ಗ್ರಾಮೀಣ ಜನರಲ್ಲಿ ಡಿಜಿಟಲ್ ಅರಿವು ಮೂಡಿಸಿ
Team Udayavani, Jan 6, 2020, 3:43 PM IST
ಕಡೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯಧನ ಫಲಾನುಭವಿಗಳಿಗೆ ಹಾಗೂ ರೈತರಿಗೆ ನೇರವಾಗಿ ತಮ್ಮ ಖಾತೆಗಳಿಗೆ ಜಮಾ ಆಗುವುದರಿಂದ ಗ್ರಾಮೀಣ ಭಾಗದ ಜನತೆ ಹಾಗೂ ರೈತರು ಡಿಜಿಟಲ್ ಬಗ್ಗೆ ಜಾಗೃತಗೊಳ್ಳಬೇಕಿದೆ ಹಾಗೂ ಇದರ ಬಗ್ಗೆ ಅರಿವು ಮೂಡಬೇಕಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಅರಿವಿನ ಮನೆ ಡಿಜಿಟಲ್ ಪೇಮೆಂಟ್ ಪ್ರಮೋಷನ್ ಫೌಂಡೇಶನ್ ವತಿಯಿಂದ ಶನಿವಾರ
ತಾಲೂಕಿನ ಗರ್ಜೆ ಗ್ರಾಮದಲ್ಲಿ ಎಟಿಎಂ ಹಾಗೂ ಕ್ಯಾಶ್ ಡಿಪಾಜಿಟ್ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಲ್ಲಿ ಎಟಿಎಂ ಸ್ಥಾಪನೆ ಮಾಡುವುದರ ಮೂಲಕ ಚಾಲನೆ ಮಾಡಲಾಗಿದ್ದು. ಗ್ರಾಮೀಣ ಭಾಗದ ಜನತೆ ಮತ್ತು ರೈತರು ಇದರ ಸದುಪಯೋಗವನ್ನು ಪಡೆಯಬೇಕಿದೆ. ಬ್ಯಾಂಕಿನ ವ್ಯವಸ್ಥೆಯನ್ನು ಸರಳವಾದ ವಿಧಾನಗಳು ನಿಮ್ಮ ಮನೆಯ ಬಾಗಿಲಿಗೆ ತರಲಾಗಿದ್ದು. ಇದರ ಬಗ್ಗೆ ತಾವುಗಳು ಅರಿವು ಮೂಡಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.
ತಮ್ಮಲ್ಲಿರುವ ಹಣವನ್ನು ಮನೆಯಲ್ಲಿಯೇ ಇಟ್ಟುಕೊಳ್ಳದೇ ಬ್ಯಾಂಕಿನಲ್ಲಿ ವ್ಯವಹಾರ ವಹಿವಾಟು ನಡೆಸಿದಾಗ ಆರ್ಥಿಕ ವ್ಯವಸ್ಥೆಯ ಬಗ್ಗೆ ಜಾಗೃತಗೊಳ್ಳಲು ಸಹಕಾರಿಯಾಗಲಿದೆ. ಯಾವುದೇ ಸವಲತ್ತುಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆಯ ಬಾಗಿಲಿಗೆ ಬರುವಂತಾಗಿದ್ದು. ಇದರ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಲು ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದರ ಮೂಲಕ ಬ್ಯಾಂಕಿಕ್ ವ್ಯವಸ್ಥೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ ಎಂದರು.
ಅರಿವಿನ ಮನೆ ಫೌಂಡೇಶನ್ ಕಾರ್ಯದರ್ಶಿ ಡಾ.ಸಿ.ಜೆ. ಶಶಿಧರ್ ಮಾತನಾಡಿ, ಈ ಆರ್ಥಿಕ ವರ್ಷದಲ್ಲಿ ಫೌಂಡೇಶನ್ ವತಿಯಿಂದ ಜಿಲ್ಲಾದ್ಯಂತ ಸುಮಾರು 50 ಎಟಿಎಂಗಳ
ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಪ್ರಥಮವಾಗಿ ಗರ್ಜೆ ಗ್ರಾಮದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ
ಕೇಂದ್ರಗಳಲ್ಲಿ ಘಟಕಗಳನ್ನು ತೆರೆಯಲಾಗುವುದು ಎಂದರು.
ಈ ಎಟಿಎಂ ಮೂಲಕ ಯಾವುದೇ ಬ್ಯಾಂಕಿಗೆ ಹಣ ಕಟ್ಟಬಹುದಾಗಿದೆ ಹಾಗೂ ಹಣ ತೆಗೆಯಬಹುದಾಗಿದೆ. ಇದಕ್ಕೆ ಆರ್‌ಬಿಐ ಮಾನ್ಯತೆ ಪಡೆದಿದೆ. ಎಜಿಎಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಜ.20ರಂದು ಸಿದ್ಧಗಂಗಾ ಶ್ರೀಗಳ ಮೊದಲನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಫೌಂಡೇಶನ್ ವತಿಯಿಂದ ನೆರವೇರಿಸಲಾಗುವುದು. ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿ.ಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್, ಅರಿವಿನ ಮನೆ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಸಿ.ಎಂ. ಮೋಹನ್‌ಕುಮಾರ್, ಅರಿವಿನ ಮನೆ ಡಿಜಿಟಲ್ ಪೇಮೇಂಟ್ ಪ್ರಮೋಷನ್ ಅಧ್ಯಕ್ಷ ಎಚ್.ಎಂ. ಕಾಶಿನಾಥ್, ಅರಿವಿನ ಮನೆ ನಿರ್ದೇಶಕರಾದ ಎಂ.ಎಚ್. ಪ್ರಕಾಶ್ ಮೂರ್ತಿ, ಜಿ.ಕೆ. ಮರುಳಪ್ಪ, ಈಶ್ವರಪ್ಪ, ಎಸ್ .ಬಿ. ಬಸವರಾಜ್, ಶಿವಕುಮಾರ್, ತಿಮ್ಮಪ್ಪ, ಮಹೇಶ್ವರಪ್ಪ, ಉಮಾರಾಣಿ, ರವಿಕುಮಾರ್, ರಕ್ಷಿತ್, ದಿಲೀಪ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.