 23 ರಂದು ಹೋರಾಟ ಹಮ್ಮಿಕೊಳ್ಳಲಾಗುವುದು.
•ವಿಶ್ವಾರಾಧ್ಯ ಬಡಿಗೇರ ಗಂವ್ಹಾರ,
ಅಧ್ಯಕ್ಷರು ರೈತ ಸಂಘ, ಹಸಿರು ಸೇನೆ ತಾಲೂಕು ಘಟಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.