ಕೋರೆಗಾಂವ ಯುದ್ಧ ಸ್ವಾಭಿಮಾನದ ಪ್ರತೀಕ
Team Udayavani, Jan 2, 2020, 5:18 PM IST
ಜೇವರ್ಗಿ: ದೇಶದ ಇತಿಹಾಸದಲ್ಲಿ ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಯುದ್ಧ ನಡೆದಿವೆ ಆದರೆ ಸ್ವಾಭಿಮಾನಕ್ಕಾಗಿ ನಡೆದಿದ್ದು ಭೀಮಾ ಕೋರೆಗಾಂವ ಯುದ್ಧ ಎಂದು ಸೊನ್ನ ಎಸ್‌ಜಿಎಸ್‌ವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ 202ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು. ಭೀಮಾ ಕೋರೆಗಾಂವ ದಲಿತರ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿದೆ. ಪೇಶ್ವೆಗಳು ಆಚರಣೆ ಮಾಡುತ್ತಿದ್ದ ಅಸ್ಪ್ರಶ್ಯತೆಯ ವಿರುದ್ದದ ಹೋರಾಟವೇ ಮಹಾರ್ ದಂಗೆ ಎನ್ನಲಾಗುತ್ತಿದ್ದು, ಇದು ದಲಿತರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿದೆ. ಇದು ಯಾವುದೇ ಸಾಮ್ರಾಜ್ಯದ ವಿರುದ್ಧ ನಡೆದ ಹೋರಾಟವಲ್ಲ. ಒಂದು ವ್ಯವಸ್ಥೆಯಿಂದ ಬೇಸತ್ತ ಜನರ ಸ್ವಾಭಿಮಾನದ ದಂಗೆಯಾಗಿದೆ ಎಂದರು.
500 ಜನ ಮಹಾರ್ ಸೈನಿಕರು, ಪೇಶ್ವೆಗಳು, 20 ಸಾವಿರ ಅಶ್ವದಳ, ಎಂಟು ಸಾವಿರ ಕಾಲ್ದಳಗಳನ್ನು ಹೊಂದಿದ ದೊಡ್ಡ ಸೈನ್ಯದ ವಿರುದ್ಧ ಹೋರಾಡಿ ಜಯಿಸಿದರು. ಅಂದು ನಡೆದ ಘಟನೆ ಸವಿನೆನಪಿಗಾಗಿ ಬ್ರಿಟಿಷರು ಮಹಾರಾಷ್ಟ್ರದ ಕೋರೆಗಾಂವದಲ್ಲಿ ವಿಜಯಸ್ಥಂಭ ನಿರ್ಮಿಸಿದ್ದರು. ಅಂತಹ ಇತಿಹಾಸವನ್ನು ಅರಿತ ಡಾ| ಅಂಬೇಡ್ಕರ್ ಅವರು ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಬಂದು ಹೋಗುತ್ತಿದ್ದರು.
ದಲಿತರ ಸ್ವಾಭಿಮಾನದ ಸಂಕೇತವಾದ ಈ ಸ್ಥಳಕ್ಕೆ ಇಂದು ಲಕ್ಷಾಂತರ ಜನರು ಸೇರುತ್ತಿರುವುದು ಸಂತಸದ ವಿಷಯವಾಗಿದೆ. ದಲಿತರು ತಮ್ಮ ಇತಿಹಾಸವನ್ನು ತಾವೇ ರಚಿಸಬೇಕಾದ ಅನಿವಾರ್ಯತೆ ಇದೆ. ಇವತ್ತಿಗೂ ಸಹ ಮಹಾರ್ ಸೈನ್ಯದ ಶೌರ್ಯ ಯಾವ ಪಠ್ಯಪುಸ್ತಕದಲ್ಲಿಯೂ ದಾಖಲಾಗದಿರುವುದು ದುರಂತ ಎಂದರು.
ನನ್ನ ಜನಕ್ಕೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ, ದೇಶ ಯಾವತ್ತೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರಲಿಲ್ಲ ಎಂದು ಬಾಬಾ ಸಾಹೇಬರು ಹೇಳಿದ್ದರು. ಡಾ| ಅಂಬೇಡ್ಕರ್ ಅವರನ್ನು ದಲಿತರಿಗೆ
ಮಾತ್ರ ಸೀಮಿತ ಮಾಡುತ್ತಿರುವುದು ಸರಿಯಲ್ಲ. ಅವರೊಬ್ಬ ರಾಷ್ಟ್ರದ ನಾಯಕ. ಈ ದೇಶದ ದಲಿತರಿಗೆ 18 ಪ್ರತಿಶತ ಮೀಸಲಾತಿ ನೀಡಿದರೆ, ಹಿಂದುಳಿದ ವರ್ಗಗಳಿಗೆ 32 ಪ್ರತಿಶತ ನೀಡಿದ್ದಾರೆ.
ಮುಖ್ಯವಾಗಿ ಈ ದೇಶದ ಮಹಿಳೆಯರಿಗೆ ಬದುಕುವ ಹಕ್ಕು ನೀಡಿದ್ದು ಡಾ| ಅಂಬೇಡ್ಕರ್ ಎಂದರು. ಡಾ| ಅಶೋಕ ದೊಡ್ಮನಿ
ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕವಾಡ, ಶಾಂತಪ್ಪ ಯಲಗೋಡ, ಕೆರೆಪ್ಪ ಹಿಪ್ಪರಗಿ, ಜಗದೇವಿ ಜಟ್ನಾಕರ, ಶರಣಪ್ಪ ಹೊಸಮನಿ, ಬಸಣ್ಣ ಬಬಲಾದ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಭೂತಾಳಿ ಹೆಗಡೆ, ಬಸವರಾಜ ಹೆಗಡೆ, ಭೀಮಾಶಂಕರ ಹರನಾಳ, ಬಸಣ್ಣ ಸರಕಾರ, ಭಾಗಣ್ಣ ಕೊಳಕೂರ, ಸಿದ್ದಪ್ಪ ಆಲೂರ, ಶಿವಕುಮಾರ ಗೋಲಾ, ವಿಶ್ವರಾಧ್ಯ ಮಾಯಿ, ಮಿಲಿಂದ ಸಾಗರ, ವಿಶ್ವ ಆಲೂರ, ಮೌನೇಶ ಹಂಗರಗಿ, ಜೈಭೀಂ ಸಿದ್ನಾಳ, ವಿಶಾಲ ಕುಲಾಲಿ ಹಾಗೂ ಇತರರು ಇದ್ದರು. ಬಿವಿಎಸ್ ವಿದ್ಯಾರ್ಥಿಗಳು ಸ್ವಾಗತಿಸಿದರು, ಶರಣು ಬಡಿಗೇರ ನಿರೂಪಿಸಿದರು, ಶ್ರೀಹರಿ ಕರಕಿಹಳ್ಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.